ಭದ್ರೆಗೆ ಒಳಹರಿವು ಕಡಿಮೆ ಹೊರಹರಿವು ಹೆಚ್ಚಳ




ಸುದ್ದಿಲೈವ್/ಶಿವಮೊಗ್ಗ


ಮಳೆಯ ಅರ್ಭಟ ಕಡಿಮೆಯಾದ ಪರಿಣಾಮ ಜಿಲ್ಲಿಯಲ್ಲಿ ಪ್ರಮುಖ ನದಿಗಳ ಒಳಹರಿವು ತಗ್ಗಿದೆ. ಇಂದು ಪ್ರಮುಖ ನದಿಗಳ ಜಲಾಶಯಗಳಲ್ಲಿ ಒಳಹರಿವು ಕಡಿಮೆಯಾಗಿದೆ. 


ತುಂಗ ನದಿಗೆ ನಿನ್ನೆ ಸಂಜೆಗೆ 38 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಇಂದು ಬೆಳಿಗ್ಗೆ  43013 ಕ್ಯೂಸೆಕ್ ನೀರು ಹರಿದು ಬರುತ್ತಿವೆ. ನದಿಗೆ 21 ಗೇಟ್ ಗಳ ಮೂಲಕ 41900 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಉಳಿದ ಕ್ಯೂಸೆಕ್ ನೀರನ್ನ ಚಾನೆಲ್ ಗಳಿಗೆ ನೀರು ಹರಿಸಲಾಗುತ್ತಿದೆ. 


ಭದ್ರೆಗೂ ಒಳಹರಿವು ತಗ್ಗಿದೆ. ಆದರೆ ಜಲಾಶಯದಿಂದ ಹೊರಹರಿವನ್ನ ಹೆಚ್ಚಿಗೆ ಮಾಡಲಾಗಿದೆ. ಜಲಾಶಯಕ್ಕೆ 38870 ಕ್ಯೂಸೆಕ್ ಒಳಹರಿವಿದ್ದು, ಭದ್ರ ಎಡ ಮತ್ತು ಬಲದಂಡೆ, ಸ್ಪಿಲ್ ವೇ ಮೂಲಕ 56430 ಕ್ಯೂಸೆಕ್ ಗಳನ್ನ ಹರಿಸಲಾಗುತ್ತಿದೆ. ನಾಲ್ಕು ಗೇಟ್ ಮೂಲಕ ನದಿಗೆ 52417 ಕ್ಯೂಸೆಕ್ ನೀರು ಹರಿಸಾಗುತ್ತಿದೆ. ಮಳೆ ಇರುವುದರಿಂದ ಈ ರೀತಿ ಜಲಾಶಯದಲ್ಲಿ ಹೊರಹರಿವು ಹೆಚ್ಚಿಗೆ ಮಾಡಲಾಗಿದ್ದು 180 ಅಡಿಯವರೆಗೆ ಜಲಾಶಯದಲ್ಲಿ ಪ್ರತಿದಿನ ಒಳಹರಿವು ಕಡಿಮೆ ಇದ್ದರೂ ಹೊರಹರಿವನ್ನ ಹೆಚ್ಚಿಗೆ ಪ್ರಮಾಣದಲ್ಲಿ ಬಿಡಲಾಗುತ್ತಿದೆ.  



ಲಿಂಗನಮಕ್ಕಿಯಲ್ಲಿ ನಿನ್ನೆ ರಾತ್ರಿ ಇದ್ದ ಒಳಹರಿವು ಇಂದು ಬೆಳಿಗ್ಗೆ ಅಷ್ಟು ಹೊತ್ತಿಗೆ ಕಡಿಮೆಯಾಗಿದೆ. ಲಿಂಗನಮಕ್ಕಿಗೆ ನಿನ್ನೆ ರಾತ್ರಿ 53 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿತ್ತು. ಇಂದು 51961 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1819 ಸಾಮರ್ಥ್ಯ ಜಲಾಶಯದಲ್ಲಿ ಇಂದು 1815 ಅಡಿ ನೀರು ಸಂಗ್ರಹವಾಗಿದೆ. 


ನಿನ್ನೆ 1814 ಅಡಿ ಇತ್ತು  ಇಂದು 1815 ಅಡಿ ನೀರು ಸಂಗ್ರಹವಾಗಿದೆ. 151.64 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಇಂದು 138.33 ಟಿಎಂಸಿ ನೀರು ಸಂಗ್ರಹವಾಗಿದೆ. ಕ್ರಸ್ಟ್ ಗೇಟು, ಸ್ಪಿಲ್ ವೇ, ಸ್ಲೂಯಿಸ್ ಮತ್ತು ಪೆನ್ ಸ್ಟಾಕ್ ಮೂಲಕ ಒಟ್ಟು 16913 ಕ್ಯೂಸೆಕ್ ನೀರನ್ನ ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಈ ದಿನಕ್ಕೆ ಜಲಾಶಯದಲ್ಲಿ 1788.25 ಅಡಿ ನೀರು ಸಂಗ್ರಹವಾಗಿತ್ತು.


ಇದನ್ನೂ ಓದಿ- https://www.suddilive.in/2024/08/9.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close