ಸಾಗರ ಯುವ ಕಾಂಗ್ರೆಸ್ ಹೊಸ ಭಾಷ್ಯ ಬರೆಯಲಿ-ಬ್ರಾಹ್ಮಣರನ್ನೂ ಪುರಸ್ಕರಿಸಲಿ

 


ಸುದ್ದಿಲೈವ್/ಸಾಗರ 


ರಾಜ್ಯಾದ್ಯಂತ ನಡೆಯಲಿರುವ ತಾಲ್ಲೂಕು ಯುವ ಕಾಂಗ್ರೇಸ್ ಘಟಕದ ಚುನಾವಣೆ ಇನ್ನೇನು ಒಂದು ಒಂದೂವರೆ ತಿಂಗಳಲ್ಲಿ ನಡೆಯಲಿದೆ.


ಇದಕ್ಕೆ ಈಗಾಗಲೇ ಸಾಗರ ತಾಲ್ಲೂಕಿನ ಸ್ಪರ್ಧಿಗಳಾಗಿ ಇರುವವರು ಮಂಜುನಾಥ ಬೆಳಲಮಕ್ಕಿ, ಸಿ.ಎಂ. ಚಿನ್ಮಯ, ಸದ್ದಾಂ ಹುಸೇನ್ ಮತ್ತು ಕಿರಣ್ ದೊಡ್ಮನೆ, ಸದ್ದಾಂ‌ದೊಡ್ಮನೆ ಐದು ಜನರು ಕಾಂಗ್ರೇಸ್ ಪಕ್ಷಕ್ಕೆ ‌ಸಕ್ರಿಯ ಕಾರ್ಯಕರ್ತರು. ಎಂದೂ ಸಹ ತೆರೆಮರೆಯಲ್ಲೇ ಪಕ್ಷದ ಕೆಲಸ ಮಾಡುತ್ತ ಬಂದಿದ್ದಾರೆ.


ಈಗೇಕೆ ಈ ವಿಷಯ....ಇದರಲ್ಲೇ ಇರುವುದು ರಾಜಕೀಯ ದಾಳ ಉರುಳಿಸುವ ತಂತ್ರಗಾರಿಕೆ. ಈ ಹಿಂದೆ ಸಾಗರದಲ್ಲಿ ಕಾಂಗ್ರೆಸ್ ಶಾಸಕರು ಇಲ್ಲದಿದ್ದ ಸಂದರ್ಭದಲ್ಲಿ ಈಗಿನ ಶಾಸಕರ ಕುಟುಂಬದವರಾದ ಅಶೋಕ ಬೇಳೂರು ಯುವ ಕಾಂಗ್ರೇಸ್ ಅಧ್ಯಕ್ಷ ಆಗಿದ್ದರು. ‌ಆ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಗ್ರಾಮಾಂತರ ಭಾಗದಲ್ಲಿ ಹಗಲಿರುಳು ತನ್ನದೇ ರೀತಿಯಲ್ಲಿ ಹಲವರ ಸಹಕಾರದಿಂದ ಓಡಾಟ ಮಾಡಿ ಪಕ್ಷ ಕಟ್ಟಿದರು. ಹೆಚ್ಚಿಗೆ ಪ್ರಚಾರ ಪಡೆಯದೇ ಇದ್ದು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಹುತೇಕ ಕಾಂಗ್ರೇಸ್ ಅಭ್ಯರ್ಥಿಗಳು ಗೆದ್ದಿದ್ದರು. ಟೌನ್'ಗೆ ಕಾಲಿಡುವಲ್ಲಿ ಸ್ವಲ್ಪ ನಿಧಾನಿಸಿದರೆಂಬ ಮಾತು ಇದೆ.


ಈಗ ಮತ್ತೆ ಅದೇ ಚುನಾವಣೆ ಹೊಸ್ತಿಲಲ್ಲಿ ಇದೆ. ಮತ್ತೆ ಮಂಜುನಾಥ ಬೆಳಲಮಕ್ಕಿ, ಕಿರಣ್ ದೊಡ್ಮನೆ ಧೀವರ ಸಮುದಾಯಕ್ಕೆ ಸೇರಿದವರಾಗಿದ್ದು ಶಾಸಕರ ಸಹಕಾರ ಕೋರಿದ್ದಾರೆ. ಇನ್ನೂ ಸದ್ದಾಂ ಹುಸೇನ್, ಸದ್ದಾಂ ದೊಡ್ಮನೆ, ಮುಸ್ಲಿಂ ಸಮುದಾಯದರಾಗಿದ್ದು ಅವರು ಸಹ ಸುಮ್ಮನೆ ಕೂತಿಲ್ಲ.


ಕಾಂಗ್ರೇಸ್ ‌ಪಕ್ಣದಲ್ಲಿ ಬ್ರಾಹ್ಮಣರಿಗೆ ಸ್ಥಾನಮಾನಗಳು ಕಡಿಮೆ ಇದೆ. ಇಡೀ ತಾಲ್ಲೂಕಿನಲ್ಲಿ‌ ಧೀವರ ಸಮುದಾಯ ಬಿಟ್ಟರೆ ಎರಡನೇ ಅತೀ ದೊಡ್ಡ ಸಮುದಾಯ ಬ್ರಾಹ್ಮಣರದ್ದು, ಬಿ.ಆರ್. ಜಯಂತ್ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿ ಪೂರ್ಣಾವಧಿ ಕಾರ್ಯ ಮುಗಿಸಿದ್ದಾರೆ. ಇನ್ನೂ ಐ.ಎನ್. ಸುರೇಶ್'ಬಾಬು ರನ್ನಿಂಗ್ ನಲ್ಲಿರುವ ಸಾಗರ ನಗರ ಘಟಕದ ಅಧ್ಯಕ್ಷರು. 


ಹೀಗೆ ಬೆರಳೆಣಿಕೆಯ ಬ್ರಾಹ್ಮಣರನ್ನು ಮಾತ್ರ ಪಕ್ಷದಲ್ಲಿ‌ ಇಟ್ಟುಕೊಂಡಿರುವ ಕಾಂಗ್ರೆಸ್ ಈ ಬಾರಿಯ ಯುವ ಘಟಕದ ಕಾಂಗ್ರೆಸ್ ಅಧ್ಯಕ್ಣ ಸ್ಥಾನ ಬ್ರಾಹ್ಮಣರಿಗೇಕೆ ನೀಡಬಾರದು. ಈಗಿನ ಕ್ಯಾಂಡಿಡೇಟ್ ಚಿನ್ಮಯ್ ಸಿ.ಎಂ. ಎಲ್ಲರೂ ತಿಳಿದಿರುವಂತೆ ಕಾಂಗ್ರೆಸ್ ನಿಷ್ಠ, ವಿದ್ಯಾರ್ಥಿ‌ದೆಸೆಯಲ್ಲೆ ಕಾಂಗ್ರೆಸ್ ಪರ ಯಾರೂ ಇಲ್ಲದಿದ್ದರೂ ಇದೇ ಗೋಪಾಲಕೃಷ್ಣ ಬೇಳೂರು ಶಾಸಕರಗದೇ ಇದ್ದ ಕಾಲದಲ್ಲೂ ಅವರ ಬಾಲ ಹಿಡಿದುಕೊಂಡೇ ಓಡಾಡಿದ ಹುಡುಗ. ಪಕ್ಷಕ್ಕಾಗಿ ಎಲ್ಲೂ ಫೋಟೋಶೂಟ್'ಗೆ ನಿಲ್ಲದೇ ಸಂಘಟನೆ ಮಾಡಬಲ್ಲ ಶಕ್ತಿ ಹೊಂದಿರುವ ಯುವಕ. ಹೇಳಿ ಕೇಳಿ ಬ್ರಾಹ್ಮಣ ಸಮುದಾಯದ ವ್ಯಕ್ತಿ. ಬ್ರಾಹ್ಮಣರಿಗೆ ಕಾಂಗ್ರೇಸ್'ನಲ್ಲಿ‌ ಸ್ಥಾನಮಾನ ಇಲ್ಲ‌ ಎನ್ನುವ ಅಪವಾದ ತೊಡೆದು ಹಾಕಲು ಈ ಬಾರಿ ಯುವ ಘಟಕದ ಅಧ್ಯಕ್ಷ ಸ್ಥಾನ ಬ್ರಾಹ್ಮಣರಿಗೆ ನೀಡುವ ಕೆಲಸ ಕಾಂಗ್ರೇಸ್ ಮಾಡಲಿದೆಯೇ ಎಂಬುವುದನ್ನು ಕಾದು ನೋಡಬೇಕು.‌ 


ಇದು ಶಾಸಕರ ಕೈಯ್ಯಲ್ಲೂ ಇದೆ. ಶಾಸಕರು ಮನಸ್ಸು ಮಾಡಿದರೆ ಯುವ ಘಟಕದ ಅಧ್ಯಕ್ಷ ಸ್ಥಾನ ಬ್ರಾಹ್ಮಣ ವ್ಯಕ್ತಿಗೆ ಸಿಗುವುದರಲ್ಲಿ ಯಾವುದೇ ಅನುಮಾನ ಬೇಡ, ಎಲ್ಲಾ ಇರುವುದು ದ ಒನ್ & ಓನ್ಲಿ ಗೋಪಾಲಕೃಷ್ಣ ಬೇಳೂರುರ "ಕೈ" ಯಲ್ಲಿ ಮಾತ್ರ..


*ಈಗಾಗಲೇ ಸಾಗರ-ಹೊಸನಗರ ವಿದಾನಸಭಾ ಕ್ಷೇತ್ರ ಯುವ ಅಧ್ಯಕ್ಷ ಸ್ಥಾನಕ್ಕೆ ಆಶೋಕ ಬೇಳೂರು, ಉಮೇಶ ಬಾಳೆಗುಂಡಿ ಮತ್ತು ಹೊಸನಗರ ಭಾಗದ ಮಹೇಂದ್ರ ಬುಕ್ಕಿವರೆ ಆಕಾಂಕ್ಷಿಗಳಾಗಿದ್ದರು. ಇದರ ನಡುವೆ ಶಾಸಕರಾದ ಗೋಪಾಲಕೃಷ್ಣ ಬೇಳೂರು ಮಧ್ಯಸ್ಥಿಕೆ ವಹಿಸಿ ಅಶೋಕ ಬೇಳೂರು ಮತ್ತು ಉಮೇಶ ಬಾಳೆಗುಂಡಿ ಇವರ ಮನವೊಲಿಸಿ ಮಹೇಂದ್ರ ಬುಕ್ಕಿವರೆ ಅವರನ್ನು ಕಣದಲ್ಲಿ ಇರುವಂತೆ ಸೂಚಿಸಿದ್ದು, ಇವರು ಅಸೆಂಬ್ಲಿ ಕ್ಷೇತ್ರಕ್ಕೆ ಅಧ್ಯಕ್ಷರಾಗಲಿದ್ದಾರೆ. ನೋಡಿ ಇಲ್ಲಿಯೂ ಧೀವರಿಗೆ ಮಣೆ ಹಾಕಿದ ಶಾಸಕರ ನಡೆ ಎಲ್ಲರೂ ಗಮನಿಸುತ್ತಿಸ್ದಾರೆ. ಸಾಗರದಲ್ಲಿಯಾದರೂ ಬ್ರಾಹ್ಮಣ ಸಮುದಾಯದ ವ್ಯಕ್ತಿಗೆ ಪ್ರಾಶಸ್ತ್ಯ ನೀಡದಿದ್ದಲ್ಲಿ ಜಾತಿವಾದದ ಗೂಬೆ ಶಾಸಕ ಗೋಪಾಲಕೃಷ್ಣ ಬೇಳೂರರ ತಲೆ ಏರುವುದು ಗ್ಯಾರಂಟಿ ಆಗಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close