ಸೋಮವಾರ, ಆಗಸ್ಟ್ 12, 2024

ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಆರಗ ಗುಡುಗು



 ಸುದ್ದಿಲೈವ್/ಶಿವಮೊಗ್ಗ


ಕಸ್ತೂರಿ ರಂಗನ್ ವರದಿ ಅನುಷ್ಠಾನದ ಬಗ್ಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಗುಡುಗಿದ್ದಾರೆ. ಅಧಿಕಾರಿಗಳ ಅವಾಂತರಕ್ಕೆ ಅರಣ್ಯ ಭೂಮಿ ಏರು ಪೇರು ಕಾಣಿಸಿಕೊಂಡಿದೆ ಎಂದು ದೂರಿರುವ ಅವರ ಹೇಳಿಕೆ ಅಚ್ಚರಿ ಮೂಡಿಸಿದೆ. 


ಅಗಸ್ಟ್ 5 ರಂದು ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅರಣ್ಯ ಪ್ರದೇಶ ಒತ್ತುವರಿ ತೆರವು ಮಾಡುವ ಆದೇಶದಿಂದ ಮಲೆನಾಡಿನ ಜನ ಭಯಭೀತರಾಗಿದ್ದಾರೆ. ಈಗಾಗಲೇ ಅರಣ್ಯ ಇಲಾಖೆ ಒತ್ತುವರಿ ತೆರವು ಮಾಡುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. 


ಶ್ರಮಜೀವಿಗಳ ಅನ್ನ ಕಸಿಯುವ ಕಾರ್ಯಾಚರಣೆಗೆ ಬಿಜೆಪಿ ಬಿಡುವುದಿಲ್ಲ. ಬಡವರು ಮಾಡಿದ ಬಗರ್ ಹುಕುಂ ತೆರವು ಮಾಡಲು ಹೋದ್ರೆ ನಾವು ತಡೆಯಲು ಸಿದ್ದರಾಗಿದ್ದೆವೆ ಎಂದು ಗುಡುಗಿದ್ದಾರೆ. ಯಡಿಯೂರಪ್ಪನವರ ಕಾಲದಿಂದಲೂ ಸಹ ನಾವು ಬಗರ್ ಹುಕುಂ ರೈತರ ಪರವಾಗಿ ಬಿಜೆಪಿ ಹೋರಾಟ ಮಾಡಿತ್ತು. ಸಚಿವ ಖಂಡ್ರೆ ಬಯಲುಸೀಮೆ ಭಾಗದವರು, ಅವರಿಗೆ ಇಲ್ಲಿನ ಸಮಸ್ಯೆಯ ಬಗ್ಗೆ ಅರಿವಿಲ್ಲ. ಅವರಿಗೆ ಮಲೆನಾಡಿನ ಜನಪ್ರತಿನಿಧಿಗಳ ಸಭೆ ಕರೆಯಲು ಹೇಳಾಗಿದೆ. ಬ್ರಿಟೀಷ್ ಕಾಲದ ಕಂದಾಯ ಇಲಾಖೆಯ ಪಹಣಿಯಲ್ಲಿ ಇರುವುದನ್ನು ಮಂಜೂರು ಮಾಡಲಾಗತ್ತಿದೆ. ಇಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆ ಬೇಜಾಬ್ದಾರಿಯಿಂದಾಗಿ ಅರಣ್ಯ ವಾಸಿಗಳಿಗೆ ತೊಂದರೆ ಉಂಟಾಗಿದೆ ಎಂದರು.


ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಹೋಗಬೇಕಾದ್ರೆ, ಮೊದಲು ನೋಟಿಸ್ ನೀಡಬೇಕು. ಆದ್ರೆ ಕಾಯ್ದೆಯನ್ನು ದುರುಪಯೋಗ ಮಾಡುವ ಕೆಲಸವಾಗುತ್ತಿದೆ. ಇವರು ಭೂಕುಸಿತದ ಕಾರಣ ನೀಡಿ ತೆರವು ಮಾಡುವ ಕಾರಣ ನೀಡುತ್ತಿದೆ. ಗುಡ್ಡ ಕುಸಿಯಲು ಬಗರ್ ಹುಕುಂ ಸಾಗುವಳಿದಾರರು ಕಾರಣರಲ್ಲ, ಗುಡ್ಡದ ಮೇಲೆ ಇಂಗು ಗುಂಡಿ ಮಾಡಲಾಗುತ್ತಿದೆ. ಇದು ಪ್ರಕೃತಿಗೆ ವಿರೋಧವಾದ ಕೆಲಸವಾಗಿದೆ. ಅಧಿಕಾರಿಗಳು ಅವೈಜ್ಞಾನಿಕತೆಯಿಂದ‌ ಗುಡ್ಡ ಕುಸಿತವಾಗಿದೆ ಎಂದರು. 


ನಗರ ಹೋಬಳಿ ಕರೆಮನೆಯಲ್ಲಿ ಪಹಣಿಯಲ್ಲಿ ಪಿಎಫ್ ಎಂದು ನಮೂದು ಆಗಿದೆ. ಇದು ರೆವಿನ್ಯೂ ರವರು ಮಾಡಿದ ಅವಾಂತರವಾಗಿದೆ. ಅರಣ್ಯ ಹಾಗೂ ಕಂದಾಯ ಇಲಾಖೆ ಮಾಡಿದ ದುಷ್ಪರಿಣಾಮ ಬಡವರು ಒದ್ದಾಟಡುವಂತಾಗಿದೆ ಎಂದರು. 


ಪ್ರಭಾವಿಗಳು ಬಂದು ಅರಣ್ಯದಲ್ಲಿ ರೇಸಾರ್ಟ್ ಮಾಡುತ್ತಿದ್ದಾರೆ. ರೇಸಾರ್ಟ್ ಮಾಡುವ ಮುನ್ನಾವೆ ಕ್ರಮ ಜರುಗಿಸಬೇಕು.  ರೈತ ಭೂಮಿಗೆ ಕೈ ಹಾಕಿದರೆ ಬಿಜೆಪಿ ಕಾರ್ಯಕರ್ತರು ಹೋರಾಟ ಮಾಡುತ್ತೆವೆ ಎಂದರು. ಈಗಿರುವ ಅರಣ್ಯ ಕಾಯಿದೆಗಳು ಅರಣ್ಯ ಇಲಾಖೆಯು ಭಯಭೀತರಾಗಿದ್ದಾರೆ ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ