ಸುದ್ದಿಲೈವ್/ಶಿವಮೊಗ್ಗ
ಮೂಡ ಹೋರಾಟವಲ್ಲ ಮೂಡರ ಬೀದಿ ಜಗಳ ನಾಟಕ ನಡೆಯುತ್ತಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಮೇಲೆ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮೇಲೆ ಬಿಜೆಪಿ ಬೈದುಕೊಂಡು ಪಾದಯಾತ್ರೆ ನಡೆಯುತ್ತಿದೆ. ಯಾವ ವಿಚಾರಗಳ ಬಗ್ಗೆ ದಾಖಲೆ ಸಮೇತ ಚರ್ಚೆ ಆಗಬೇಕಿತ್ತೋ ಅದು ನಡೆಯುತ್ತಿಲ್ಲ ಎಂದು ಆಕ್ಷೇಪಿಸಿದರು.
ಬೀದಿ ನಾಟಕ ನಿಲ್ಲಿಸಿ ಕಾಂಗ್ರೆಸ್ ಮತ್ತು ಬಿಜೆಪಿಗಳ ಸರ್ಕಾರ ಇದ್ದಾಗ ನಡೆದ ಭ್ರಷ್ಠಾಚಾರದ ಬಗ್ಗೆ ಯ ತನಿಖೆಯನ್ನ ಸಿಬಿಐಗೆ ವಹಿಸಬೇಕು ಎಂದ ಅವರು ಬಾಂಗ್ಲಾದಲ್ಲಿ ಹಿಂದೂಗಳ ನರಮೇಧ ನಡೆದಿದೆ. ಏನು ತಪ್ಪಾಗಿದೆ ಎಂದು ಹಿಂದೂ ಹತ್ಯೆ ನಡೆಯುತ್ತಿದೆ. ದೇವಸ್ಥಾನಗಳ ಧ್ವಂಸವಾಗುತ್ತಿದೆ ಎಂದು ಪ್ರಶ್ನಿಸಿದರು.
ಬಾಂಗ್ಲಾ ರಾಷ್ಟ್ರವನ್ನ ನಿರ್ಮಿಸಿದ ಮುಜುಬರ್ ರೆಹಮಾನ್ ಮತ್ತು ರಾಷ್ಟ್ರ ಭಕ್ತ ಗೀತೆ ರಚಿಸಿದ ರವೀಂದ್ರ ನಾಥ್ ಠಾಗೂರ್ ಪ್ರತಿಮೆ ಧ್ವಂಸ ಮಾಡಲಾಗಿದೆ. ಹಿಂದೂಗಳ ರಕ್ಷಣೆ ಮಾಡುವಂತೆ ಪ್ರಧಾನಿ ಮೋದಿ ನೂತನ ಬಾಂಗ್ಲ ಪ್ರಧಾನಿಗೆ ಹೇಳಿದ್ದಾರೆ ಇದನ್ನ ಬಾಂಗ್ಲಾ ಪ್ರಧಾನಿ ಹಿಂದೂ ರಕ್ಷಣೆ ನಡೆಯಬೇಕು ಎಂದರು.
ಕಾಂಗ್ರೆಸ್ ನ ಯಾವ ನಾಯಕರು ಇದನ್ನ ಖಂಡಿಸಿಲ್ಲ. ಸಲ್ಮಾನ್ ಖುರ್ಷಿದ್ ಹೇಳಿಕೆಯನ್ನ ಕಾಂಗ್ರೆಸ್ ಖಂಡಿಸದೆ ಇರುವುದು ದುರಂತ ಎಂದು ದೂರಿದರು.