ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರರ ಮನೆಗೆ ಮುತ್ತಿಗೆ ಯತ್ನ-ಬಂಧನ




ಸುದ್ದಿಲೈವ್/ಶಿವಮೊಗ್ಗ


420... 420... ವಿಜೇಂದ್ರ 420. ಅಲ್ಲಿ ನೋಡು ವಿಜೇಂದ್ರನ ಆಸ್ತಿ, ಇಲ್ಲಿ ನೋಡು ವಿಜೇಂದ್ರನ ಆಸ್ತಿ, ಸಿಎಂ ನಕಲಿ ಸಹಿ ಮಾಡಿ ಲೂಟಿ ಮಾಡಿದ ವಿಜೇಂದ್ರನಿಗೆ ದಿಕ್ಕಾರ ಕೂಗಿ ಶೋಷಿತ ಸಮುದಾಯದ ಒಕ್ಕೂಟ ಕಿಯಾ ಶೋರೂಮ್ ಹಿಂಭಾಗದಲ್ಲಿರು ವಿಜೇಂದ್ರರವರ ಮನೆಗೆ ನುಗ್ಗುವ ಪ್ರಯತ್ನ ಮಾಡಿದೆ.


ಸಿಎಂ ಸಿದ್ದರಾಮಯ್ಯ ನವರ ವಿರುದ್ಧ ಬಿಜೆಪಿ-ಜೆಡಿಎಸ್ ಪಾದಯಾತ್ರೆ ನಡೆಸುತ್ತಿರುವುದನ್ನ ಖಂಡಿಸಿ ಶೋಷಿತ ಸಮುದಾಯದ ಒಕ್ಕೂಟ  ಇಂದು ವಿಜೇಂದ್ರ ಅವರ ಮನೆಗೆ ನುಗ್ಗುವ ಪ್ರಯತ್ನ ನಡೆಸಿದೆ. ಪ್ರಯತ್ನಿಸಿದ ಪ್ರತಿಭಟನಕಾರರು ಪೊಲೀಸರು ವಶಕ್ಕೆ ಪಡೆದಿದ್ದಾರೆ. 




ರಾಮಯ್ಯ ರಾಮಯ್ಯ ಅನ್ನರಾಮಯ್ಯ, ಸಿದ್ದರಾಮಯ್ಯನವರಿಗೆ ಜೈ ಎಂದು ಪ್ರತಿಭಟನಾಕಾರರು ಕೂಗಿದ್ದಾರೆ. ಈ ವೇಳೆ ಕಾರ್ಯಕರ್ತರು ಏಳು ಬೀಳುಗಳನ್ನ ಕಂಡಿದ್ದಾರೆ. ನೂತನ ಪೊಲೀಸರು ಸಿವಿಲ್ ಡ್ರೆಸ್ ನಲ್ಲಿದ್ದ ಪೊಲೀಸರನ್ನ ಹಿಡಿದು ಕರೆದುಕೊಂಡು ಹೋಗಿರುವ ದೃಶ್ಯಗಳು ಲಭ್ಯವಾಗಿದೆ.


ವಿಜೇಂದ್ರರವರ ಮನೆ ಸುತ್ತು ಡಿಎಆರ್ ಪೊಲೀಸರು ಸೇರಿಸುಮಾರು 80 ಜನರನ್ನ ನೇಮಿಸಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷರ ಮನೆಯ ಸುತ್ತ ಖಾಕಿ ಸರ್ಪಗಾವಲು ನಿಯೋಜಿಸಲಾಗಿತ್ತು.  ಪ್ರತಿಭಟನೆಯಲ್ಲಿ ವಿಜಯಕುಮಾರ್ ಸಂತೆಕಡೂರು, ಕೆ.ರಂಗನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಿರೀಶ್, ಪ್ರವೀಣ್, ಶರತ್ ಮರಿಯಪ್ಪ ಮೊದಲಾದವರು ಭಾಗಿಯಾಗಿದ್ದರು


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close