ಸುದ್ದಿಲೈವ್/ಶಿವಮೊಗ್ಗ
ರಾಯರ 353ನೇ ಆರಾಧನಾ ಮಹೋತ್ಸವ ಸಂಭ್ರಮ ಮನೆ ಮಾಡಿದೆ. ನಗರದ ತಿಲಕ್ ನಗರದಲ್ಲಿರುವ ಮತ್ತು ಬೊಮ್ಮನ್ ಕಟ್ಟೆಯ ರಾಯರ ಮಠದಲ್ಲಿ ಮಧ್ಯಾರಾಧನೆ ಜನರ ಭಕ್ತಿ ಭಾವಕ್ಕೆ ಪರಾವಶವಾಗಿದೆ. ಅಧಿಕ ಸಂಖ್ಯೆಯಲ್ಲಿ ಈ ಎರಡೂ ಮಠಕ್ಕೆ ಆಗಮಿಸಿದ್ದರು.
ರಾಯರ ಮಂತ್ರಾಲಯದಲ್ಲಿ ದೇವರ ಧ್ಯಾನದಲ್ಲಿರುವ ರಾಯರ ಕಣ್ಣು ಭಕ್ತರ ಕಡೆ ದೃಷ್ಟಿ ಹಾಯಿಸಿದ್ದು, ಹೀಗಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಇಂದು ಭಕ್ತರು ಸೇರ್ಪಡೆಯಾಗಲಿದ್ದಾರೆ. ಅದರಂತೆ ಶಿವಮೊಗ್ಗದ ಈ ಎರಡೂ ಮಠಗಳಲ್ಲಿ ಜನರು ಹೆಚ್ಚುನ ಸಂಖ್ಯೆಯಲ್ಲಿ ಆಗಮಿಸಿ ರಾಯರ ಕೃಪಾಕಟಾಕ್ಷಕ್ಕೆ ಒಳಗಾಗಿದ್ದಾರೆ.
ಆಯನೂರಿನ ವಾದಿರಾಜ ಆಶ್ರಮದ ರಾಯರಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ತಿಲಕ್ ನಗರ ಮತ್ತು ಬೊಮ್ಮನ್ ಕಟ್ಟೆಯ ರಾಯರ ಮಠದಲ್ಲಿಯೂ ವಿಶೇಷ ಅಲಂಕಾರ ಮಾಡಲಾಗಿತ್ತು. ರಾಯರು ಜೀವಂತವಾಗಿ ವೃಂದಾವನ ಪ್ರವೇಶವಾದ ದಿನವೇ ಮಧ್ಯಾರಾಧನೆ ಆಗಿದೆ.
ಮಧ್ಯಾರಾಧನೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳ ಜೊತೆ ಉತ್ಸವಗಳು ಶ್ರೀ ಮಠದಲ್ಲಿ ನಡೆಯುತ್ತಿದೆ, ಇವತ್ತು ಮಂತ್ರಾಲಯದ ರಾಯರ ಮಠದಲ್ಲಿ ಮಧ್ಯಾರಾಧನೆ ನಡೆಯಲಿದೆ. ರಾಯರ ಏಳು ದಿನಗಳ ಆರಾಧನಾ ಮಹೋತ್ಸವದಲ್ಲಿ ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾಧನೆ ಈ ಮೂರು ದಿನಗಳು ಅತಿ ಮಹತ್ವವಾಗಿವೆ.