ಅಲ್ಲಲ್ಲಿ ಗಣಪತಿ ಪ್ರತಿಷ್ಠಾಪನಾ ಸಮಿತಿಯ ಸಭೆ-ಪೊಲೀಸ್ ಇಲಾಖೆಯಿಂದ ಸೂಚನೆಗಳು



ಸುದ್ದಿಲೈವ್/ಶಿವಮೊಗ್ಗ/ಭದ್ರಾವತಿ


ಗಣಪತಿ ಹಬ್ಬಕ್ಕೆ ಸಕಲ ಸಿದ್ದತೆ ನಡೆಯುತ್ತಿರುವ ಮಧ್ಯದಲ್ಲಿಯೇ ಪೊಲೀಸರೂ ಸಹ ಬಂದೋಬಸ್ತ್ ಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಶಿವಮೊಗ್ಗ ಮತ್ತು ಭದ್ರಾವತಿಯ ಹೊಸಮನೆ, ನ್ಯೂಟೌನ್, ಹಳೇನಗರ, ಗ್ರಾಮಾಂತರ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಗಣೇಶ ಪ್ರತಿಷ್ಠಾನ ಸಮಿತಿಯ ಸಭೆ ನಡೆಸಿ ಜಾಗೃತಿ ಮೂಡಿಸಿದ್ದಾರೆ. 



ಮುಂಬರುವ ಗೌರಿ ಮತ್ತು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ವಿನೋಬನಗರ ಪೊಲೀಸ್ ಠಾಣೆಯ ಪಿಐ ಚಂದ್ರಕಲಾ ಹೆಚ್, ಪೊಲೀಸ್ ನಿರೀಕ್ಷಕರು, ವಿನೋಬನಗರ ಪೊಲೀಸ್ ಠಾಣೆ ರವರು ಬೊಮ್ಮನಕಟ್ಟೆ – ಎ ಬ್ಲಾಕ್ ನಲ್ಲಿ ಗಣೇಶ ಪ್ರತಿಷ್ಟಾಪನಾ ಸಮಿತಿಯ ಸದಸ್ಯರ ಸಭೆಯನ್ನು ನಡೆಸಿ ಸಲಹೆ ಸೂಚನೆಗಳನ್ನು ನೀಡಿದರು. 


ಅದರಂತೆ ಭದ್ರಾವತಿ ನಗರ ಸಿಪಿಐ ಶ್ರೀಶೈಲರವರ ನೇತೃತ್ವದಲ್ಲಿ ಜೈಭೀಮ್ ನಗರ, ಕೋಡಿಹಳ್ಳಿ ನಗರ ಮತ್ತು ಸಿದ್ದಾಪುರದಲ್ಲಿ ಗಣೇಶ ಪ್ರತಿಷ್ಠಾಪನಾ ಸಮಿತಿ ಸಭೆ ನಡೆಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯ  ಶ್ರೀಶೈಲ ಕೆಂಚಣ್ಣನವರ್ ನೇತೃತ್ವದಲ್ಲಿ, ಪಿಐ ಶಿಲ್ಪಾ, ಜಯಪ್ಪನವರಿಂದ ಉಕ್ಕುಂದ ಗ್ರಾಮ,  ಕೂಡ್ಲಿಗೆರೆ,ನಾಗತಿಬೆಳಗಲು ಮತ್ತು ಹೊಸಳ್ಳಿಯಲ್ಲಿ ಸಭೆ ನಡೆಸಿ ಕೆಲಸ ಸೂಚನೆಗಳನ್ನ ನೀಡಿದ್ದಾರೆ. 



1)  ಗಣಪತಿ ಮೂರ್ತಿ ಪ್ರತಿಷ್ಟಾಪನೆ ಮಂಡಳಿಯವರು ಗಣಪತಿ ಮೂರ್ತಿಗಳನ್ನು ಕೂರಿಸುವ ಮುನ್ನ ಗಣಪತಿ ಪ್ರತಿಷ್ಠಾಪನಾ ಮಂಡಳಿಯ ಹೆಸರು, ಸದಸ್ಯರ ವಿವರ, ಪ್ರತಿಷ್ಟಾಪಿಸುವ ದಿನಾಂಕ, ಗಣಪತಿ ಮೂರ್ತಿ ಕೂರಿಸುವ ಸ್ಥಳ, ಎಷ್ಟು ದಿನಳವರೆಗೆ ಕೂರಿಸಲಾಗುತ್ತದೆ, ಮೆರವಣಿಗೆ ಮಾರ್ಗ, ವಿಸರ್ಜನೆ ಮಾಡುವ ದಿನಾಂಕ ಹಾಗೂ  ಸ್ಥಳದ ಮಾಹಿತಿಯನ್ನು ಮುಂಚಿತವಾಗಿಯೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ನೀಡುವುದು.


2) ಗಣಪತಿ ಮೂರ್ತಿ  ಗಳನ್ನು ಕೂರಿಸಿದ ದಿನದಿಂದ ವಿಸರ್ಜನೆ ಮಾಡುವ ದಿನದ ವರೆಗೆ ಗಣಪತಿ ಪೆಂಡಾಲ್ ಗಳಲ್ಲಿ ಸ್ವಯಂ ಸೇವಕರನ್ನು ನೇಮಿಸಿ,  ದಿನದ 24  ಗಂಟೆಯೂ ಕನಿಷ್ಠಪಕ್ಷ ಇಬ್ಬರಾದರೂ ಇರುವ ಹಾಗೇ ನೋಡಿಕೊಳ್ಳಬೇಕು ಮತ್ತು  ಸ್ವಯಂ ಸೇವಕರ ಹೆಸರು, ಮೊಬೈಲ್ ನಂಬರ್ ಗಳ ಮಾಹಿತಿಯನ್ನು ಪೊಲೀಸ್  ಠಾಣೆಗೆ ನೀಡುವುದು. 


3) ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಅಳವಡಿಸಲಾಗುವ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಬೇರೆಯವರಿಗೆ ತೊಂದರೆಯಾಗದ ರೀತಿಯಲ್ಲಿ ಮತ್ತು ಇತರರ ಭಾವನೆಗಳಿಗೆ ದಕ್ಕೆಯಾಗದ ರೀತಿಯಲ್ಲಿ ಅಳವಡಿಸುವುದು.


4) ಗೌರಿ ಗಣೇಶ ಹಬ್ಬದ ವೇಳೆ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಿದ ಸಮಯದಲ್ಲಿ  ಘನ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ದ್ವನಿ ವರ್ಧಕಗಳನ್ನು ಬಳಕೆ ಮಾಡುವುದು.


ಈ ಸಂದರ್ಭದಲ್ಲಿ ಗಣೇಶ ಮೂರ್ತಿಗಳ ಪ್ರಷ್ಟಾಪನಾ ಸಮಿತಿಯ ಸದಸ್ಯರು ವಿನೋಬನಗರ ಪೊಲೀಸ್ ಠಾಣಾ ಸಿಬ್ಬಂಧಿಗಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close