ಗುರುವಾರ, ಆಗಸ್ಟ್ 29, 2024

ಟೋಲ್ ವಿರೋಧಿಸಿ ನಗರದಲ್ಲಿ ಪ್ರತಿಭಟನೆ

 


ಸುದ್ದಿಲೈವ್/ಶಿವಮೊಗ್ಗ


ಹಾನಗಲ್ ನಿಂದ ಶಿಕಾರಿಪುರ ಮೂಲಕ ಶಿವಮೊಗ್ಗಕ್ಕೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಎರಡು ಟೋಲ್ ಗಳನ್ನ ನಿರ್ಮಿಸಿರುವ ವಿರುದ್ಧ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಶಿವಮೊಗ್ಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 


ನಗರದ ಉಷಾ ನರ್ಸಿಂಗ ಹೋಮ್ ವೃತ್ತದಿಂದ ಡಿಸಿ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದ್ದು, ಸರ್ಷಕ್ಕೂ ಮೊದಲೇ ಸಹಕಾರ ನೀಡಿ, ಹೋರಾಟ, ಹೋರಾಟ ಟೋಲ್ ತೆಗೆಯುವರೆಗೂ ಹೋರಾಟ, ಒಂದು ರಸ್ತೆಯ ಟೋಲ್ ನಲ್ಲಿ ಕೊಳ್ಳೆ ಹೊಡೆಯುವುದನ್ನ ನಿಲ್ಲಿಸಿ, 


ಮೊಂಡಾಟ ಬಿಡಿ, ಟೋಲ್ ಬಿಟ್ಟು ನಡೆಯಿರಿ, ನಮ್ಮ ನಡಿಗೆ ಟೋಲ್ ತೆರವುಗೊಳಿಸುವ ಕಡೆಗೆ ಎಂಬ ಪ್ಲಕಾರ್ಡ್ ಹಿಡಿದು ಪ್ರತಿಭಟನಾ ಮೆರವಣೆಗೆಯಲ್ಲಿ ಭಾಗಿಯಾಗಿದ್ದಾರೆ. 15 ದಿನಗಳಲ್ಲಿ ಮನವಿಗೆ ಯಾವ ಅಧಿಕಾರಿಗಳು ಸ್ಪಂಧಿಸದಿದ್ದರೆ ಎರಡು ಟೋಲ್ ಗಳಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಸಿದರು. 


ಎರಡೂ ಟೋಲು ಯಾವ ಮಾನದಂಡನೆಯಲ್ಲಿ ನಿರ್ಮಿಸಲಾಗಿದೆ ಎಂಬುದು ಮಾಹಿತಿ ಬೇಕು. 60 ಕಿ.ಮೀ ದೂರದ ಅಂತರದಲ್ಲಿ ಅಳವಡಿಸಬೇಕೆಂಬ ನಿಯಮವುದ್ದರೂ ಶಿರಾಳಕೊಪ್ಪದ  ಕುಟ್ರಳ್ಳಿಯಿಂದ ಕಲ್ಲಾಪುರದ ಟೋಲ್ ನಡುವೆಇರುವ 35 ಕಿಮಿ ಅಂತರದಲ್ಲಿ ಮತ್ತೊಂದು ಟೋಲ್ ನಿರ್ಮಿಸಲಾಗಿದೆ. 


ಅವೈಜ್ಞಾನಿಕ ಟೋಲ್ ನಿರ್ಮಿಸಲಾಗಿದೆ. ಬಸ್ ನಲ್ಲಿ ಶಿರಾಳಕೊಪ್ಪದಿಂದ ಶಿವಮೊಗ್ಗಕ್ಕೆ ಬಂದರೆ 35 ರೂ ಹೆಚ್ಚಳವಾಗುತ್ತದೆ.ಈ ಅವೈಜ್ಞಾನಿಕ ತೆರಿಗೆ ವಸೂಲಿ ನಿಲ್ಲಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ಪ್ರತಿಭಟನೆಯಲ್ಲಿ ಪದ್ಮನಾಭ್ ಭಟ್, ಸಮಿತಿಯ ಅಧ್ಯಕ್ಷ ಶಿವರಾಜ್ ಜಿ.ಪಿ, ಪತ್ರಕರ್ತ ನವೀದ್, ಪ್ರಸನ್ನ, ಮೊದಲಾದವರು ಭಾಗಿಯಾಗಿದ್ದರು.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ