ಸುದ್ದಿಲೈವ್/ಶಿವಮೊಗ್ಗ
ಆ.13 ರ ಮಧ್ಯಾಹ್ನ 3.30 ರ ವೇಳೆಗೆ ಸುಮಾರು 35 ರಿಂದ 40 ವರ್ಷ ವಯಸ್ಸಿನ ಪುರುಷನ ಶವವು ತರೀಕೆರೆ-ಮಸರಹಳ್ಳಿ ರೈಲು ನಿಲ್ದಾಣಗಳ ಮಧ್ಯೆ ಪತ್ತೆಯಾಗಿರುತ್ತದೆ. ರೈಲ್ವೇ ಕಿ.ಮೀ ನಂ 30/900-30/800 ರಲ್ಲಿ ತರೀಕೆರೆ-ಮಸರಹಳ್ಳಿ ರೈಲು ನಿಲ್ದಾಣಗಳ ಮಧ್ಯೆ ಸಂ: 06513 ರೈಲು ಗಾಡಿಯ ಲೋಕೊಪೈಲಟ್‌ರವರು ಶವವನ್ನು ನೋಡಿ ವರದಿ ಮಾಡಿರುತ್ತಾರೆ.
ಮೃತ ವ್ಯಕ್ತಿಯು ಸುಮಾರು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, ತಲೆಯಲ್ಲಿ ಸುಮಾರು 01 ಇಂಚು ಕಪ್ಪು ಕೂದಲು, ಅರ್ಧ ಇಂಚು ಗಡ್ಡ ಮೀಸೆ ಬಿಟ್ಟಿರುತ್ತಾನೆ. ನೋಡಲು ಹಿಂದೂ ಮತಸ್ಥನಂತೆ ಕಂಡುಬರುತ್ತಾನೆ. ಮೃತನು ನೀಲಿ ಬಣ್ಣದ ಗೆರೆಗಳಿರುವ ತುಂಬು ತೋಳಿನ ಶರ್ಟ್, ನೀಲಿ ಫಾರ್ಮಲ್ ಪ್ಯಾಂಟ್, ಸಿಮೆಂಟ್ ಬಣ್ಣದ ಬನಿಯನ್ ಧರಿಸಿರುತ್ತಾನೆ.
ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೇ ಪೊಲೀಸ್ ಸಬ್-ಇನ್ಸ್ಪೆಕ್ಟರ್, ದೂ.ಸಂ: 08182-222974, ಮೊ.ಸಂ: 948082124 ನ್ನು ಸಂಪರ್ಕಿಸಬಹುದೆAದು ಶಿವಮೊಗ್ಗ ರೈಲ್ವೇ ಪೊಲೀಸ್ ಠಾಣೆಯ ಠಾಣಾಧಿಕಾರಿ ತಿಳಿಸಿದ್ದಾರೆ.