ಸುದ್ದಿಲೈವ್/ಸೊರಬ
ಮೊನ್ನೆ ಭಾನುವಾರ ಭದ್ರಾವತಿಯಲ್ಲಿ ಅನುಮಾನಸ್ಪದ ಸಾವು ಸಂಭಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಮತ್ತೊಂದು ಅದೇ ರೀತಿ ಅನುಮಾನಕರವಾದ ಸಾವಿನ ಪ್ರಕರಣ ನಡೆದಿದೆ.
ಸೊರಬ ತಾಲೂಕು ತಾವರೆಕೊಪ್ಪ ಗ್ರಾಮದಲ್ಲಿ ಕೃಷಿ ಕಾರ್ಮಿಕನಾಗಿರುವ ಮಂಜುನಾಥ್ (36) ಅನುಮಾನಕರವಾಗಿ ಸಾವನ್ನಪ್ಪಿದ್ದಾನೆ. ನಿನ್ನೆ ಗದ್ದೆಯಲ್ಲಿ ತಂದೆ ಯುವರಾಜ್ ಎಂಬುವ ಜೊತೆ ಕೆಲಸ ಮಾಡುತ್ತಿದ್ದ ಮಂಜುನಾಥ್ ಅಣಬೆಯನ್ನ ಹುಡುಕಿಕೊಂಡು ಸಾಗಿದ್ದಾರೆ.
ಮಧ್ಯಾಹ್ನದ ಹೊತ್ತಾದ ಕಾರಣ ತಂದೆ ಊಟಕ್ಕೆಂದು ಮನೆಗೆ ತೆರಳಿದ್ದಾರೆ. ಮನೆಯಲ್ಲೇ ವಿಶ್ರಾಂತಿ ಪಡೆದು ನಂತರ ಮಗ ಊಟಕ್ಕೆ ಬರಲಿಲ್ಲವೆಂದು ಹುಡುಕಿಕೊಂಡು ಹೊರಟಿದ್ದಾರೆ. ಹುಡುಕಿಕೊಂಡು ಹೋದಾಗ ಮಗ ತಮ್ಮ ಹೊಲದಲ್ಲೇ ಶವವಾಗಿ ಬಿದ್ದಿದ್ದು ಕಂಡು ದಿಗ್ಬ್ರಾಂತರಾಗಿದ್ದಾರೆ.
ನಂತರ ಮಗನನ್ನ ಅಂಗಾತ ಮಲಗಿಸಿ ನೋಡಿದಾಗ ಹಿಂಬದಿ ಸುಟ್ಟಗಾಯಗಳು ಪತ್ತೆಯಾಗಿದೆ. ಈ ಸುಟ್ಟಗಾಯಗಳೆ ಅನುಮಾನಕ್ಕೆ ಕಾರಣವಾಗಿದೆ. ಯುವರಾಜ್ ಅವರಿಗೆ ಮಂಜುನಾಥ ಸೇರಿ ಮೂವರು ಮಕ್ಕಳಿದ್ದಾರೆ.
2022 ರಲ್ಲಿ ಮತ್ತೋರ್ವ ಮಗ ಮಹೇಶ್ ಟ್ರ್ಯಾಕ್ಟರ್ ನಿಂದ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದರು. ಈಗ ಅವರ ಸಹೋದರ ಮಹೇಶ್ ಸಹ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೂರನೇ ಅವರು ಸಹೋದರಿಯಾಗಿದ್ದಾರೆ. ಈಗ ಯುವರಾಜ್ ಹೊರತುಪಡಿಸಿ ಅವರ ಜೊತೆ ಕುಟುಂಬದ ಯಾವ ಸದಸ್ಯರೂ ಯಾರು ಇಲ್ಲವಾಗಿದೆ.
ಮಂಜುನಾಥ್ ಸಾವಿಗೆ ಕಾರಣ ಏನುಎಂಬುದರ ಬಗ್ಗೆ ಪೊಲೀಸ್ ಬೆನ್ನುಬಿದ್ದಿದೆ. ಇವರ ಮಧ್ಯೆ ಆಸ್ತಿ ವಿಚಾರದಲ್ಲಿ ದಾಯಾದಿ ಕಲಹದ ವಾಸನೆಯೂ ಹೊಡೆಯುತ್ತಿದೆ. ಮಂಜುನಾಥ್ ವಿದ್ಯುತ್ ಶಾಕ್ ನಿಂದ ಸತ್ತಿರುವುದಾಗಿ ಕುಟುಂಬ ಆರೋಪಿಸಿದೆ.