ಸುದ್ದಿಲೈವ್/ಚಂದ್ರಗುತ್ತಿ
ಸೊರಬ ಆಸ್ಪತ್ರೆಯ ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ಅಲ್ಲಿನ ಅಲ್ಲಿ ಸ್ತ್ರೀರೋಗ ತಜ್ಞರನ್ನ ನೇಮಿಸಿಕೊಳ್ಳುವ ಪ್ರಕ್ರಿಯೆಯನ್ನ ಒಂದು ತಿಂಗಳ ಒಳಗೆ ಮುಗಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು
ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸೊರಬ ತಾಲೂಕ ಆಸ್ಪತ್ರೆಯಲ್ಲಿ ಕಳೆದ 8 ತಿಂಗಳಿಂದ ಸ್ತ್ರೀರೋಗ ತಜ್ಞೆಯ ಕೊರತೆ ಇದೆ. ಅವರ ನೇಮಕಾತಿಯನ್ನ ಒಂದು ತಿಂಗಳ ಒಳಗೆ ನಡೆಸಲಾಗುವುದು. ಇದರಜೊತೆಗೆ ಜಡೆ, ಆನವಟ್ಟಿ ಮತ್ತು ಸೊರಬ ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಭರವಸೆ ನೀಡಿದರು.
ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದಲ್ಲಿ ಸವಲತ್ತು ಕಡಿಮೆಯಿರುವದರಿಂದ ಅರಣ್ಯ ಕ್ಲಿಯರೆನ್ಸ್ ದೊರೆಯಬೇಕಿದೆ. ಕ್ಲಿಯರೆನ್ಸ್ ದೊರೆತ ನಂತರ ಸವಲತ್ತು ಕಲ್ಪಿಸಲಾಗುತ್ತದೆ. ಮಳಿಗೆ, ಶೌಚಾಲಯ, ಪಾರ್ಕಿಂಗ್ ನಿರ್ಮಿಸಲಾಗುತ್ತಿದೆ. ಈ ಕುರಿತು ಚಂದ್ರಗುತ್ತಿ ಇಒ, ಪ್ರವಾಸೋದ್ಯಮ, ನಡುವೆ ಸಭೆ ನಡೆಯಲಿದೆ ಎಂದರು.
ಮಳೆಯಿಂದಾಗಿ ರಸ್ತೆ ನಿರ್ಮಾಣ ಆಗಬೇಕು ಕಾಲು ಸಂಕ, ಸೇತುವೆ, ಮನೆ ಮತು ಶಾಲೆಗಳು ಮಳೆಯಿಂದ ಹಾನಿಯಾಗಿದೆ. ಇದರಿಂದಾಗಿ ವಾರಕ್ಕೊಮ್ಮೆ ಅಧಿಕಾರಿಗಳಿಂದ ಪರಶೀಲನೆನಡೆಸುತ್ತಿದ್ದೇವೆ ಎಂದರು.
ಕೊಪ್ಪಳದ ಅಂಗನವಾಡಿಯೊಂದರಲ್ಲಿ ಮಕ್ಕಳಿಗೆ ಬಾಯಿಯಲ್ಲಿ ಮೊಟ್ಟೆನ್ನಿಟ್ಟು ವಾಪಾಸ್ ಪಡೆದುಕೊಳ್ಳುವ ವಿಡಿಯೋ ವೈರಲ್ ಆಗುತ್ತಿರುವ ಬಗ್ಗೆನೂ ಪ್ರತಿಕ್ರಿಯಿಸಿದ ಸಚಿವರು ಈ ಇಲಾಖೆ ನನಗೆ ಬರೊಲ್ಲ. ಆದರೆ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದರು.