ಶನಿವಾರ, ಆಗಸ್ಟ್ 31, 2024

ಒಳಮೀಸಲಾತಿ ವಿರುದ್ಧ ಮಾತನಾಡಿದರೆ ನ್ಯಾಯಾಂಗ ನಿಂದನೆ-ಮಾದಿಗ ದಂಡೋರ ಎಚ್ಚರಿಕೆ

 


ಸುದ್ದಿಲೈವ್/ಶಿವಮೊಗ್ಗ


ಸರ್ವೋಚ್ಛ ನ್ಯಾಯಾಲಯ ಒಳ ಮೀಸಲಾತಿ ಕುರಿತಂತೆ ಈಗಾಗಲೇ ಆದೇಶ ನೀಡಿದರೂ ಸಹ ನ್ಯಾಯಾಲಯದ ಆದೇಶದ ವಿರುದ್ಧ ನ್ಯಾಯಾಂಗ ನಿಂದನೆ ನಡೆಯುತ್ತಿದೆ ಎಂದು ಕರ್ನಾಟಕ ಮಾದಿಗ ದಂಡೋರದ ಹನುಮಂತಪ್ಪ ಮಂಗೋಟೆ ಆಗ್ರಹಿಸಿದರು. 


ಒಳ ಮೀಸಲಾತಿ ಅವಶ್ಯಕತೆ ಇದೆ ಎಂದು ಸದಾಶಿವ ಆಯೋಗ ಮತ್ತು ಮಾಧುಸ್ವಾಮಿ ಆಯೋಗ ವರದಿಯನ್ನ ತರಿಸಿಕೊಂಡು ರಾಜ್ಯ ಸರ್ಕಾರ  ಕೇಂದ್ರ ಸರ್ಕಾರಕ್ಕೆ 17% ಮೀಸಲಾತಿ ಹೆಚ್ಚಳಿಸಿ ಕಳುಹಿಸಲಾಗಿತ್ತು. 


ಕೇಂದ್ರ ಸರ್ಕಾರ ಈ ಮೀಸಲಾತಿಯನ್ನ ತಿರಸ್ಕರಿಸಿತು. ನಂತರ  ಸುಪ್ರೀಂ ಕೋರ್ಟ್ ಗೆ ಹೋಗಲಾಯಿತು. ರಾಜ್ಯದಲ್ಲಿ ಜಾತಿಗಳ ಅನುಗುಣವಾಗಿ ಒಳಮೀಸಲಾತಿ ಹೆಚ್ಚಿಸಲು ಆದೇಶಿಸಿಸಿತ್ತು. ಆದರೆ ಮೈಸೂರಿನಲ್ಲಿ ವಿವಿಯ ನಿರ್ದೇಶಕರಾದ ಜೆ. ಸೋಮಶೇಖರ್ ಅವರು ಸಂವಾದ ನಡೆಸಿ ಒಳ ಮೀಸಲಾತಿಗೆ ಹೊಸದಾಗಿ ಜನಸಂಖ್ಯೆ ಹೆಚ್ಚಾಗಬೇಕು ಮತ್ತು ಆಗದಿದ್ದರೆ ಬಾಂಗ್ಲಾ ಮಾದರಿಯ ಹೋರಾಟ ನಡೆಯಲಿದೆ ಎಂದು ಹೇಳಿರುವುದು ನ್ಯಾಯಾಂಗ ನಿಂದನೆ ಆಗಿದೆ.  


ಹಾವನೂರು, ಸದಾಶಿವ ಆಯೋಗ ಮತ್ತು ಮಾಧು ಸ್ವಾಮಿಗಳ ಆಯೋಗದ ಬಗ್ಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ಕೂಲಂಕುಷವಾಗಿ ಚರ್ಚೆಯಾಗಿದೆ.  ಆದೇಶವನ್ನೆ ಉಲ್ಲಂಘಿಸಲಾಗುತ್ತಿದೆ. ಕಾನೂನು ಕ್ರಮ ಕೈಗೊಳ್ಳುವ ಇಂತಹವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬೇಕಿದೆ ಎಂದರು‌


ಒಳ ಮೀಸಲಾಯಾತಿಯ ಕುರಿತಂತೆ  ಸರ್ವೋಚ್ಚ ನ್ಯಾಯಾಲಯದ ವಿರುದ್ಧ ಮೈಸೂರಿನಲ್ಲಿ ಸಂವಾದ ನಡೆದಿದ್ದಕ್ಕೆ ಕಾನೂನು ಮತ್ತು ನ್ಯಾಯಾಂಗದ ಆದೇಶದ ಉಲ್ಲಂಘನೆಯಾಗಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸೋಮಶೇಖರ್ ಅವರನ್ನ ಮೈಸೂರು ವಿವಿಯಿಂದ ವಜಾಗೊಳಿಸುವಂತೆ ಆಗ್ರಹಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ