ಕಾಡಾನೆ ದಾಳಿಗೆ ವ್ಯಕ್ತಿ ಬಲಿ

 


ಸುದ್ದಿಲೈವ್/ಶಿವಮೊಗ್ಗ


ಮಲೆನಾಡಿನಲ್ಲಿ  ಮಾನವ- ವನ್ಯಜೀವಿ ಸಂಘರ್ಷ ಮುಂದುವರೆದಿದೆ. ಶಿವಮೊಗ್ಗದಲ್ಲಿ ಆನೆ ದಾಳಿಗೆ, ಕೃಷಿ ಕಾರ್ಮಿಕ ಬಲಿಯಾಗಿದ್ದಾನೆ. ಹನುಮಂತಪ್ಪ(45) ಆನೆ ದಾಳಿಗೆ ಬಲಿಯಾದ ಕೃಷಿ ಕಾರ್ಮಿಕನಾಗಿದ್ದಾನೆ


ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾ.ಪಂ ವ್ಯಾಪ್ತಿಯಲ್ಲಿ ಆಲದೇವರ ಹೊಸೂರು ಗ್ರಾಮದಲ್ಲಿ ಇಂದು ರಾತ್ರಿ 8 ಗಂಟೆ ವೇಳೆಗೆ ಕೃಷಿ ಕಾರ್ಮಿಕನ ಹನುಮಂತಪ್ಪನವರು ತೋಟದಲ್ಲಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ.ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಗೆ ಈ ಆಲದ ಹೊಸೂರು ಒಳಪಡಲಿದೆ. 


ಮೃತ ಹನುಮಂತಪ್ಪ ಲಕ್ಷ್ಮೇಶ್ವರ ಮೂಲದ ನಿವಾಸಿಯಾಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಸ್ಥಳಕ್ಕೆ ಶಿವಮೊಗ್ಗ ವನ್ಯಜೀವಿ ವಿಭಾಗದ ಅಧಿಕಾರಿಗಳು- ಸಿಬ್ಬಂದಿ ಭೇಟಿ ನೀಡಿದ್ದಾರೆ.


ಗದಗ ಜಿಲ್ಲೆಯ ಹನುಮಂತಪ್ಪ ಹಲವು ವರ್ಷಗಳಿಂದ ಕೂಲಿ ಮಾಡಿಕೊಂಡು ಪುರದಾಳು ಗ್ರಾಮದಲ್ಲಿ ವಾಸವಾಗಿದ್ದರು. ಪ್ರತಿ ದಿನ ಆಲದೇವರ ಹೊಸೂರಿಗೆ ಕೆಲಸಕ್ಕೆ  ಹನುಮಂತ ತೆರಳುತ್ತಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close