ಬಹಿರ್ದೆಸೆಗೆ ಹೋದ ವ್ಯಕ್ತಿಯ ಮೇಲೆ ಕರಡಿ ದಾಳಿ

 


ಸುದ್ದಿಲೈವ್/ಭದ್ರಾವತಿ


ಬೆಳಿಗ್ಗೆ ಸುಮಾರು 6-30 ರಿಂದ 7 ಗಂಟೆಯ  ಸಮಯದಲ್ಲಿ ಬಹಿರ್ದೆಸೆಗೆ ತೆರಳಿದ ವ್ಯಕ್ತಿಯ ಮೇಲೆ ಕರಡಿವೊಂದು ದಾಳಿ ನಡೆಸಿದೆ. 


ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಅರಸಿನಪುರದಲ್ಲಿ ಕರಡಿವೊಂದು  ಅಟ್ಯಾಕ್ ಮಾಡಿದೆ, ಆನಂದಪ್ಪ 65 ವರ್ಷ  ಕೂಲಿಕಾರ್ಮಿಕನ ಮೇಲೆ ಕರಡಿ ದಾಳಿ ನಡೆಸಿದೆ. ಆನಂದಪ್ಪರಿಗೆ ಬೆನ್ನು ತೊಡೆ ಮತ್ತು ಕೈಗಳ ಭಾಗದಲ್ಲಿ  ಗಾಯವಾಗಿದೆ. 


ಆನಂದಪ್ಪ ಅಡಿಕೆ ಹಾಳೆ ಆರಿಸುವ ಕೆಲಸ ಮಾಡಿಕೊಂಡು ಇದ್ದರು. ಈ ಗ್ರಾಮದಲ್ಲಿ ಚಿರತೆ ಮತ್ತು ಕರಡಿ ಹಾವಳಿ ಹೆಚ್ಚಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರುನೀಡಿರುವುದಾಗಿ ಗ್ರಾಮಸ್ಥರು ದೂರಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಕರಡಿ ಕಾಣಿಸಿಕೊಂಡಿದ್ದು, ಇಲಾಖೆಗೆ ತಿಳಿಸಿದರೂ ಕ್ರಮವಾಗಿಲ್ಲ ಎಂಬುದು ಗಾಯಾಳು ಆನಂದ ದೂರಾಗಿದೆ. 


ನಮ್ಮ‌ಬದುಕು ಆತಂಕದಲ್ಲಿದೆ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ದೂರಿದ್ದಾರೆ.ಮಲೆನಾಡಿನಲ್ಲಿ ಕರಡಿ, ಚಿರತೆ, ಆನೆ ದಾಳಿಗಳು ಹೆಚ್ಚಾಗಿದೆ. ಸಾಕಿದ ಬೆಕ್ಕು ಸಹ ಇತ್ತ ಮಾಲೀಕರನ್ನ ಕಚ್ಚಿ ಸಾವಾಗಿರುವ ಘಟನೆ ನಡೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು