ಸುದ್ದಿಲೈವ್/ಶಿವಮೊಗ್ಗ
ನಿನ್ನೆ ಟಿಪ್ಪು ನಗರದಲ್ಲಿ ಬಸ್ ಮೇಲೆ ನಿಂತು ತ್ರಿವರ್ಣ ಧ್ವಜ ಹಾರಾಡಿಸುತ್ತಿದ್ದ ವಿಡಿಯೋವೊಂದು ವೈರಲ್ ಆಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿ ಅಶೋಕ ಚಕ್ರ ಇಲ್ಲದ ಕಾರಣ ರಾಷ್ಟ್ರಧ್ವಜಕ್ಕೆ ಅಗೌವ ತೋರಲಾಗಿದೆ ಎಂದು ಆರೋಪಿಸಲಾಗಿದೆ.
ನಿನ್ನೆ ಸ್ವಾತಂತ್ರೋತ್ಸವ ದಿನಾಚರಣೆ ನಡೆದಿದ್ದು, ಕೆಲ ಯುವಕರು ಖಾಸಗಿ ನಗರ ಸಾರಿಗೆ ಬಸ್ ಮೇಲೆ ನಿಂತು ರಾಷ್ಡ್ರಧ್ವಜದಲ್ಲಿ ಅಶೋಕ ಚಕ್ರ ಇಲ್ಲದ ಬಾವುಟ ಹಾರಿಸಿರುವ ಕುರಿತು ಆಕ್ಷೇಪಣೆ ಹೊರಬಿದ್ದಿದ್ದು ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತಿದೆ.
ಬಸ್ ನ ಮುಂಭಾಗದಲ್ಲಿ ನಿಂತ ಹುಡುಗ ದೇಶದ ಬಾವುಟ ಹಿಡಿದು ತಿರುಗಿಸುತ್ತಿದ್ದು, ಆತನ ಹಿಂಭಾಗದಲ್ಲಿ ಮತ್ತೋರ್ವ ಬಾವುಟ ಹಿಡಿದಿದ್ದು, ಅದರಲ್ಲಿ ಅಶೋಕ ಚಕ್ರ ಇರುವ ಬಾವುಟ ಇರುವುದು ಕಂಡು ಬರುತ್ತಿದೆ.
ಆದರೆ ಮುಂಭಾಗದಲ್ಲಿ ಹಿಡಿದಿರುವ ಹುಡುಗನ ಬಾವುಟದಲ್ಲಿ ಅಶೋಕ ಚಕ್ರ ಇಲ್ಲದ ಬಾವುಟ ಹಿಡಿದಿರುವುದು ಈಗ ಚರ್ಚೆಗೆ ಕಾರಣವಾಗಿದೆ. ಪೊಲೀಸರು ಕೋರ್ಟ್ ಅನುಮತಿ ಮೇರೆಗೆ ಪ್ರಕರಣ ದಾಖಲಿಸುತ್ತಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ನಲ್ಲಿ ನಿನ್ನೆ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಕಿಡಿಗೇಡಿ ಯುವಕರು ಪ್ಯಾಲೇಸ್ತೇನ್ ದೇಶದ ಬಾವುಟ ಹಾರಿಸಲು ಯತ್ನ ನಡೆದಿದ್ದು ದೂರು ದಾಖಲಾಗಿತ್ತು.