ತನಿಖೆ ನಡೆಯುವ ವರೆಗೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ-ಕೊಳ್ಳೆಗಾಲ ಮಹೇಶ್




ಸುದ್ದಿಲೈವ್/ಶಿವಮೊಗ್ಗ


ತನಿಖೆ ನಡೆಯುವವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕೊಳ್ಳೆಗಾಲ ಮಹೇಶ್ ಆಗ್ರಹಿಸಿದ್ದಾರೆ. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ತನಿಖೆ ಮುಗಿದು ಅವರು ತಪ್ಪಿತಸ್ಥರಲ್ಲ ಅಂತಾ ಸಾಬೀತಾದರೆ‌ ಮತ್ತೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿ, ರಾಜ್ಯಪಾಲರ ವಿರುದ್ದ ಕಾಂಗ್ರೆಸ್ ನವರು ಪ್ರತಿಭಟನೆ ನಡೆಸಿದ್ದಾರೆರಾಜ್ಯಪಾಲರ ಪರವಾಗಿ ಬಿಜೆಪಿ ನಾಳೆ ಅಂದರೆ ಆಗಸ್ಟ್ 22 ರಂದು ಪ್ರತಿಭಟನೆ ನಡೆಸುತ್ತೇವೆ ಎಂದರು. 


ಐವಾನ್ ಡಿಸೋಜಾ‌ ಹಾಗು ಜಮೀರ್ ಅಹಮದ್ ವಿರುದ್ದ ದೇಶದ್ರೋಹ, ಭಯೋತ್ಪಾದಕ ಪ್ರಕರಣ ದಾಖಲಿಸಬೇಕು. ರಾಜ್ಯಪಾಲರ ವಿರುದ್ದ ಅವಹೇಳನಕಾರಿ ಮಾತನಾಡಿದ್ದಾರೆ, ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close