ಸತ್ಯಶೋಧನಾ ಸಭೆಯ ಮುನ್ನ ಉಗ್ರಪ್ಪ ಸುದ್ದಿಗೋಷ್ಠಿ

 


ಸುದ್ದಿಲೈವ್/ಶಿವಮೊಗ್ಗ


ಲೋಕಸಭಾ ಚುನಾವಣೆಗಳಲ್ಲಿ ಏರುಪೇರುಗಳಾದ ಕಾರಣ ಈ  ಬಗ್ಗೆ ಪಕ್ಷ ಕಮಿಟಿ ಮಾಡಿ ನನಗೆ  ಮಂಗಳೂರು, ಚಿಕ್ಕಮಗಳೂರು, ಉಡುಪಿ ಕಾರವಾರ ಮತ್ತು ಶಿವಮೊಗ್ಗದಲ್ಲಿ ಸತ್ಯಶೋಧನ ಸಭೆ ನಡೆಸಲು ತಿಳಿಸಲು ಜವಬ್ದಾರಿ ನೀಡಿರುವುದಾಗಿ ಕೆಪಿಸಿಸಿ ವಕ್ತಾರ ಉಗ್ರಪ್ಪ ತಿಳಿಸಿದರು. 



ಮಾಧ್ಯಮಗಳಿಗೆ ಮಾತನಾಡಿ, ಚಿಕ್ಕಮಗಳೂರು ಮಂಗಳೂರು ಉಡುಪಿ ಮತ್ತು ಕಾರವಾರ ಜಿಲ್ಲೆ ಯಲ್ಲಿ ಸತ್ಯಶೋಧನ ಸಭೆ ಮುಗಿಸಲಾಗಿದೆ. ಇಂದು ಶಿವಮೊಗ್ಗಕ್ಕೆ ಬಂದಿದ್ದೇವೆ. ಚುನಾವಣೆಯಲ್ಲಿ 20 ಕ್ಷೇತ್ರ ನಿರೀಕ್ಷಿಸಿದ್ದೆವು. ಬಿಜೆಪಿ 28 ನಿರೀಕ್ಷೆ ಮಾಡಿದ್ದರು. ರಾಷ್ಟ್ರದಲ್ಲಿ 300 ಸ್ಥಾನವನ್ನ ಪಡೆಯುವ ನಿರೀಕ್ಷೆ  ಕೂಟಕ್ಕೆ ಬರಲಿದೆ ಎಂದು ತಿಳುಯಲಾಗಿತ್ತು. ಆದರೆ ಎಲ್ಲವೂ ಉಲ್ಟಾ ಆಗಿವೆ. ಹಾಗಾಗಿ ಸಭೆ ನಡೆಸಲಾಗುತ್ತಿದೆ. ವೈಯುಕ್ತಿಕ ಗುಪ್ತ ಮಾಹಿತಿ ಸಂಗರ್ಹಿಸಿ ಹೈಕಮಾಂಡ್ ಗೆ ನೀಡಲಾಗುತ್ತಿದೆ ಎಂದರು. 


10 ವರ್ಷದ ನಂತರ ಪ್ರಧಾನಿ ಮೋದಿ 400 ಸ್ಥಾನ‌ನಿರೀಕ್ಷಿಸಿದ್ದರು. ಆದರೆ ನಿರೀಕ್ಷೆ ಮುಟ್ಟಲಾಗಲಿಲ್ಲ 1957-77 ರ ವರೆಗೆ ಕಾಂಗ್ರೆಸ್ ಇತ್ತು. 1980 ರಲ್ಲಿ ದರ ಏರಿಕೆ  ಮೇಲೆ ಚುನಾವಣೆ ನಡೆಯಿತು. 1984 ರಲ್ಲಿ ಇಂದಿರಾ ಹತ್ಯೆ ಮೇಲೆ ನಡೆಯಿತು. ನಂತರ ನಡೆದ ಚುನಾವಣೆ ಭೋಪರ್ಸ್ ಮೇಲೆ, 1990 ರಲ್ಲಿ ರಾಜೀವ್ ಹತ್ಯೆ, 1992 ರಲ್ಲಿ ರಾಮಮಂದಿರದ ವಿಷಯದ ಮೇಲೆ ಚುನಾವಣೆ ನಡೆದಿದೆ‌. 


2004 ರವರೆಗೆ ಅಟಲ್ ಜೀ ಸರ್ಕಾರ ನಂತರ ಇಂಡಿಯಾ ಶೈನಿಂಗ್ ನಿಂದ ಆ ಪಕ್ಷಕ್ಕೆ ಸೋಲಾಯಿತು. 2014 ರಲ್ಲಿ ಕಾಂಗ್ರೆಸ್ ವಿರುದ್ಧ ಭ್ರಷ್ಠಾಚಾರದ ಆರೋಪ ಮಾಡಿದ ಬಿಜೆಪಿ ಗದ್ದುಗೆಗೆ ಏರಿತು, 2019 ರಲ್ಲಿ  ಪುಲ್ಬಾಮಾ ದಾಳಿ, 2024 ರಲ್ಲಿ 5 ಜಿಯಲ್ಲಿ 12 ಸಾವಿರ ಕೋಟಿಗೆ ಹರಾಜಾಗಿದೆ. ಬಿಜೆಪಿಗೆ ಕಿಕ್ ಬ್ಯಾಕ್ ಎಷ್ಟು  ಹೋಗಿದೆ.ರಫೇಲ್ ಖರೀದಿಯಲ್ಲಿ 40 ಸಾವಿರ ಕೋಟಿ ಹಣ ಹಗರಣ ನಡೆದ ಆರೋಪ ಬಂದವು. ಯಾವುದೂ ಚುನಾವಣೆಯಲ್ಲಿ ಪರಿಗಣನೆಗೆ ಬರಲಿಲ್ಲ ಎಂದರು. 


ಮೋದಿ ಬರುವ ವರೆಗೆ ದೇಶದ  52 ಲಕ್ಷ ಕೋಟಿ ಸಾಲವಿತ್ತು. ಮೋದಿ ಕಾಲದಲ್ಲಿ 185 ಲಕ್ಷ ಕೋಟಿ  ಸಾಲವಾಯಿತು. ಮೋದಿಯನ್ನ ಮನೆಕಳುಹಿಸಲು ಎಲ್ಲಾ ಆಯಾಮವಿತ್ತು. ನಮ್ಮಲ್ಲಿ ಆದ ಲೋಪದಿಂದ ಸಾಧ್ಯವಾಗಲಿಲ್ಲ. ಅದನ್ನ ತಿದ್ದಿಕೊಳ್ಳಲು ಪಕ್ಷ ಬದ್ಧವಾಗಿದೆ. ಪೆಟಿ ಪೊಲಿಟಿಷನ್ ನೀತಿಯನ್ನ ಮೋದಿ ಇನ್ನೂ ಬಿಟ್ಟಿಲ್ಲ.  ರಾಜ್ಯದಲ್ಲಿ ಪ್ರವಾಹ ಬಂದಿದೆ. ಕೇಂದ್ರದ ಸಹಾಯವೇನು ಎಂದು ತರಾಟೆಗೆ ತೆಗೆದುಕೊಂಡರು. 


1500 ಕೋಟಿ ಅನುದಾನವನ್ನ 2009 ರ ಪ್ರವಾಹ ಬಂದಾಗ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ರಾಜ್ಯಕ್ಕೆ ಬಂದು ಸಮೀಕ್ಷೆ ಮಾಡಿ ಸ್ಥಳದಲ್ಲಿ ಹಣ ಬಿಡುಗಡೆ ಮಾಡಿದ್ದರು. ಈಗ ಪ್ರಧಾನಿ ಎಲ್ಲಿ? ರಾಜ್ಯದ ಬಗ್ಗೆ ಬಿಜೆಪಿಗೆ ಒಲವಿದ್ದರೆ 10 ಸಾವಿರ ಕೋಟಿ ಹಣ ಬಿಡುಗಡೆಗೆ ಸಹಕರಿಸಬೇಕು ಎಂದು ಅಗ್ರಹಿಸಿದರು. 


ಸೌತ್ ನಲ್ಲಿ ನಡೆದ ಪ್ರವಾಹವನ್ನ  ಮತ್ತು ಬರ ತಡೆಗೆ 1 ಲಕ್ಚಕೋಟಿ ರೂ.ಗಳನ್ನ ಕೇಂದ್ರ  ಬಿಡುಗಡೆ ಮಾಡಬೇಕು. ಸತ್ಯಶೋಧನಾ ಸಭೆಯಲ್ಲಿ ಮಾಹಿತಿಗಳು ಗುಪ್ತವಾಗಿರುತ್ತವೆ. ಪಕ್ಷ ವಿರೋಧಿ ಚಟುವಟಿಕೆ ಮತ್ತು ಬೇರೆ ಅಂಶಗಳ ಮೇಲೆ ಕ್ರಮ ಕೈಗೊಳ್ಳುವುದು ಎಂದರು. 


ನಾಯಕರ ನಡುವೆ ಆಸ್ತಿಪೈಟ್ ಸರಿಯಲ್ಲ. ಬಂಗ್ಲೆ ಮಹಲುಗಳು, ಆಸ್ತಿ ಅಳೆಯುವ ಮಾನದಂಡಗಳಲ್ಲ. ಜನಬೆಂಬಲವೇ ದೊಡ್ಡ ಆಸ್ತಿಯಾಗಿದೆ. ರಾಜ್ಯಪಾಲರ ಅಂಗಳದಲ್ಲಿ ಸಿಎಂ ಪ್ರಾಸಿಕ್ಯೂಷನ್ ಗೆವಿರುವ ಪ್ರಶ್ನೆ ಬಗ್ಗೆ ಮಾತನಾಡಿದ ಉಗ್ರಪ್ಪ, ಬೆಂಗಳೂರಿನ ರಾಜಭವನ ಪಕ್ಷದ ಕಾರ್ಯಪಾಲಕರಾದಂತೆ ಕಾಣುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಸೇತುವೆಯಾಗಬೇಕಾದವರು ಇಂದು ಬೇರೆ ರೀತಿ  ನಡೆಯುತ್ತಿದ್ದಾರೆ ಎಂದರು.


ಹತಾಶರಾಗಿ ಬಿಜೆಪಿ-ಜೆಡಿಎಸ್ ಭ್ರಷ್ಠಾಚಾರದ ಆರೋಪ ಮಾಡುತ್ತಿದ್ದಾರೆ. ಆರ್ ಟಿ ಐ ಕಾರ್ಯಕರ್ತ  ಟಿ ಜೆ ಅಬ್ರಹಂ ಯಡಿಯೂರಪ್ಪನವರ ವಿರುದ್ಧ ದೂರು ದಾಖಲಿಸಿದ್ದರು‌. ಯಡಿಯೂರಪ್ಪನವರ ವಿರುದ್ಧ ಪ್ರಕರಣ ಬಾಕಿ ಇದೆ. ರಾಜ್ಯಾಪಾಲರು ಬಿಜೆಪಿಯ ಏಜಂಟಾಗಿ ವರ್ತಿಸ ಬಾರದು. ರಾಜ್ಯ ಪಾಲರ ಮೂರು ನೋಟೀಸ್ ಗೆ ಸಿಎಂ ಕಾರ್ದರ್ಶಿಗಳು ಉತ್ತರ ನೀಡಿದ್ದಾರೆ. ನೋಟೀಸ್ ಕೊಡಲು ಕಾರಣವೇನು? ಉದ್ದೇಶವೇನು? ಎಂದು ರಾಜ್ಯಪಾಲರ ಕರ್ತವ್ಯವನ್ನ ಪ್ರಶ್ನಿಸಿದ್ದಾರೆ. 



ಸತ್ಯಶೋದನ ಸಭೆಯ ಕುರಿತು ಪ್ರಮುಖ ಅಂಶಗಳನ್ನ ಬಹಿರಂಗ ಪಡಿಸುವುದಿಲ್ಲ ಎಂದು ಮೊದಲೇ ಆಂಟಿಸಿಪೇಟರಿ ಬೇಲ್ ಹಾಕಿಕೊಂಡ ಪರಿಣಾಮ ಯಾವ ಅಂಶವನ್ನೂ ಮಾಧ್ಯಮಗಳ ಮುಂದೆ ಬಹಿರಂಗ ಉಗ್ರಪ್ಪ ಪಡಿಸಲಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು