ಸತ್ಯಶೋಧ ಸಮಿತಿಯಲ್ಲಿ ಅಭ್ರ್ಥಿಗಳು ಸೇರಿ ಹಲವಾರು ನಾಯಕರು ಗೈರು

 


ಸುದ್ದಿಲೈವ್/ಶಿವಮೊಗ್ಗ


58 ಸಾವಿರ ಕೋಟಿ ವೆಚ್ಚ ಐದು ಗ್ಯಾರೆಂಟಿ ನೀಡಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಗ್ಯಾರೆಂಟಿ ಸ್ವೀಪ್ ಮಾಡುವ ನಿರೀಕ್ಷೆ ಇತ್ತು.ಆದರೆ ನಿರೀಕ್ಷೆಗೆ ತಕ್ಕನಾದ ಸ್ಥಾನ ಸಿಗಲಿಲ್ಲ ಎಂದು ಕೆಪಿಸಿಸಿ ವಕ್ತಾರ ಉಗ್ರಪ್ಪ ತಿಳಿಸಿದರು.


ಕಾಂಗ್ರೆಸ್ ಕಚೇರಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋತ ಪರಿಣಾಮ ಸತ್ಯಶೋಧನ ಸಭೆ ನಡೆಸಿ ಮಾತನಾಡಿದ ಅವರು. ಮಾಧ್ಯಮಗಳಿಗೆ ಕೆಲವರು ಫೊಸ್ ಕೊಟ್ಟು ಹೋಗುವರು ಇದ್ದಾರೆ. ನಾಯಕರಿಗೆ ಬಕೆಟ್ ಹಿಡಿಯವಂತಾಗಬಾರದು. ಕಾರ್ಯರ್ತರು ಇದ್ದತೆ ಎಂಎಲ್ ಎ ಎಂಪಿ ಎಂಎಲ್ ಸಿಗಳಿರುತ್ತಾರೆ. ಈ ಮೂರು ಗುಣಗಳನ್ನ ಕಾರ್ಯಕರ್ತ ಬೆಳಸಿಕೊಳ್ಳಬೇಕು. ಪ್ರಶ್ನೆ ಮಾಡಬೇಕು ಎಂದರು. 


ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 17 ಮತ್ತು 2 ಜೆಡಿಎಸ್ ಗೆ ಸಿಕ್ಕಿದೆ ರಾಷ್ಟ‌ಮತ್ತು ರಾಜ್ಯ ರಾಜಕಾರಣ ಕವಲು ದಾರಿಯಲ್ಲಿದೆ. ರಾಷ್ಟ್ರದ ರಾಜಕಾರಣದಲ್ಲಿ ಡಿಕ್ಟೇರ್ ಶಿಪ್ ಇದೆ. ಸಿದ್ದರಾಮಯ್ಯ ಸರ್ಕಾರವನ್ನ ಅಲ್ಲಾಡಿಸುವ ಷಡ್ಯಂತರ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.


ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಆಂಜನೇಯ, ಜಿಲ್ಲಾ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್, ಸೂಡ ಅಧ್ಯಕ್ಷ ಸುಂದರೇಶ್, ಮಾಜಿ ಕಾರ್ಪರೇಟರ್ ಹೆಚ್ ಸಿ ಯೋಗೀಶ್ ಉಪಸ್ಥಿತರಿದ್ದರು. 


ಪರಾಜಿತ ಅಭ್ಯರ್ಥಿ ಸೇರಿ ಜಲವು ನಾಯಕರು ಗೈರು


ಕಾರ್ಯಕ್ರಮದಲ್ಲಿ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅನುಪಸ್ಥಿತಿ ಎದ್ದುಕಾಣುತ್ತಿತ್ತು. ಸತ್ಯಶೋಧನ ಸಭೆಯಲ್ಲಿ ಹಾಜರಾಗಬೇಕಿದ್ದ  ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿಯೇ ಗೈರು ಹಾಜರಿ ಇರುವುದು ಎದ್ದುಕಾಣುತ್ತಿತ್ತು. ಇವರ ಜೊತೆ ಶಾಸಕರಾದ ಗೋಪಾಲ ಕೃಷ್ಣ ಬೇಳೂರು, ಬಿ.ಕೆ ಸಂಗಮೇಶ್ವರ್ ಸಹ ಹಾಜರಿರಲಿಲ್ಲ. ಸತ್ಯ ಶೋಧನ ಸಮಿಯಲ್ಲಿ ಮಂಜುನಾಥ್ ಭಂಡಾರಿ ಸಹ ಇದ್ದರೂ ಸಭೆಗೆ ಹಾಜರಾಗಿರಲಿಲ್ಲ 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close