ಕೈಮುಗಿದು ಕುಳಿತಿರುವ ಸಾಗರದ KPTCLನ ಸಹಾಯಕ ಇಂಜಿನಿಯರ್ |
ಸುದ್ದಿಲೈವ್/ಬೆಂಗಳೂರು
ವಿಚ್ಛೇಧನ ನೀಡಿದ ಪತ್ನಿಯ ಮನೆ ಮುಂದೆ ಗಾಂಜಾ ಇಟ್ಟ ಪ್ರಕರಣಕ್ಕೆ ಬಂಧಿಸಿದಂತೆ ಸಾಗರದ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ಒಬ್ಬರ ಬಂಧನವಾಗಿತ್ತು. ಈ ಪ್ರಕರಣದ ಅರ್ಜಿ ವಿಚಾರಣೆ ಮಂಗಳವಾರ ಕರ್ನಾಟಕ ಹೈಕೋರ್ಟ್ ಮುಂದೆ ಬಂದಿದ್ದು, ಪ್ರಕರಣದ ಅರ್ಜಿದಾರರು ನ್ಯಾಮೂರ್ತಿಗಳ ಮುಂದೆ ರಕ್ಷಣೆ ನೀಡುವಂತೆ ಬೇಡಿಕೊಂಡಿರುವ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಪೊಲೀಸರು ಕಿರುಕುಳ ನೀಡುತ್ತಿದ್ದು, ನಾನು ನ್ಯಾಯಾಲಯ ಬಿಟ್ಟು ಹೋಗುವುದಿಲ್ಲ. ನನ್ನನ್ನು ಕಾಪಾಡಿ” ಎಂದು ಸಾಗರದ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ಶಾಂತಕುಮಾರ ಸ್ವಾಮಿ ಮಂಗಳವಾರ ಕರ್ನಾಟಕ ಹೈಕೋರ್ಟ್ ಮುಂದೆ ಕೈಮುಗಿದು ಅಂಗಲಾಚಿದ್ದಾರೆ. ಈ ಪ್ರಕರಣವನ್ನ ಬಾರ್ ಅಂಡ್ ಬೆಂಚ್ ಎಂಬ ವೆಬ್ ಸೈಟ್ ಪ್ರಕರಣವನ್ನ ವಿವರಿಸಿದೆ.
ಇದರಿಂದ ಚಕಿತಗೊಂಡ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಇಡೀ ಘಟನೆಯನ್ನು ಸಾವಧಾನದಿಂದ ಆಲಿಸಿ “ಇಂಥ ಕೃತ್ಯದಿಂದ ಹಿಂದೆ ಸರಿಯುವಂತೆ ಡಿವೈಎಸ್‌ಪಿಗೆ ತಿಳಿಸಿ, ಇಲ್ಲವಾದರೆ ಅವರನ್ನು ನ್ಯಾಯಾಲಯಕ್ಕೆ ಕರೆಯಿಸಬೇಕಾಗುತ್ತದೆ. ಆರೋಪ ನಿಜವಾಗಿದ್ದರೆ ಅವರು ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಖಡಕ್ ಮೌಖಿಕ ಎಚ್ಚರಿಕೆ ನೀಡಿದ್ದು, ವಿಚಾರವನ್ನು ಅಧಿಕಾರಿಗೆ ತಿಳಿಸುವಂತೆ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರಿಗೆ ತಿಳಿಸಿದರು.
ಜಗದೀಶ್ ಇದನ್ನು ನೋಡಿ. (ಅರ್ಜಿದಾರರನ್ನು ಕುರಿತು) ಹೆದರಬೇಡಿ, ನಾವು ಅವರಿಗೆ ಹೇಳಿದ್ದೇವೆ” ಎಂದರು. ನಾಳೆ ವಿಚಾರಣೆ ನಡೆಸಲಾಗುವುದು ಎಂದು ಪೀಠ ಹೇಳಿದೆ.
ಈ ಮಧ್ಯೆ, ಶಾಂತಕುಮಾರ ಸ್ವಾಮಿ ಪರ ವಕೀಲರು “ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೆ ಖಾಲಿ ವಕಾಲತ್ತಿಗೆ ಸಹಿ ಹಾಕಿದ ಬಳಿಕ ಅವರನ್ನು ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ಕಾಯಿದೆ ಅಡಿ ಬಂಧಿಸಿದ್ದಾರೆ” ಎಂದರು.
ಆಗ ಪೀಠವು ಹಿಂದೆ ದಾಖಲಿಸಿದ್ದ ಪ್ರಕರಣದ ದಾಖಲೆಗಳನ್ನು ನಾಳೆ ಪೀಠದ ಮುಂದೆ ಮಂಡಿಸುವಂತೆ ಸೂಚಿಸಿತು.ದಿನದ ಅಂತ್ಯದಲ್ಲಿ ಮತ್ತೆ ಶಾಂತಕುಮಾರ ಸ್ವಾಮಿ ಅವರು ಪೀಠದ ಮುಂದೆ ಹಾಜರಾದರು. ಆಗ ನ್ಯಾಯಾಲಯವು “ಏನಾಗಿದೆ ಎಂಬುದುರ ವಾಸ್ತವಿಕ ವರದಿಯನ್ನು ನಾಳೆ ತರಿಸಿಕೊಳ್ಳುತ್ತೇನೆ.
ಬೆಳಿಗ್ಗೆ ನೀವು ಹೇಳಿರುವುದು ಸುಳ್ಳಾಗಿದ್ದರೆ ನಿಮ್ಮ ವಿರುದ್ಧ ಕ್ರಮಕ್ಕೆ ಆದೇಶಿಸಲಾಗುವುದು. ಸಿದ್ಧರಾಗಿರಿ, ಹಾಗೆ ನಾಳೆ ನ್ಯಾಯಾಲಯದ ಮುಂದೆ ಹಾಜರಾಗಬೇಕು” ಎಂದು ಹೇಳಿ, ವಿಚಾರಣೆ ಮುಂದೂಡಿತು