ಸುದ್ದಿಲೈವ್/ತೀರ್ಥಹಳ್ಳಿ
ಶಿವಮೊಗ್ಗದಲ್ಲಿ ಹೆಚ್ಚಾದ ಮಳೆ, ಕೆಲಸಕ್ಕೆ ಹೋದ ರೈತ ಕಾಲು ಜಾರಿ ಹಳ್ಳಕ್ಕೆ ಬಿದ್ದು ಸಾವು ಕಂಡಿರುವ ಘಟನೆ ವರದಿಯಾಗಿದೆ.
ತೀರ್ಥಹಳ್ಳಿ ತಾಲೂಕಿನ ದೇವಂಗಿ ಬಳಿಯ ಉಂಟೂರು ಹಳ್ಳಕ್ಕೆ ಬಿದ್ದು ಸಾವುಕಂಡಿದ್ದಾರೆ. ಕೃಷ್ಣಮೂರ್ತಿ ನಾಯಕ್(55) ಮೃತಪಟ್ಟ ದುರ್ದೈವಿಯಾಗಿದ್ದಾನೆ.
ಮಂದಾರ್ತಿ ಮೇಳದ ಯಕ್ಷಗಾನ ಕಲಾವಿದ ಪ್ರಸನ್ನ ಎಂಬುವರ ತಂದೆ ಕೃಷ್ಣಮೂರ್ತಿ ಕೆಲಸದ ನಿಮಿತ್ತ ಗದ್ದೆಗೆ ತೆರಳಿದ್ದ ವೇಳೆ ಅವಘಢ ಸಂಭವಿಸಿದೆ ನಿನ್ನೆ ಸಂಜೆ ಘಟನೆ ನಡೆದಿದೆ.
ರಾತ್ರಿಯಿಡೀ ಕೃಷ್ಣಮೂರ್ತಿಗಾಗಿ ಅವರ ಕುಟುಂಬ ಶೋಧ ನಡೆಸಿದೆ. ಹಳ್ಳದಿಂದ ಸುಮಾರು 3 ಕಿ.ಮೀ ಕೆಳಭಾಗದಲ್ಲಿ ಕೃಷ್ಣಮೂರ್ತಿ ಅವರ ಮೃತ ದೇಹ ಪತ್ತೆಯಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೀರ್ಥಹಳ್ಳಿಯಲ್ಲಿ ಮುಂಗಾರು ಮಳೆಗೆ ಜೀವ ಕಳೆದುಕೊಂಡ ಪ್ರಕರಣದಲ್ಲಿ ಮೂರನೇ ದುರ್ಘಟನೆಯಾಗಿದೆ.
ಇದನ್ನೂ ಓದಿ-https://www.suddilive.in/2024/07/blog-post_322.html