ಸುದ್ದಿಲೈವ್/ಶಿವಮೊಗ್ಗ
ಕೇಂದ್ರ ಸರ್ಕಾರ ತಂದಿರುವ ನೂತನ ವಕ್ಫ್ ತಿದ್ದುಪಡಿ ಮಸೂದೆ 2024 ಭಾರತ ಸಂವಿಧಾನದ ಮೌಲ್ಯಗಳನ್ನು ಧಿಕ್ಕರಿಸುತ್ತಿದೆ ಮತ್ತು ಅದು ಅನ್ವಯಿಸಬಹುದಾದ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ದಾಳಿ ಮಾಡುತ್ತಿದೆ. ಈ ಮಸೂದೆ ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಮಾನತೆಯ ಹಕ್ಕುಗಳಾದ ಅನುಚ್ಛೇದ 14, 15, ಮತ್ತು 25ರ ಉಲ್ಲಂಘನೆ ಆಗಿದೆ ಎಂದು ನೂತನವಾಗಿ ಅಸ್ಥಿತ್ವಕ್ಕೆ ಬಂದ AIMIM ಜಿಲ್ಲಾ ಘಟಕ ಆರೋಪಿಸಿದೆ.
ವಕ್ಫ್ ಆಸ್ತಿಯು ಯಾವಾಗಲೂ ವಕ್ಫ್ ಆಸ್ತಿಯೇ ಆಗಿರುತ್ತದೆ, ಇದರಲ್ಲಿ ಯಾವುದೇ ಬದಲಾವಣೆ ಅಸೀಮಿತ ಮತ್ತು ಸರ್ವಸ್ವೀಕಾರವಲ್ಲ. ಕೇಂದ್ರ ಸರ್ಕಾರವು ಈ ಹೊಸ 40 ತಿದ್ದುಪಡೆಗಳನ್ನು ತಂದು ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕುಗಳ ಮೇಲೆ ಪ್ರಹಾರ ಮಾಡುತ್ತಿದೆ.
ಈ ವಿವಾದಾಸ್ಪದ ಮಸೂದೆಯನ್ನು ನಾವು ಖಂಡಿಸುತ್ತೇವೆ ಮತ್ತು ದೇಶದಾದ್ಯಾಂತ ಈ ಮಸೂದೆ ವಿರುದ್ಧ ಅಖಿಲ ಭಾರತ ಮಜ್ಲಿಸ್-ಇ-ಇತ್ತಿಹಾದುಲ್-ಮುಸ್ಲಿಮೀನ್ (AIMIM) ಸಂವಿಧಾನಾತ್ಮಕ ಹಕ್ಕುಗಳಡಿ ಪ್ರತಿಭಟನೆ ನಡೆಸಲಿದೆ ಎಂದು ಎ.ಐ.ಎಂ.ಐ.ಎಂ ಯುವ ಘಟಕದ ಅಧ್ಯಕ್ಷ ರಫಿ ಎಚ್ಚರಿಸಿದ್ದಾರೆ.
ಮೇಲ್ನೋಟಕ್ಕೆ ಈ ಮಸೂದೆ ದೇಶದಲ್ಲಿ ಧರ್ಮದ ಆಧಾರದ ಮೇಲೆ ವಿಭಜನೆ ಮೂಡಿಸಲು ಮತ್ತು ಮುಸ್ಲಿಂ ಸಮುದಾಯದ ಹಕ್ಕುಗಳನ್ನು ಕಸಿಯುವ ಪ್ರಯತ್ನವಾಗಿದೆ. ಹೀಗಾಗಿ, ಈ ತಿದ್ದುಪಡಿ ಮಸೂದೆ ತಕ್ಷಣವೇ ಕೇಂದ್ರ ಸರ್ಕಾರ ಹಿಂಪಡೆಯಬೇಕು. ಈ ಸರ್ಕಾರವು ಮುಸ್ಲಿಮರ ವಿರುದ್ಧದ ದ್ವೇಷದಿಂದ ಚಲಿಸುತ್ತಿದ್ದು, ನಮ್ಮ ಧಾರ್ಮಿಕ ಹಕ್ಕುಗಳನ್ನು ಕಾಪಾಡಲು ನಮ್ಮ ಸಂಘಟನೆ ಶಕ್ತವಾಗಿ ನಿಂತಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ-https://www.suddilive.in/2024/08/blog-post_67.html