ಸುದ್ದಿಲೈವ್/ಶಿವಮೊಗ್ಗ
AIMIM ನಗರ ಸಮಿತಿ ಯುವ ಘಟಕ ಜಿಲ್ಲಾ ಸಮಿತಿ ಮತ್ತು ಜಿಲ್ಲಾ ಉಪಾಧ್ಯಕ್ಷ ಹೊಸ ನೇಮಕಾತಿ ಮಾಡಲಾಗಿದೆ. ಅಬ್ದುಲ್ ನವೀದ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಉಳಿದಂತೆ ಜಿಲ್ಲಾ ಘಟಕದ ಪದಾಧಿಕಾರಿಗಳು ಹೀಗಿವೆ.
ಅಖಿಲ ಭಾರತ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮಿನ್ ಶಿವಮೊಗ್ಗ ಯುವ ಘಟಕದ ಜಿಲ್ಲಾ ಸಮಿತಿ ಉಪಾಧ್ಯಾಕ್ಷ ಫೈರೋಜ್, ನಗರ ಸಮಿತಿ ಅಧ್ಯಕ್ಷರಾಗಿ ಮೊಹಮ್ಮದ್ ವಸೀಖ್, ಉಪಾಧ್ಯಕ್ಷರಾಗಿ ಮೊಹಮದ್ ಸುಹೇಲ್, ಮುನಾವರ್ ಪಾಶ, ಕಾರ್ಯದರ್ಶಿ ಅಬ್ದುಲ್ ಗನಿ, ಪ್ರಧಾನ ಕಾರ್ಯದರ್ಶಿ ಸುಭಾನ್, ಕಾರ್ಯಾಧ್ಯಕ್ಷ ಮುಜಾಮುಲ್ ಖಾನ್,
ಉಸ್ಮಾನ್ ಖಾನ್, ಖಜಾಂಚಿ ಇಸ್ಮಾಯಿಲ್ ಜಬೀವುಲ್ಲಾ, ನೇಮಕಗೊಂಡಿದ್ದಾರೆ. ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಮೊಹಮದ್ ರಫಿ, ಉಪಧ್ಯಕ್ಷ ತೌಸೀಫ್ ಅಹಮದ್, ಪ್ರಧಾನಕಾರ್ಯದರ್ಶಿ ಆಹ್ತಿಶಾಮ್ ಬನ್ ಸಲೀಂ ಸಯ್ಯದ್, ಕಾರ್ಯದರ್ಶಿ ಸಯ್ಯದ್ ಜುನೇದ್ ಅಖ್ತರ್, ಖಜಾಂಚಿಯಾಗಿ ಮೊಹಮದ್ ಖಮರುಜ್ಜಮಾ ಆಯ್ಕೆಯಾಗಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ AIMIM ನೂತನ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೊಹ್ಮದ್ ರಫಿ ಮಾತನಾಡಿ, ಕೇಂದ್ರ ಸರ್ಕಾರ ವಕ್ಫ್ ಸಮಿತಿಗೆ ಕಾನೂನು ತಿದ್ದುಪಡಿ ತರುತ್ತಿದ್ದು ಇದರ ವಿರುದ್ಧ ನಮ್ಮ ವಿರೋಧವಿದೆ. ಶಿವಮೊಗ್ಗದ ವಕ್ಫ್ ಸಮಿತಿಯ ಆಸ್ತಿ ದುರುಪಯೋಗವಾಗಿದೆ. ಇದನ್ನ ಸರಿಪಡಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ-https://www.suddilive.in/2024/08/blog-post_32.html