ಪಾಠ ಮಾಡಲು ಬಂದಿಲ್ಲ. ಬಿಜೆಪಿಯ ಭದ್ರಕೋಟೆ ದ.ಕ ಜಿಲ್ಲೆ ಎಂದು ಹೇಳಲಾಗುತ್ತಿದೆ. ಆದರೆ ಬಿಜೆಪಿಗೆ ಶಕ್ತಿ ನೀಡಿದ್ದೇ ಶಿವಮೊಗ್ಗ ಜಿಲ್ಲೆ ಎಂದು ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದರು.
ಪಕ್ಷದ ಕಚೇರಿಯಲ್ಲಿ ನಡೆದ ಸದಸ್ಯತಾ ಅಭಿಯಾನ-2024 ರ ಜಿಲ್ಲಾ ಕಾರ್ಯಗಾರವನ್ನ ಉದ್ಘಾಟಿಸಿ ಮಾತನಾಡಿದರು.
ಸೇನೆ ಬಿಟ್ಟು ಬಂದಾಗಿನಿಂದ ಬಿಜೆಪಿಯ ಸಂಸದನಾದವರೆಗೆ ಈ ಜಿಲ್ಲೆಯ ಭಾನು ಪ್ರಕಾಶ್ ಬೆನ್ನಲುಬಾಗಿದ್ದರು. ಅಭಿಯಾನದ ಮಹತ್ವ ಇದರ ಮೂಲಕ ವಿಚಾರ ಪ್ರವಾಹವನ್ನ ಬೆಳಸಲು ಸಾಧ್ಯ ಎಂದರು.
ಶ್ರೇಷ್ಠವಾದ ಕೆಲಸ ಕಟ್ಟಲು ಹೊರಟವರು ಬಿಜೆಪಿಯವರು. ಪಕ್ಷ ಹುಟ್ಟಿದ್ದು ನೆಲದ ಸಂಸ್ಜೃತಿಯ ಆಧಾರವಾಗಿ ಕಟ್ಟಲಾಗಿದೆ. ವಿಶ್ವಕ್ಕೆ ಮಾದರಿಯಾಗುವಂತೆ ಬೆಳೆಸಬೇಕಿದೆ ಎಂದು ಕರೆ ನೀಡಿದರು.
ಬಿಜೆಪಿ ಇತರೆ ಪಕ್ಷಕ್ಲಿಂತ ವಿಭಿನ್ನವಾದ ಪಕ್ಷವಾಗಿದೆ ವಿಚಾರ, ಪ್ರಜಾಪ್ರಭುತ್ವದ ಅಡಿಯಲ್ಲಿ ಪಕ್ಷವನ್ನ ಕಟ್ಟಲಾಗಿದೆ. . ಜಮ್ಮೂ ಕಾಶ್ಮೀರದಲ್ಲೂ ಪಕ್ಷ ಸರ್ಕಾರ ರಚಿಸಿದ ಉದಾಯರಣೆ ಇದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸಿದ್ದೇವೆ. ದೇಶದ ಎಲ್ಲೆಡೆ ಬಿಜೆಪಿ ಬಾವುಟ ಹಾರುತ್ತದೆ. ಪ್ರಜಾಪ್ರಭುತ್ವ ಪಕ್ಷವಾದ ಕಾರಣ ಬೆಳೆದು ನಿಂತಿದೆ ಎಂದರು.
ಹಣ ಇಲ್ಲದ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟು ಸಂಸದರನ್ಬಾಗಿ ಗೆಲ್ಲಿಸಿದ ಪಕ್ಷ ಬಿಜೆಪಿಯಾಗಿದೆ. ಅಭಿಯಾನದ ಮೂಲಕ ಪಕ್ಷ ಬೆಳೆಸಬೇಕಿದೆ. ದ.ಕ ಸಂಘಟನೆ ಶಿವಮೊಗ್ಗ ಸಂಘಟನೆಯಿಂದ ಕಲಿಯಬೇಕಿದೆ. 2014 ರ ನಂತರ ಮೊದಲ ಬಾರಿಗೆ ಡಿಜಿಟಲೈಜ್ ಆದ್ವಿ. ಮೊದಲನೇ ಬಾರಿಗೆ ಆನ್ ಲೈನ್ ಅಭಿಯಾನದ ಮೂಲಕ ಗೃಹ ಮಂತ್ರಿ ಅಮಿತ್ ಶಾ ಚಾಲನೆ ನೀಡಿದರು. 2014 ರಲ್ಲಿ 11 ಕೋಟಿ ಸದಸ್ಯತ್ವ ಮಾಡಿಸಲಾಗಿತ್ತು ,2019 ರಲ್ಲಿ 19 ಕೋಟಿ ಸದಸ್ಯತ್ವ ಮಾಡಲಾಯಿತು ಎಂದರು.
ಈ ಬಾರಿ ಸೆಪ್ಟಂಬರ್ ನಿಂದ ನವೆಂಬರ್ ವರೆಗೆ ಅಭಿಯಾನ ನಡೆಯಲಿದೆ. ಎರಡು ರೀತಿಯಲ್ಲಿ ಅಭಿಯಾನ ನಡೆಯುತ್ತದೆ. ಇದರಿಂದ ಸರ್ವ ವ್ಯಾಪಿ ಸರ್ವ ಸ್ಪರ್ಷಿಯಾಗಲಿದ್ದೇವೆ. 18-25 ರವರೆಗೆ ಇರುವ ಪ್ರಯಾದ ಯುವಕರು ಮಾತ್ರವಲ್ಲ ಎಲ್ಲಾ ವಯಸಿನವರು ಎಲ್ಲಾ ಜಾತಿಯವರನ್ನ ಮತ್ತು ಮಹಿಳೆಯರನ್ನ ಮುಟ್ಟುವ ಕೆಲಸ ಆಗಬೇಕು ಎಂದರು.
ಪಕ್ಷದ ವಿರೋಧಿಗಳನ್ನೇ ಸೆಳೆದು ಅವರನ್ನ ಸಮರ್ಥಕರನ್ನಾಗಿ ಮಾಡಬೇಕು ನಾಳೆ ಅವರನ್ನ ಪಕ್ಷದ ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. 7 T ಆಧಾರದಲ್ಲಿ ಅಭಿಯಾನವಾಗಬೇಕು ಟಾಸ್ಕ್, ಟೈಮ್ ಲೈನ್, ಟೀಮ್ ಅಂಡ್ ಟ್ರೈನಿಂಗ್, ಟಾರ್ಗೆಟ್, ಟ್ರ್ಯಾಕಿಂಗ್, ಟ್ರಾವೆಲಿಂಗ್, ಟಚ್ ಥೆರಪಿ ಎಂಬ ಏಳಿಲು ಟಿ ಅಡಿ ಪಕ್ಷದ ಅಭಿಯಾನ ನಡೆಯಬೇಕಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಸಂಸದ ರಾಘವೇಂದ್ರ, ಮಾಜಿ ಸಚಿವ ಹಾಲಪ್ಪ, ಶಾಸಕ ಚೆನ್ನಬಸಪ್ಪ, ಎಂಎಲ್ ಸಿಗಳಾದ ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ದತ್ತಾತ್ರಿ ಉಪಸ್ಥಿತರಿದ್ದರು.