ಸುದ್ದಿಲೈವ್/ಶಿವಮೊಗ್ಗ
ತ್ಯಾಗಕ್ಕೆ, ಸತ್ಯಕ್ಕೆ ಕಾಂಗ್ರೆಸ್ ಪಕ್ಷ ಹೆಸರು ವಾಸಿ ಎಂದು ಮಹಿಳ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಅವರು ಇಂದು ಬಿಆರ್ ಪಿಯಲ್ಲಿ ಭದ್ರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಇನ್ನೇನು 6 ತಿಂಗಳಲ್ಲಿ ಪುರನ್ ರಚನೆ ಆಗುವ ಸುಳಿವನ್ನ ನೀಡಿದ್ದಾರೆ.
ಇದಕ್ಕೂ ಮೊದಲು ಬಿಳಕಿ ಶ್ರೀಗಳು ವೇದಿಕೆಯ ಮೇಲೆ ಭದ್ರಾವತಿ ಶಾಸಕ ಬಿಕೆ ಸಂಗಮೇಶ್ವರ್ ಅವರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸ್ಥಾನ ಕೊಡಲೇ ಇಲ್ಲವಲ್ಲ ಎಂದು ಕೇಳಿದ್ದರು. ಇದಕ್ಕೆ ಪಕ್ಕದಲ್ಲಿಯೇ ಇದ್ದ ಸಚಿವ ಮಧು ಬಂಗಾರಪ್ಪ ನಿಮ್ಮ ಸ್ಥಾನ ಬಿಟ್ಟುಕೊಡ್ತೀರಾ ಅಥವಾ ನಾನು ಬಿಟ್ಟು ಕೊಡಬೇಕಾ ಎಂಬ ಪ್ರಶ್ನೆಯನ್ನ ಹಾಕಿದ್ದರು.
ಇದೇ ಪ್ರಸಂಗವನ್ನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವೇದಿಕೆ ಮೇಲೆ ಪ್ರಸ್ತಾಪಿಸಿ ಮಾತನಾಡಿ, ಇನ್ನೇನು 6 ತಿಂಗಳಲ್ಲಿ ಸಚಿವ ಸಂಪುಟ ರಿಶಫಲ್ ಆಗಲಿದೆ ಎಂದು ಹೇಳಿದರು. ಅದು ನನ್ನ ಸ್ಥಾನನೂ ಇರಬಹುದು ಅದು ಮಧು ಬಂಗಾರಪ್ಪನವರ ಸ್ಥಾನವೂ ಇರಬಹುದು ಎಂದು ವೇದಿಕೆಯಲ್ಲಿ ಹೇಳಿರುವುದು ಸಚಿವ ಸಂಪುಟದ ಪುನರ್ ರಚನೆಗೆ ಶಕ್ತಿ ನೀಡಿದೆ.
ಇದೇ ವೇಳೆ ತರೀಕೆರೆ ಶಾಸಕರಿಗೂ ಸಚಿವ ಸ್ಥಾನ ಕೊಡಬೇಕು ಎಂದು ಅಭಿಮಾನಿಯೊಬ್ಬರು ಹೇಳಿದ್ದು ಸಚಿವೆಯ ಭಾಷಣಕ್ಕೆ ಬ್ರೇಕ್ ಬಿದ್ದಿತ್ತು. ಅವಕಾಶ ಬಂದರೆ ಅವರಿಗೂ ಸಚಿವ ಸ್ಥಾನ ಸಿಗಲಿದೆ ಎಂದು ಸಚಿವೆ ಸಂಬಾಳಿಸಿದ್ದು ಗಮನ ಸೆಳೆದಿದೆ.
ನಂತರ ಮಾಧ್ಯಮದ ಜೊತೆ ಮಾತನಾಡಿದ ಸಚಿವೆ ಸಧ್ಯಂಕ್ಕಂತೂ ಸಚಿವಸಂಪುಟ ವಿಸ್ತರಣೆ ಅಥವಾಪುನರ್ ರಚನೆ ಇಲ್ಲ. ಮುಂದಿನ ದಿನಗಳು ಹೇಗೆ ಗೊತ್ತಿಲ್ಲವೆಂದು ಹೇಳಿರುವುದು ಸಚಿವ ಸಂಪುಟ ಪುನರ್ ರಚನೆ ಆಗುವುದರ ಸುಳಿವು ನೀಡುದ್ರಾ ಎಂಬ ಅನುಮಾನ ಜೀವಂತವಾಗಿ ಉಳಿದಿದೆ.