ಸುದ್ದಿಲೈವ್/ಶಿವಮೊಗ್ಗ
ಜಿಲ್ಲಾ ಪಂಚಾಯಿತಿಯ ಮುಂಭಾಗ ಆ.22 ರಂದು ಗ್ರಾಮ ಪಂಚಾಯಿತಿಯ ವಿವಿಧ ವೃಂದದ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಸಿಐಟಿಯು ತೀರ್ಮಾನಿಸಿದೆ.
ಸುದ್ದಿಗೋಷ್ಠಿ ನಡೆಸಿದ ಸಂಘಟನೆಯ ರಂಗಸ್ವಾಮಿ 2017, 31/10 ರ ಒಳಗೆ ಗ್ರಾಪಂ ಸೌಧ ನಡವಳಿ ಮುಖಂತರ ಕರ್ತವ್ಯಕ್ಕೆ ನೇಮಕಾತಿ ಆದಂತಹ ನೌಕರಿಗೆ ಏಕಕಾಲದಲ್ಲಿ ಅನುಮೋದನೆ ನೀಡಬೇಕು. ಗ್ರಾಪಂ ನೌಕರರ ಪ್ರಸ್ತುತ ನಿರ್ವಾಹಕರನ್ನ ಬದಲಾಯಿಸಬೇಕು. ನೌಕರರಿಗೆ ಪ್ರೊಟೆಕ್ಟಿವ್ ಕಿಟ್ ನೀಡಬೇಕು.
ನೌಕರರಿಗೆ ಪ್ರತಿ ವರ್ಷ ಸಮವಸ್ತ್ರ ಮತ್ತು ಐಡಿ ಕಾರ್ಡ್ ನೀಡಬೇಕು. ಗ್ರಾಪಂಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೈಬಿಟ್ಟು ಸರ್ಕಾರದ ಅಧಿಸೂಚನೆಯಂತೆ ಪ್ರಕರಣ 112 ಮತ್ತು 13 ಕ್ರಮ ವಹಿಸಬೇಕು. ಹಾಗೂ ಇವೆಲ್ಲವೂ ಸೇರಿ 9 ಬೇಡಿಕೆಯನ್ನ ಈಡೇರಿಸಬೇಕೆಂದು ಆಗ್ತಹಿಸಿ ಪ್ರತಿಭಟಿಸಲಾಗುತ್ತಿದೆ ಎಂದರು.
ಕನಿಷ್ಠ ವೇತನಕ್ಕೆ ನಡಾವಳಿಯಲ್ಲಿದ್ದರೂ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಕರವಸೂಲಿಗಾರ ಮತ್ತು ಇತರರಿಗೆ ಯಾವುದೇ ಸರಿಯಾದ ವೇತನ ನೀಡುತ್ತಿಲ್ಲ. ಅದೂ ಸಹ ಸರಿಯಾದ ವೇಳೆಗೆ ವೇತನ ನೀಡುತ್ತಿಲ್ಲ ಎಂದರು.