ನಾಲ್ಕು ದಿನ ನಗರದಲ್ಲಿ ಚುಂಚಾದ್ರಿ ಕಪ್ 2024 ವಾಲಿಬಾಲ್ ಸಂಭ್ರಮ



ಸುದ್ದಿಲೈವ್/ಶಿವಮೊಗ್ಗ


ಆದಿಚುಂಚನಗಿರಿಯ ವಿದ್ಯಾಸಂಸ್ಥೆಯಿಂದ ನಡೆಯುತ್ತಿರುವ ಚುಂಚಾದ್ರಿ ವಾಲಿಬಾಲ್  ಕಪ್ ಗೆ 22 ರ ಸಂಭ್ರಮ. ಇದರ ಅಂಗವಾಗಿ   ಆ.11 ರಿಂದ ಆ.14 ರ ವರೆಗೆ ಚುಂಚಾದ್ರಿ ಕಪ್ 2024 ವಾಲಿಬಾಲ್ ಕಪ್ ನ್ನ ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿದೆ. 



2000 ನೇ ಇಸವಿಯಲ್ಲಿ ಆರಂಭವಾದ ಚುಂಚಾದ್ರಿ ಕಪ್ ಆರಂಭವಾಗಿದೆ. 22 ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನ ಆಯೋಜಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ಪ್ರೌಢ ಶಾಲಾ ಬಾಲಕರ 55 ತಂಡಗಳು 30 ಬಾಲಕಿಯರ ತಂಡಗಳು ಭಾಗಿಯಾಗಲಿದ್ದಾರೆ. ಅತ್ಯುತ್ತಮ ಆಟ ಪ್ರದರ್ಶಿಸಿದವರಿಗೆ ಬೆಸ್ಟ್ ಅಟಾಕರ್ಸ್, ಬೆಸ್ಟ್ ಬೂಸ್ಟರ್, ಬೆಸ್ಟ್ ಆಲ್ ರೌಂಡರ್, ಬೆಸ್ಟ್ ಲೀಬ್ರೋ, ಪ್ರಶಸ್ತಿಗಳನ್ನ ನೀಡಲಾಗುವುದು.


ಬಾಲಕರ ವಿಭಾಗದಲ್ಲಿ  ಪ್ರಥಮ ಸ್ಥಾನ ಪಡೆದವರಿಗೆ 5000 ರೂ.ದ್ವಿತೀಯ ಬಹುಮಾನ-4000, ತೃತೀಯ ಸ್ಥಾನ ಪಡೆದವರಿಗೆ -3000, ನಾಲ್ಕನೇ ಸ್ಥಾನ ಪಡೆದವರಿಗೆ 2000 ಬ ರೂ. ಬಾಲಕಿಯರ ವಿಭಾಗದಲ್ಲೂ ಬಹುಮಾನ ನೀಡಲಾಗುವುದು. 


ನಿಬಂಧನೆಗಳು


17 ವರ್ಷ ಮೀರಿರಬಾರದು, 18 ಕಾಲಂ ಇರುವ ಗುರುತಿನ ಚೀಟಿ ತರಬೇಕು. ಇತ್ತೀಚಿನ ಭಾವಚಿತ್ರದೊಂದಿಗೆ ಪ್ರಾಂಶುಪಾಲರ ದೃಢೀಕರಣ ಪತ್ರವನ್ನು ದೈಹಿಕ ಶಿಕ್ಷಕರು ತರತಕ್ಕದ್ದು, ಶಾಲೆಯ ಡೈಸ್ ಕೋಡ್, ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಕಡ್ಡಾಯ, ವಿದ್ಯಾರ್ಥಿಗಳ ಎಸ್ ಟಿಎಸ್ ಸಂಖ್ಯೆ ಕಡ್ಡಾಯ, ಕ್ರೀಡಾ ಸಮವಸ್ತ್ರ ಕಡ್ಡಾಯ ವಾಗಿ ಧರಿಸಿರಬೇಕು ಎಂಬ ನಿಬಂಧನೆಗಳನ್ನ ಹಾಕಲಾಗಿದೆ. 


ಆ.14 ರಂದು ರಸ್ತೆ ಓಟ


77 ನೇ ಸ್ವಾತಂತ್ರೋತ್ಸವದ ಅಂಗವಾಗಿ ನಗರದ ಆದಿಂಚನಗಿರಿ ಶಿಕ್ಷಣ ಟ್ರಸ್ಟ್ ಮತ್ತು ಚುಂಚಾದ್ರಿ ಸ್ಪೋರ್ಟ್ಸ್ ಕ್ಲಬ್ ನ ವತಿಯಿಂದ ಬಾಲಕ ಮತ್ತು ಬಾಲಕಿಯರ ಆಗಸ್ಟ್ 14 ರಂದು ನೆಹರು ಕ್ರೀಡಾಂಗಣದಿಂದ ರಸ್ತೆ ಓಟದ ಸ್ಪರ್ಧೆಯನ್ನ ಏರ್ಪಡಿಸಲಾಗಿದೆ. 


ಪ್ರಾಥಮಿಕ ಶಾಲಾ ಬಾಲಕಿಯರಿಗೆ 2 ಕಿಮಿ, ಪ್ರಾಥಮಿಕ‌ಶಾಲಾ‌ಬಾಲಕಿಯರಿಗೆ ಹಾಗೂ ಪ್ರೌಢ ಶಾಲಾ ಬಾಲಕಿಯರಿಗೆ 3 ಕಿಮಿ, ಪ್ರೌಢಶಾಲ ಬಾಲಕರಿಗೆ 5ಕಿಮಿ ಆಯೋಜಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close