ಸುದ್ದಿಲೈವ್/ಭದ್ರಾವತಿ
ತುಂಬಿದ ಭದ್ರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಬಾಗಿನ ಅರ್ಪಿಸಿದ್ದಾರೆ. ಬಾಗಿನ ಅರ್ಪಿಸಲು ಸಚಿವ ಮಧುಬಂಗಾರಪ್ಪ, ಭದ್ರಾವತಿ ಶಾಸಕ ಸಂಗಮೇಶ್ ಸಾಥ್ ನೀಡಿದ್ದಾರೆ.
ಭದ್ರಾವತಿ ತಾಲೂಕಿನ ಬಿಆರ್ ಪಿಯಲ್ಲಿರುವ ಭದ್ರಾ ಜಲಾಶಯಕ್ಕೆ ಇಂದು ಸಚಿವೆ ಬಾಗಿನ ಅರ್ಪಿಸಿದ್ದಾರೆ. ಶಿವಲಿಂಗಕ್ಕೆ ಪೂಜೆ, ಹಾಗೂ ಜಲಾಶಯದ ನದಿಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಯಿತು.
ತರೀಕೆರೆ, ಶಿವಮೊಗ್ಗ ಜಿಲ್ಲೆಯ ವಿವಿಧ ನಾಯಕರು ಭಾಗಿಯಾಗಿದ್ದರು. ಶಾಸಕ ಜಿ.ಹೆಚ್.ಶ್ರೀನಿವಾಸ್, ವಿವಿಧ ನಾಯಕರು ಭಾಗಿಯಾಗಿದ್ದರು. ನಂತರ ಮಾಧ್ಯಮಗಳಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಭದ್ರೆಗೆ ಬಾಗಿನ ಅರ್ಪಿಸಿದ್ದೇವೆ. ತುಂಬಾ ಸಂತೋಷವಾಯ್ತು. ರಾಜ್ಯದಲ್ಲಿ ಮುಂಗಾರು ಮಳೆ ಜಾಸ್ತಿಯಾಗಿದೆ ಎಂದರು.
ಬಹಳಷ್ಟು ಮಳೆಯಾಗಿ ಹಳ್ಳ ಕೊಳ್ಳ ಜಲಾಶಯ ತುಂಬಿ ಹರಿಯುತ್ತಿವೆ. ರಾಜ್ಯ ಸಮೃದ್ದಿಯಾಗಿದೆ. ಮಲೆನಾಡು ನೋಡಿ ತುಂಬಾ ಸಂತೋಷ ವಾಯ್ತು ಎಂದರು.
ತುಂಗಾಭದ್ರಾ ಗೇಟ್ ಓಪನ್ ವಿಚಾರ
ತುಂಗಭದ್ರ ಜಲಾಶಯದಲ್ಲಿ ಗೇಟ್ ಓಪನ್‌ಆದ ಬೆನ್ನಲ್ಲೇ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ ನೀಡಿದ್ದಾರೆ. ನೀರಾವರಿ ಸಚಿವರು ಈಗಾಗಲೇ ಅಲ್ಲಿಗೆ ಹೋಗಿದ್ದಾರೆ. ಎಲ್ಲಾ ರೀತಿಯ ಪ್ರಯತ್ನ ನಮ್ಮ ಸರ್ಕಾರ ಹಾಗೂ ಅಧಿಕಾರಿಗಳು ಮಾಡ್ತಾ ಇದ್ದಾರೆ. ಪ್ರತಿಯೊಂದಕ್ಕೂ ಕರ್ತವ್ಯ ಲೋಪ ಅಂತಾ ಹೇಳೊಕೆ ಆಗೋಲ್ಲ. ಚೆಕ್ ಮಾಡಬೇಕು, ಕಳೆದ ಬಾರಿ ಬರಗಾಲ ಆಗಿತ್ತು. ಈ ಬಾರಿ ಉತ್ತಮ ಮಳೆಯಾಗಿದೆ ಎಂದರು.
ಡ್ಯಾಂ ಭರ್ತಿಯಾಗಿವೆ. ಕಾಂಗ್ರೆಸ್ ನವರು 50 ವರ್ಷದಲ್ಲಿ ಏನು ಮಾಡಿದ್ದಾರೆ ಎಂದು ಬಿಜೆಪಿ ಕೇಳುತ್ತಿದೆ. ಡ್ಯಾಂ ಕಟ್ಟಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಡ್ಯಾಂ ದುರಸ್ತಿ ಆಗಬೇಕಿದೆ. ಎಲ್ಲಾ ಡ್ಯಾಂ ನಲ್ಲೂ ಸಣ್ಣ ಪುಟ್ಟ ಲೋಪ ಇವೆ. ಮುಂಜಾಗ್ರತಾ ಕ್ರಮ ಏನ್ ಆಗಬೇಕು ಅದು ನಮ್ಮ ಸರ್ಕಾರ ತೆಗೆದುಕೊಳ್ಳುತ್ತದೆ ಎಂದರು.
ಮಾಂಟೆಸರಿ ವಿಸ್ತರಣೆ
ಮಾಂಟೇಸರಿ ವಿಸ್ತರಣೆ ವಿಚಾರವಾಗಿ ಮಾತನಾಡಿದ ಸಚಿವೆ, 18700 ಅಂಗನವಾಡಿಗಳನ್ನ ಕೇಂದ್ರ ಸರ್ಕಾರ ಗುರುತಿಸಿದೆ. ಇವುಗಳನ್ನ ಸಕ್ಷಮ ಅಂಗನವಾಡಿ ಎಂದು ಗುರುತಿಸಿ ಅವುಗಳ ಅಭಿವೃದ್ಧಿಗೆ 170 ಕೋಟಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಇದನ್ನ ಮಹಿಳ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಜೊತೆ ನಿರ್ವಹಿಸಲಾಗುವುದು ಎಂದರು.