ನಾಡಹಬ್ಬ ದಸರಾ ಅಚರಣೆಗೆ 1.5 ಕೋಟಿ ಬಿಡುಗಡೆ-ಹೆಚ್.ಸಿ.ಯೋಗೀಶ್



ಸುದ್ದಿಲೈವ್/ಶಿವಮೊಗ್ಗ


ದಸರಾ ನಾಡಹಬ್ಬವನ್ನ ವಿಜೃಂಭಣೆಯಲ್ಲಿ ನಡೆಸಲು ತೀರ್ಮಾನಿಸಿದ್ದು ಇತ್ತೀಚೆಗೆ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ 1.5 ಕೋಟಿ ಹಣವನ್ನ ತೆಗೆದಿಡಲು ನಿರ್ಧರಿಸಲಾಗಿದೆ. 


ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಮಾಜಿ ಕಾರ್ಪರೇಟರ್ ಹೆಚ್ ಸಿ ಯೋಗೀಶ್ ಕಳೆದ ಬಾರಿ ಸರ್ಕಾರದಿಂದ ಕಡಿಮೆ ಹಣ ಬಂದಿತ್ತು. ಈ ಬಾರಿ ನಡೆಯುವ 9 ದಿನಗಳ ಕಾಲ ನಡೆಯುವ ಹಬ್ಬಕ್ಕೆ 150 ಲಕ್ಷ ರೂ ನಿಗದಿಪಡಿಸಲಾಗಿದೆ.


ಜಂಬೂಸವಾರಿ, ಸ್ವಾಗತ ದಸರಾ, ಸಾಂಸ್ಕೃತಿಕ ದಸರಾ, ಮಹಿಳಾ ದಸರಾ, ರಂಗದಸರಾ, ಯೋಗ ದಸರಾ, ಯುವ ದಸರಾ, ಚಲನಚಿತ್ರ ದಸರಾ, ಆಹಾರ ದಸರಾ, ಮಕ್ಕಳ ದಸರಾ, ಕಲಾ ದಸರಾ, ಪರಿಸರ ದಸರಾ, ರೈತ ದಸರಾ,  ಆಚರಣೆಗಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತಾಧಿಕಾರಿ  ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಆಗಿರುವ ಅಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶಿಸಿದ್ದಾರೆ. 



ಕಲಾವಿಧರು ಸೇರಿದಂತೆ ಹಲವು ಸಮಿತಿಗಳ ಸಭೆಯನ್ನ ಡಿಸಿಯವರು ನಡೆಸಲಿದ್ದಾರೆ. ಆಯುಕ್ತರನ್ನ ಅಧ್ಯಕ್ಷರನ್ನಾಗಿ ಮಾಡಲು ಕೋರಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಿಡಿಪಿಐ ದಸರಾಗೆ ವಿಶೇಷ ಅಧಿಕಾರಿ ನೇಮಿಸಬೇಕೆಂದು ಕೋರಲಾಗಿದೆ. 


ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಬೇಕು. ನಗರದ ವಿವಿಧ ಭಾಗದಿಂದ ಬರುವ 150 ದೇವರುಗಳು ಭಾಗಿಯಾಗಲಿದ್ದಾರೆ ಎಂದ ಅವರು  ಕಳೆದ ಬಾರಿ 40 ಲಕ್ಷ ಪಾಲಿಕೆ ಮತ್ತು ಸರ್ಕಾರ 50 ಲಕ್ಷ ಬಂದಿತ್ತು. ಈ ಬಾರಿ ಪಾಲಿಕೆಯಿಂದಲೇ 1.5 ಕೋಟಿ ಬಿಡುಗಡೆ ಮಾಡಲಾಗಿದೆ. ಪ್ರತಿಬಾರಿ ಸಿಎಂಗೆ ಹೋಗಿ ಕೇಳಬೇಕಿತ್ತು. ಈ ಬಾರಿ ಸರ್ಕಾರವೇ ಅನುಮತಿ ನೀಡಿದೆ ಎಂದರು.


ಅಂಬಾರಿಗೆ ಸಕ್ರೆಬೈಲಿನಿಂದ ಆನೆ ತರಿಸಲು ಡಿಸಿಗೆ ಮನವಿ ಸಲ್ಲಿಸಲಾಗಿದೆ. ಡಿಸಿಯವರು ಅರಣ್ಯ ಸಚಿವರಿಂದ ಅನುಮತಿ ಪಡೆಯಲಿದ್ದಾರೆ. ಕಳೆದ ಬಾರಿ ಆನೆಯೊಂದು ಮರಿಗೆ ಜನ್ಮ ನೀಡಿದ ಪರಿಣಾಮ ಅಂಬಾರಿ ಸ್ಥಗಿತವಾಗಿತ್ತು. ಈ ಬಾರಿ ಪ್ರತಿ ಬಾರಿಯಂತೆ ನಡೆಯುವ ಅಂಬಾರಿ ನಡೆಯುವ ನಿರೀಕ್ಷೆ ಇದೆ ಎಂದರು.  


ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ, ಮಾಜಿ ಕಾರ್ಪರೇಟರ್ ಗಳಾದ  ಧೀರಾಜ್, ರಮೇಶ್ ಹೆಗ್ಡೆ, ಮಹೆಕ್ ಶರೀಫ್, ಯಮುನಾವರಂಗೇಗೌಡ, ಶಾಮೀರ್ ಖಾನ್, ಕಾಙಗ್ರೆಸ್ ನ ರಂಗೇಗೌಡ, ಕೆ.ರಂಗನಾಥ್, ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಕಲೀಂ ಪಾಶ ಮೊದಲಾದವರು ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close