ಸುದ್ದಿಲೈವ್/ಶಿವಮೊಗ್ಗ
ಸಂಚಿತ ನಿಧಿ ದುರ್ಬಳಕೆ ಕುರಿತು ಎಂ ಎಲ್ ಸಿ ಡಿ.ಎಸ್.ಅರುಣ್ ಇಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿ ತನಿಖೆಗೆ ಒತ್ತಾಯಿಸಿದ್ದಾರೆ.
ಜಿಲ್ಲಾಪಂಚಾಯತ್ ಮತ್ತು ತಾಲೂಕು ಪಂಚಾಯತ್ ಗಳಿಗೆ ಹಿಂದೆ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನದಲ್ಲಿ 1494 ಕೋಟಿ ಹಣ ಉಳಿಕೆಯಾಗಿತ್ತು. ಇದು ಒಟ್ಟು ರಾಜ್ಯಗಳ ಜಿಪಂ ಮತ್ತು ತಾಪಂ ನಿಂದ ಉಳಿದ ಹಣವಾಗಿತ್ತು.
ಈ ಹಣ ಎಲ್ಲಿಗೆ ಹೋಯ್ತು ಎಂದು ವಿಧಾನ ಪರಿಷತ್ ನಲ್ಲಿ ಶಾಸಕ ಡಿ ಎಸ್ ಅರುಣ್ ಸರ್ಕಾರಕ್ಕೆ ಪ್ರಶ್ನಿಸಿದಾಗ ಸಿಎಂ ಸಿದ್ದರಾಮಯ್ಯನವರು ಟ್ರಜರಿಗೆ ಹೋಗಿರುವುದಾಗಿ ಹೇಳಿದ್ದರು. ಇದನ್ನ ಪರಿಶೀಲಿಸಿದಾಗ ಟ್ರಜರಿಗೆ ಹಣ ಹೋಗದೆ ಇರುವುದು ತಿಳಿದು ಬಂದಿದೆ.
ಈ ಬೆನ್ನಲ್ಲೇ ಇಂದು ಡಿ.ಎಸ್.ಅರುಣ್ ರಾಜ್ಯಪಾಲ ಗೆಹ್ಲೋಟ್ ರನ್ನ ಭೇಟಿಯಾಗಿ ಸಂಚಿತ ಹಣ ದುರ್ಬಳಕೆಯಾಗಿದೆ. ಇದರ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದ ಶ್ರೀ ಸಿದ್ದರಾಮಯ್ಯ ಅವರಿಂದ ರಾಜ್ಯದ ಹಣಕಾಸು ಅವ್ಯವಹಾರ ಮತ್ತು ಸಂಚಿತ ನಿಧಿಯ ದುರುಪಯೋಗ ಹಾಗೂ ಸಂವಿಧಾನದ ಬಾಧ್ಯತೆಯ ಉಲ್ಲಂಘನೆ ಮತ್ತು ಅಸಾಂವಿಧಾನಿಕ ಹಣಕಾಸು ವ್ಯವಹಾರದ ಕುರಿತು ತನಿಖೆ ನಡೆಸಬೇಕೆಂದು ಮನವಿ ನೀಡಿದರು.
ಈ ಪ್ರಕರಣ ಮೂಡ ಹಗರಣದಂತೆ ಸಿಎಂಗೆ ಎರಗಿ ಬರಲಿದೆಯಾ ಅಥವಾ ಏನಾಗಲಿದೆ ಎಂಬ ಕುತೂಹಲ ಮೂಡಿಸಿದೆ.