ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಇಂದುಮತದಾನ ನಡೆದಿದ್ದು ಶೇ.99 ರಷ್ಟು ಮತದಾನವಾಗಿದೆ.
14 ಸ್ಥಾನದ ನಿರ್ದೇಶಕರ ಆಯ್ಕೆಗಾಗಿ ನಡೆಯುವ ಶಿಮೂಲ್ ಚುನಾವಣೆಯಲ್ಲಿ 12 ಸ್ಥಾನಕ್ಕೆಮತ ಚಲಾವಣೆಯಾಗಿದೆ. ಮಾಚೇನಹಳ್ಳಿ ಡೈರಿಯಲ್ಲಿ ಮತದಾನ ಬೆಳಿಗ್ಗೆ 9 ರಿಂದ 4 ಗಂಟೆಯ ವರೆಗೆ ಮತಚಲಾವಣೆಯಾಗಿದೆ.
ಶಿವಮೊಗ್ಗದಲ್ಲಿ 264 ಮತಗಳಲ್ಲಿ 264 ಮತಗಳು ಚಲಾವಣೆಯಾದರೆ, ಸಾಗರದಲ್ಲಿ 256 ಮತ್ತಗಳಲ್ಲಿ 255 ಮತಗಳು, ದಾವಣಗೆರೆಯಲ್ಲಿ 362 ರಲ್ಲಿ 361 ಮತ್ತು ಚಿತ್ರದುರ್ಗದಲ್ಲಿ 289 ಮತಗಳಲ್ಲಿ 289 ಮತಗಳು ಚಲಾವಣೆಯಾಗಿದೆ. ಅಂದರೆ 1171 ಮತಗಳಲ್ಲಿ 1169 ಮತಗಳು ಚಲಾವಣೆಯಾಗಿದೆ.
ಅಂದರೆ ಎರಡು ಮತಗಳು ಮಾತ್ರ ಚಲಾವಣೆಯಾಗಿಲ್ಲ. 14 ಸ್ಥಾಗಳಲ್ಲಿ ಆರ್ಎಂ ಮಂಜುನಾಥ ಗೌಡ ಮತ್ತು ವಿದ್ಯಾಧರ ಎಂಬುವರು ಆಯ್ಕೆಯಾಗಿದ್ದಾರೆ. ಉಳಿದ 12 ಜನ ನಿರ್ದೇಶಕರ ಹಣೆಬರಹ ಇಂದು ರಾತ್ರಿಯ ಒಳಗೆ ತಿಳಿದುಬರಲಿದೆ.