ಸುದ್ದಿಲೈವ್/ಶಿವಮೊಗ್ಗ
ಜಲಾಶಯಗಳು ಭರ್ತಿಯಾಗಿವೆ. ರೈತರು ಸಂತಸದಿಂದ ಇದ್ದಾರೆ. ಕೆಲವು ಕಡೆ ಅನಾಹುತವಾಗಿವೆ. ಸಾರ್ವಜನಿಕರು ಹುಷಾರಗಿರುವಂತೆ ಸಚಿವ ಮಧು ಬಂಗಾರಪ್ಪ ಮನವಿ ಮಾಡಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕು ಮಟ್ಟದ ಅತಿವೃಷ್ಠಿ ವೀಕ್ಷಿಸಲಾಗಿದೆ. ಅಧಿಕಾರಿಗಳ ವರದಿ ತರಿಸಿಕೊಂಡಿದ್ದೇವೆ. ಯಾವುದೇ ತೊಂದರೆ ಇಲ್ಲವಾಗಿದೆ. ಭದ್ರಾವತಿಯಲ್ಲೂ ಕಾಳಜಿ ಕೇಂದ್ರ ಆರಂಭಿಸಿದ್ದೇವೆ. ಸಿಎಂ ಅವರು ಎಚ್ಚರದಿಂದ ಇರಲು ಸೂಚಿಸಿದ್ದಾರೆ.
ಮಳೆಯಿಂದ ಅನಧಿಕೃತ ಮನೆಗಳಿಗೆ ಪರಿಹಾರ ನೀಡಲುಸಿಎಂ ಸೂಚಿಸಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಮನೆ ಹಾಳಾದರೆ ಐದು ಲಕ್ಷ ರೂ. ಘೋಷಿಸಲಾಗಿತ್ತು. ಆದರೆ ಅದು ದುರುಪಯೋಗವಾಗಿತ್ತು. ಶಿಫಾರಸು ಇರುವವರಿಗೆ 5 ಲಕ್ಷ ನೀಡಲಾಗಿತ್ತು. ಕೆಲವರಿಗೆ ಪರಿಹಾರವೇ ಸಿಗಲಿಲ್ಲ. ಈಗ ಮನೆ ಹಾಳಾದರೆ ತಕ್ಷಣಕ್ಕೆ 50 ಸಾವಿರ ರೂ. ನೀರಲಾಗುತ್ತಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲು ಹೆಚ್ಚಾಗಿವೆ. ಭಾಗಶಃ 1.20 ಲಕ್ಷ ರೂ. ಹಣ ಪರಿಹಾರ ನೀಡಲಾಗುತ್ತಿದೆ.
ಮನೆ ಕಳೆದುಕೊಂಡವರಿಗೆ ಅಧಿಕೃತ ಮತ್ತು ಅನಧಿಕೃತ ಮನೆಗಳಿಗೆ ಪೂರ್ಣ ಮನೆಯನ್ನ ಕಟ್ಟಿಸಿಕೊಡುವ ಬಗ್ಗೆ ಪರಿಹಾರವಾಗಿ ನೀಡಲಾಗುತ್ತಿದೆ. ಮಳೆಗೆ ಸೇತುವೆ, ಕೆರೆಕಟ್ಟೆ ಮತ್ತು ಬೆಳೆ ಹಾಳಾಗಿವೆ. ಸರಿಯಾದ ವರದಿ ತರೆಸಿಕೊಳ್ಳಲು ಸಿಎಂ ಸೂಚಿಸಿದ್ದಾರೆ. ಅದರಂತೆ ವರದಿ ಪಡೆಯಲಾಗುವುದು ಎಂದರು.
1500 ಕೋಟಿ ಅಜೀಜ್ ಪ್ರೇಮ್ ಜಿ ಜೊತೆ MoU ಮಾಡಿಕೊಳ್ಳಲಾಗಿದೆ. ಜೆಎಸ್ಡಬ್ಲೂ ಜೊತೆನೂ ಎಂಒಯು ಮಾಡಿಕೊಳ್ಳಲಾಗಿದೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮುಂದಿನ ವರ್ಷದಿಂದ ವಿಶಿಷ್ಠವಾಗಿ ತರಲಾಗುತ್ತಿದೆ. ಶಾಲೆ ದುರಸ್ತಿಯನ್ನ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಆ.07 ರಂದು ಸತ್ಯಶೋಧನ ಸಭೆ
ಎಂಎಲ್ ಸಿ ಉಗ್ರಪ್ಪನವರ ನೇತೃತ್ವದಲ್ಲಿ ಸತ್ಯಶೋಧನ ಸಭೆ ರದ್ದಾಗಲಿದೆ ಎಂದು ಕೆಲ ಮಾಧ್ಯಮ ಪ್ರಕಟಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಗರಂ ಅದ ಸಚಿವರು ನಮ್ಮ ಸ್ಪಷ್ಟನೆ ಪಡೆಯದೆ ಸುದ್ದಿ ಪ್ರಕಟಿಸದಂತೆ ಮನವಿ ಮಾಡಿಕೊಂಡ ಸಚಿವರು ಆ. 07 ರಂದು ಸಭೆ ಶಿವಮೊಗ್ಗದಲ್ಲಿ ನಡೆಯಲಿದೆ. ನಮಗೂ ಕುತೂಹಲವಿದೆ ನಾವು ಯಾಕೆ ಸೋತ್ವಿ ಎಂಬುದನ್ನ ತಿಳಿಯಲು ಎಂದರು.