ಸುದ್ದಿಲೈವ್/ಶಿವಮೊಗ್ಗ ಜು.20
ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಬಸ್ಟ್ಯಾಂಡ್ ಕಳ್ಳಿಯರು ಪತ್ತೆಯಾದ ಬೆರಳೆಣಿಕೆಗಳ ದಿನಗಳ ಅಂತರದಲ್ಲಿಯೇ ಮತ್ತೊಂದು ಪ್ರಕರಣ ದಾಖಲಾಗಿದೆ. ಇದುವರೆಗೂ ಪತ್ತೆಯಾಗಿದ್ದ ಅಷ್ಟೂ ಪ್ರಕರಣಗಳನ್ನ ಪತ್ತೆ ಮಾಡಿದ ಪೊಲೀಸರಿಗೆ ಮತ್ತೊಂದು ಪ್ರಕರಣ ದಾಖಲಾಗಿದೆ.
ಸೊರಬ ತಾಲೂಕಿನ ಮಾವಳ್ಳಿ ಗ್ರಾಮದ ಮಹಿಳೆಯೊಬ್ಬರು ಪತಿಯ ಜೊತೆ ಗುರುವಾರ ಡಾ.ಅಂಬೇಡ್ಕರ್ ಭವನದಲ್ಲಿ ಬಗುರ್ ಹುಕುಂ ಸಾಗುವಳಿದಾರರ ಸಭೆಯಲ್ಲಿ ಭಾಗಿಯಾಗಿ ಸಂಜೆ 4-45 ರ ಸಮಯದಲ್ಲಿ ಶಿವಮೊಗ್ಗ KSRTC ಬಸ್ ನಿಲಣಕ್ಕೆ ಬಂದಿದ್ದಾರೆ.
5 ಗಂಟೆಗೆ ಶಿಕಾರಿಪುರ ಸೊರಬದ ಮೇಲೆ ಶಿರಸಿಗೆ ತೆರಳುವ ಬಸ್ ಬಂದಿದೆ. ಸೀಟ್ ಹಿಡಿದು ಕುಳಿತುಕೊಂಡಿದ್ದಾರೆ. ಈ ವೇಳೆ ರಶ್ ಆಗಿದೆ. ಬಸ್ ಹತ್ತಿಕುಳಿತುಕೊಂಡ ಬಳಿಕ ವ್ಯಾನಿಟಿಬ್ಯಾಗ್ ನೋಡಿಕೊಂಡಿದ್ದಾರೆ. ವ್ಯಾನಿಟಿ ಬ್ಯಾಗ್ ಅರ್ಧ ಜಿಪ್ ತೆಗೆದ ಕಾರಣ ಮಹಿಳೆ ಗಾಬರಿಗೊಂಡಿದ್ದಾರೆ. ಬ್ಯಾಗ್ ನ ಒಳಗಿನ ಜಿಪ್ ಸಹ ತೆಗೆದಿರುವುದು ಗೋಚರಿಸಿದೆ.
ಬ್ಯಾಗ್ ನಲ್ಲಿದ್ದ 2014 ನೇ ಸಾಲಿನಲ್ಲಿ ಖರೀದಿಸಿದ ಸುಮಾರು 17 ಗ್ರಾಂ ತೂಕದ 75000/-ರೂ ಬೆಲೆಬಾಳುವ ಬಂಗಾರದ ನೆಕ್ಲೇಸ್ ಕಳುವಾಗಿದೆ. ಬಸ್ ಹತ್ತುವಾಗ ಕಳ್ಳರು ಕೈಚಳಕ ತೋರಿರುವುದಾಗಿ ನೇತ್ರಾವತಿ ಎಂಬುವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ-https://www.suddilive.in/2024/07/blog-post_881.html