ಆದೇಶವಿದ್ದರೂ KSRTC ಬಸ್ ನಿಲುಗಡೆ ನಕಾರ-ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಯಿತು ಸೆಂಟ್ರಲ್ ಆದೇಶಕ್ಕೆ?

ಸುದ್ದಿಲೈವ್/ಶಿವಮೊಗ್ಗ

ಹೊನ್ನಾಳಿ ರಸ್ತೆಯಲ್ಲಿರುವ ಪೇಸ್ ಕಾಲೇಜಿನ ಬಳಿ KSRTC ಬಸ್ ಗಳಿಗೆ ನಿಲುಗಡೆ ಕೋರಿಕೆ ಇದ್ದರೂ ನೀಡದಿರುವುದು ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಎಸ್ಆರ್ ಟಿಸಿಯ ಕೇಂದ್ರ ವಿಭಾಗವು ಫೆಬ್ರವರಿ 24 ರಂದು NWKRTC, KSRTC, NEKRTC ಬಸ್ ಗಳಿಗೆ ಪೇಸ್ ಕಾಲೇಜಿನ ಬಳಿ ಆದೇಶ ನೀಡಿದರೂ ಕೇಂದ್ರ ಕಚೇರಿಯ ಆದೇಶವನ್ನೇ ಧಿಕ್ಕರಿಸಿ ಸಂಚರಿಸುತ್ತಿರುವುದಾಗಿ ಸ್ಥಳೀಯರು ಆಕ್ಷೇಪಿಸಿದ್ದಾರೆ.

ಪೇಸ್ ಕಾಲೇಜಿನ ಬಳಿ ವೇಗದೂತ ಬಸ್ ಗಳಿಗೆ ನಿಲುಗಡೆ ನೀಡುವಂತೆ ಕೇಂದ್ರ ಕಚೇರಿ ಆದೇಶಿಸಿದೆ. ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಮ್ಮ ಚಾಲಕರಿಗೆ ಕಾಲೇಜಿನ ಬಳಿ ನಿಲುಗಡೆ ಕಡ್ಡಾಯಗೊಳಿಸಿ ಆದೇಶಿಸಿದರು ನಿಲುಗಡೆ ನೀಡುತ್ತಿಲ್ಲವೆಂದು  ಸ್ಥಳೀಯರು ದೂರಿದ್ದಾರೆ.

ಪೇಸ್ ಕಾಲೇಜನ ಜನ ಸಾಂದ್ರತೆ ಹೆಚ್ಚಿದೆ. ವಿದ್ಯಾರ್ಥಿಗಳ ಓಡಾಟ ಹೆಚ್ಚಿದೆ. ಇಲ್ಲಿ ನಿಲುಡೆ ನೀಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂಬು್ಉ ಸ್ಥಳೀಯರ ಆಗ್ರಹವಾಗಿದೆ.

ಇದನ್ನೂ ಓದಿ-https://suddilive.in/archives/18340

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close