ಶತಾಬ್ದಿ ರೈಲಿಗೆ ಸಿಲುಕಿ KSRTC ಬಸ್ ಚಾಲಕ ಅಚ್ಚರಿಯ ಸಾವು


 ಸುದ್ದಿಲೈವ್/ಶಿವಮೊಗ್ಗ

ಸಾಂಧರ್ಭಿಕ ಚಿತ್ರ


ಜನಶತಾಬ್ದಿ ರೈಲಿಗೆ ಸಿಲುಕಿ ಕೆಎಸ್ ಆರ್ ಟಿಸಿ ಬ ಸ್ ಚಾಲಕನೋರ್ವ ಕುತೂಹಲ  ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಮಲವಗೊಪ್ಪದ ರೈಲ್ವೆ ಟ್ರ್ಯಾಕ್ ಬಳಿ ನೆಡೆದಿದೆ.ರೈಲ್ವೆ ಸ್ಟೇಷನ್





12090 ಕ್ರಮ ಸಂಖ್ಯೆಯ ಜನಶತಾಬ್ದಿ ರೈಲು ಶಿವಮೊಗ್ಗ ರೈಲ್ವೆ ನಿಲ್ದಾಣವನ್ನ ಬೆಳಿಗ್ಗೆ 5-15 ಕ್ಕೆ ಪ್ರತಿ ದಿನ ಬಿಡಲಿದೆ. ಇಂದು ಎಂದಿನಂತೆ ರೈಲು ನಿಲ್ದಾಣ ಬಿಟ್ಟಿದ್ದು ನಸುಕಿನಲ್ಲೇ ಮಲವಗೊಪ್ಪದ ಹಳಿಯ ಮೇಲೆ ಚಲಿಸುತ್ತಿದ್ದ ವೇಳೆ ರೈಲಿಗೆ ಸಿಲುಕಿ ಸಾವು ಕಂಡಿದ್ದಾನೆ. 


ಈತನ ಸಾವು ಕುತೂಹಲ ಮೂಡಿಸಿದೆ. ಚಾಲಕ ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ರೈಲಿಗೆ ಸಿಲುಕಿ ಸಾವುಕಂಡಿದ್ದಾನೋ ಗೊತ್ತಿಲ್ಲ. ಈ ಬಗ್ಗೆ ಮೂಲಗಳು ಸ್ಪಷ್ಟಪಡಿಸಿಲ್ಲ. ಮೃತಗೊಂಡ ಕೆಎಸ್ ಆರ್ ಟಿಸಿ ಚಾಲಕನನ್ನ ಗಣೇಶ್ ವಿ ಎಂದು ಗುರುತಿಸಲಾಗಿದೆ. 


ಗಣೇಶ್ ವಿ (40) ಭದ್ರಾವತಿ ಡಿಪೋದ ಚಾಲಕನಾಗಿದ್ದು ಕಳೆದ ಮೂರು ವರ್ಷದ ಹಿಂದೆ ಸಂಸ್ಥೆಗೆ ಚಾಲಕನಾಗಿ ಸೇರ್ಪಡೆಗೊಂಡಿದ್ದರು. ಇವರ ತಂದೆಯೂ ಸಂಸ್ಥೆಯಲ್ಲಿ ಕಾರ್ಮಿಕರಾಗಿದ್ದು ಇವರ ಅಕಾಲಿಕ ಮರಣದಿಂದ ಗಣೇಶ್ ಗೆ ಕೆಲಸ ಲಭಿಸಿತ್ತು. 


ಗಣೇಶ್ ಶಿವಮೊಗ್ಗದ ಅರಕೆರೆ ನಿವಾಸಿಯಾಗಿದ್ದಾರೆ. ಇವರು ಹಳಿಯ ಮೇಲೆ ಕುಳಿತಿದ್ದಾಗ ರೈಲು ಬಂದ ಗಾಬರಿಗೆ ಸಿಲುಕಿ ಸಾವುಕಂಡಿರ ಬಹುದು ಎಂದು ಮೂಲಗಳು ತಿಳಿಸಿದೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಇದನ್ನೂ ಓದಿ-https://www.suddilive.in/2024/07/blog-post_889.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close