ಸುದ್ದಿಲೈವ್/ಶಿವಮೊಗ್ಗ
ನಗರದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ಟೆಂಡರ್ ವಿಚಾರದಲ್ಲಿ ವಂಚನೆ ನಡೆದಿದ್ದು, ಟೆಂಡರ್ ಪಡೆದ ವ್ಯಕ್ತಿ ಶೌಚಾಲಯ ನಡೆಸಿಕೊಂಡು ಹೋದವರಿಂದ ಲಕ್ಷಾಂತರ ಹಣಪಡೆದು ನಂತರ ವಾಪಾಸ್ ಕೊಡುವ ಸಮಯದಲ್ಲಿ ಜೀವಬೆದರಿಕೆ ಹಾಕಿರುವ ಘಟನೆ ದೊಡ್ಡಪೇಟೆ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ ಶೌಚಾಲಯದ ಟೆಂಡರ್ ಸ್ವಾಮಿ ವಿವೇಕಾನಂದ ಬಡಾವಣೆಯ ನಿವಾಸಿ ಸಿಂಗ್ರೀಗೌಡರಿಗೆ ಆಗಿದ್ದರಿಂದ ಕಳೆದ ಒಂದೂ ವರೆವರ್ಷದಿಂದ ವೆಳ್ಳಿಯಮ್ಮ ಎಂಬುವರು ಅಗ್ರಿಮೆಂಟ್ ಮಾಡಿಕೊಂಡು 14 ಲಕ್ಷ ರೂ. ಹಣ ಅಡ್ವಾನ್ಸ್ ನೀಡಿರುತ್ತಾರೆ.
ದಿನ ಕಲೆಕ್ಷನ್ ಸಂಗ್ರಹಿಸುವ ಮತ್ತು ನಿರ್ವಹಿಸುವ ಕೆಲಸವನ್ನ ಪಡೆದು ಶೌಚಾಲಯವನ್ನ ನಡೆಸಿಕೊಂಡು ಹೋಗುತ್ತಿದ್ದ ವೆಳ್ಳಿಯಮ್ಮರಿಗೆ ಫೆ.15 ರಿಂದ ಬೇರೆ ಗುತ್ತಿಗೆದಾರನೋರ್ವ ಇದು ನನಗೆ ಆಗಿದೆ. ನೀವು ನನಗೆ ಅಡ್ವಾನ್ಸ್ ಕೊಟ್ಟು ನಿರ್ವಾಹಣೆ ಹಿಡಿಯಿರಿ ಇಲ್ಲವಾದಲ್ಲಿ ಕೆಲಸ ಬಿಟ್ಟು ಹೋಗಿರಿ ಎಂದು ತಿಳಿಸಿದ್ದಾರೆ.
ಹಣ ಸಂಗ್ರಹಕ್ಕೆ ಸಿಂಗ್ರೀಗೌಡರು ಫೆ.15 ರಿಂದ ಬಾರದೆ ಇದ್ದ ಪರಿಣಾಮ ವೆಳ್ಳಿಯಮ್ಮ ಮತ್ತು ಸಹೋದರಿಯರು ಗೌಡರ ಮನೆಯ ಬಳಿ ಹಣ ಕೇಳಲು ಹೋಗಿದ್ದಾರೆ. ಈ ವೇಳೆ ಗೌಡರು ಮಹಿಳೆಯರಿಗೆ ಜಾತಿ ನಿಂದನೆ, ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾರೆ.
ಪ್ರಕರಣ ತುಂಗನಗರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ವೇಳೆ ಹಣಕೊಡುವುದಾಗಿ ಸಮಯ ನೀಡುವಂತೆ ಒಪ್ಪಿಕೊಂಡಿದ್ದ ಸಿಂಗ್ರೀಗೌಡರು ತದನಂತರ ಹಣಕೊಡಲು ಆಟಾಡಿಸಿರುವುದಾಗಿ ದೂರುದಾರರು ಆರೋಪಿಸಿದ್ದಾರೆ.
ಜು.3 ರಂದು ದೂರುದಾರರು ಡಿವೈಎಸ್ಪಿ ಕಚೇರಿಗೆ ಹೋಗುತ್ತಿದ್ದ ವೇಳೆ ಡಿಎಆರ್ ಕ್ವಾಟ್ರಸ್ ಬಳಿ ಸಿಗ್ರಿಗೌಡರು ಭೇಟಿಯಾದಾಗ ವೆಳ್ಳಿಯಮ್ಮ ಯಾಕಣ್ಣ ಸತಾಯಿದುತ್ತಿದ್ದೀಯ ಎಂದು ಹೇಳಿದಾಗ ಮತ್ತೆ ಅವ್ಯಾಚ್ಯಶಬ್ದಗಳಿಂದ ಬೈದಿದ್ದಾರೆ. ಮಹಿಳೆಯರ ತಲೆಕೂಡಲು ಹಿಡಿದು ಎಳೆದಾಡಿದ್ದಾರೆ.
ನಿಮಗೆ ಕೊಡುವ ಹಣದಲ್ಲಿ 2 ಲಕ್ಷ ರೂ. ಹಣ ಸುಪಾರಿ ನೀಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ದಾಖಲಿಸಲಾಗಿದೆ. ನಂತರ ಪರಿಚಯಸ್ಥರು ಜಗಳ ಬಿಡಿಸಿದ್ದು ಸಿಗ್ರೀಗೌಡರು ರೌಡಿ ಹಿನ್ನಲೆ ಉಳ್ಳ ವ್ಯಕ್ತಿಯಾದುದರಿಂದ ತಡವಾಗಿ ದೂರು ನೀಡಿರುವುದಾಗಿ ದೂರುದಾರರು ತಿಳಿಸಿದ್ದಾರೆ.
ಇದನ್ನೂ ಓದಿ-https://suddilive.in/archives/19113