ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ನಗರ ಹೊರತುಪಡಿಸಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಚಿಕ್ಕಮಗಳೂರಿನ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಶಿವಮೊಗ್ಗದ ನದಿಗಳಿಗೆ ಜೀವ ಕಳೆ ತುಂಬುತ್ತಿವೆ.
ಲಿಂಗನಮಕ್ಕಿ ಜಲಾಶಯಕ್ಕೆ ಹರಿದು ಬರ್ತಿದೆ ಸಾವಿರಾರು ಕ್ಯೂಸೆಕ್ಸ್ ನೀರು ಜಲಾಶಯಕ್ಕೆ 60238 ಕ್ಯೂಸೆಕ್ಸ್ ಒಳಹರಿವು ಬರುತ್ತಿದ್ದ, 1760.10 ಅಡಿ ನೀರಿನ ಮಟ್ಟ ತುಂಬಿದೆ.
ಗರಿಷ್ಠ 1819 ಅಡಿ ಇರುವ ಜಲಾಶಯದಲ್ಲಿ ಕಳೆದ ಬಾರಿಗಿಂತ ಈ ಬಾರಿ ಜಲಾಶಯದ ನೀರಿನ ಮಟ್ಟ ನಿಧಾನವಾಗಿ ತುಂಬಲಾರಂಭಿಸಿದೆ. ಅದರಂತೆ ತುಂಗ ನದಿಗೆ ಒಳ ಮತ್ತು ಹೊರ ಹರಿವು ಹೆಚ್ಚಾಗಿದೆ. 39743 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬಂದರೆ ನದಿಗೂ ಇಷ್ಟೇ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ.
15 ಗೇಟ್ ಮೂಲಕ ತುಂಗ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದೆ. ಶಿವಮೊಗ್ಗದಲ್ಲಿ ಮಂಟಪ ಮುಳುಗಲು ಕೆಲ ಅಡಿಗಳು ಮಾತ್ರ ಬಾಕಿಯಿದೆ. ಜಲಾಶಯಕ್ಕೆ 8-10 ಸಾವಿರ ಕ್ಯೂಸೆಕ್ ನೀರು ಹರಿಸು ಬರುತ್ತಿದ್ದು ಒಂದು ಅಡಿ ನೀರು ಏರಿಕೆಯಾಗಿದೆ.
ಇದನ್ಬೂ ಓದಿ-https://suddilive.in/archives/18435