ಜಿಲ್ಲೆಯ ಪ್ರಮುಖ ನದಿಗಳ ನೀರಿನ ಮಟ್ಟ

ಲಿಂಗನಮಕ್ಕಿ ಜಲಾಶಯ


ಸುದ್ದಿಲೈವ್/ಶಿವಮೊಗ್ಗ



ಮಲೆನಾಡಿನಲ್ಲಿ ದಿಡೀರ್ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿಗಳು ಭೋರ್ಗೆರುವ ಸ್ಥಿತಿಗೆ ತಲುಪಿವೆ. ಹವಮಾನ ಇಲಾಖೆ ಇನ್ನೂ ಮೂರು ನಾಲ್ಕ ಅಲರ್ಟ್ ನೀಡಿದೆ. 


ಭಾರೀ ಪ್ರಮಾಣದಲ್ಲಿ ಹೊರ ಹರಿವಿದ್ದು, 41,957 ಕ್ಯೂಸೆಕ್ ಹೊರಗಡೆ ನೀರು ಹರಿಸಲಾಗುತ್ತಿದೆ. ಕ್ರಸ್ಟ್ ಗೇಟ್ ಗಳ ಮೂಲಕ 39,362 ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದರೆ, ಎಡದಂಡೆ ನಾಲೆಗೆ 180 ಕ್ಯೂಸೆಕ್ ಹಾಗೂ ಬಲದಂಡೆ ನಾಲೆಗೆ 1000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.


ಭದ್ರಾ ಡ್ಯಾಂ ತುಂಬಿದ್ದು, ಜಲಾಶಯದಿಂದ ಮುಂಜಾಗ್ರತಾ ಕ್ರಮವಾಗಿ ನೀರು ಹರಿಸಲಾಗುತ್ತಿದೆ. ಜಲಾಶಯದ ಇಂದಿನ ನೀರಿನ ಮಟ್ಟ 184.6 ಅಡಿ ಇದ್ದು, ಕೇವಲ 1.4 ಅಡಿ ನೀರು ಬೇಕು. ಆದರೆ, ಜಲಾಶಯಕ್ಕೆ 60 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ 41ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೊರಗಡೆ ಹರಿಸಲಾಗುತ್ತಿದೆ. ಇದರಿಂದ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ.


ಭದ್ರ ನದಿಯ ಒಳಹರಿವು ಹೆಚ್ಚಾಗಿದೆ. ಭದ್ರಾವತಿಯ ksrtc ಬಸ್ ಸ್ಟ್ಯಾಂಡ್ ಹಿಂಭಾಗದ  ಹೊಸಸೇತುವೆ ಮುಳುಗಿದೆ. ಕವಲಗುಂದಿ ಮುಳುಗುವ ಭೀತಿ ಶುರುವಾಗಿದೆ.‌ 




ತುಂಗೆಯ ಒಳಹರಿವು ರಾತ್ರಿ 83 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿತ್ತು. ಬೆಳಿಗ್ಗೆ 81 ಸಾವಿರ ಕ್ಯೂಸೆಕ್ ನೀರು ಒಳಹರಿವಿದೆ. ಇನ್ನೂ ನಾಲ್ಕೈದು ದಿನ ಮಲೆನಾಡ ಭಾಗದಲ್ಲಿ ಹವಮಾನ ಇಲಾಖೆ ಎಚ್ಚರಿಸಿರುವುದರಿಂದ ಪ್ರವಾಹದ ಕಥೆ ಏನಾಗಲಿದೆ ಕಾದು ನೋಡಬೇಕಿದೆ. ಇದರಿಂದ ಹತ್ತಿರದ ಕೂಡಲಿ ಸಂಗಮದಲ್ಲಿ ಸ್ನಾನಘಟ್ಟ ಭರ್ತಿಯಾಗಿದೆ. 



1819 ನೀರು ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯಕ್ಕೆ 1812.65 ಅಡಿ ನೀರು ಸಂಗ್ರಹವಾಗಿದೆ. ನದಿಗೆ ಮೂರನೇ ಅಲರ್ಟ್ ಹೊರಬೀಲುವ ಸಂಭವನೀಯವಿದೆ. ನದಿಗೆ ನಾಳೆ ನೀರು ಹರಿಸುವ ಸಾಧ್ಯತೆ ಇದೆ. 151.64 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 131.18 ಟಿಎಂಸಿ ನೀರು ಭರ್ತಿಯಾಗಿದೆ. ಕಳೆದ ವರ್ಷ 1787.47 ಅಡಿ ನೀರು ಮಾತ್ರ ನೀರು ಸಂಗ್ರಹವಾಗಿತ್ತು. 


ಇದನ್ನೂ ಓದಿ-https://www.suddilive.in/2024/07/blog-post_734.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು