ಲೋಕಾಯುಕ್ತರ ದಿಡೀರ್ ಭೇಟಿ

 



ಸುದ್ದಿಲೈವ್/ಸಾಗರ

 

ಲೋಕಾಯುಕ್ತ ಪೊಲೀಸರು ಮಾತ್ರ ಟ್ರಾಪಿಂಗ್, ದಿಡೀರ್ ಭೇಟಿ,  ಪರಿಶೀಲನೆ ಮಾಡುತ್ತಾ ಬಂದಿದ್ದಾರೆ. ಭ್ರಷ್ಠರನ್ನ ಟ್ರ್ಯಾಪ್ ಮಾಡಿ ಬಂಧಿಸುತ್ತಾರೆ. ಆದರೆ ಫಲಿತಾಂಶ ಮಾತ್ರ ಏನು ಎಂಬುದು ಮಾತ್ರ ನಗಣ್ಯ. ಟ್ರ್ಯಾಪ್ ಆದವನು ಮುಂಬಡ್ತಿ ಪಡೆದುಕೊಂಡು ಅದೇ ಕಚೇರಿಗೆ ಅಧಿಕಾರಿಯಾಗಿ ಬಂದ ಉದಾಹರಣೆ ನಮ್ಮ ಮುಂದೆ ಇದೆ. 


ಏನೇ ಇರಲಿ, ಇವತ್ತು ಲೋಕಾಯುಕ್ತ ಅಧಿಕಾರಿಗಳು ಸಾಗರ ತಹಶೀಲ್ದಾರ್ ಕಚೇರಿಗೆ ದಿಡೀರ್ ಭೇಟಿ ನೀಡಿ ಸಿಬ್ಬಂದಿಗಳಿಗೆ ಮತ್ತು ಅಧಿಕಾರಿಗಳಿಗೆ ಸಂಚಲನ ಮೂಡಿಸುತ್ತಿದ್ದಾರೆ. ಇಂದು  ಬೆಳಿಗ್ಗೆ 11.00 ರಿಂದ ಮದ್ಯಾಹ್ನ 02:00 ಗಂಟೆ ವರೆಗೆ ಮಂಜುನಾಥ್ ಚೌಧರಿ ಎಂ.ಹೆಚ್ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರು ಅಧಿಕಾರಿಗಳಾದ ಉಮೇಶ್ ಈಶ್ವರ ನಾಯ್ಕ ಡಿ.ಎಸ್.ಪಿ. ಮತ್ತು ಸಿಬ್ಬಂದಿಗಳೊಂದಿಗೆ ಸಾಗರ ತಾಲ್ಲೂಕ್ ಕಛೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನೀಡಿದ್ದಾರೆ. 


ಈ ಸಮಯದಲ್ಲಿ ಸಾಗರ ತಾಲ್ಲೂಕಿನ ತಹಶೀಲ್ದಾರ್. ಗ್ರೇಡ್-2 ತಹಶೀಲ್ದಾರ್, ಶಿರಸ್ಥೆದಾರರು ಮತ್ತು ತಾಲ್ಲೂಕ್ ಕಛೇರಿಯ ಸಿಬ್ಬಂದಿಯವರು ಹಾಜರಿದ್ದು, ಹಾಜರಾತಿ ಮಸ್ತಕ, ಕ್ಯಾಷ್ ಡಿಕ್ಲರೇಷನ್, ಹಕ್ಕು ಪತ್ರ, ಮ್ಯೂಟೇಷನ್, ಚೌತಿಖಾತೆ, ವೃದ್ಧಾಪ್ಯವೇತನ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಸಾಮಾಜಿಕ ಭದ್ರತೆ ಯೋಜನೆ, ಖಾತೆ ಬದಲಾವಣೆ, ಕರೆ ಒತ್ತುವರಿ ತೆರವು ಪ್ರಕರಣಗಳು, 


ಬಗರ್‌ಹುಕುಂ ಸಾಗುವಳಿ ಬಾಕಿ ಇರುವ ಅರ್ಜಿಗಳು ಮತ್ತು ಸಕಾಲ ಯೋಜನೆಯಲ್ಲಿ ಬಾಕಿ ಇರುವ ಅರ್ಜಿಗಳನ್ನು ಪರಿಶೀಲನೆ ಮಾಡಿದ್ದು. ಪರಿಶೀಲನೆ ಸಮಯದಲ್ಲಿ ಕಂಡು ಬಂದ ನ್ಯೂನ್ಯತೆಗಳ ಕುರಿತು ಚಂದ್ರಶೇಖರ್ ನಾಯ್ಕ ತಹಶೀಲ್ದಾರ್. ಸಾಗರ ತಾಲ್ಲೂಕ್, ಸಾಗರ ರವರಿಗೆ ಸೂಚನೆಗಳನ್ನು ನೀಡಿದ್ದು, ನ್ಯೂನ್ಯತೆಗಳ ಬಗ್ಗೆ ಕ್ರಮವಹಿಸಿ ಪಾಲನಾ ವರದಿ ಸಲ್ಲಿಸುವಂತೆ ಸೂಚನೆಗಳನ್ನು ನೀಡಿರುತ್ತಾರೆ.


ಇದನ್ನೂ ಓದಿ-https://www.suddilive.in/2024/07/blog-post_366.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close