ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆ : ಶಿವಮೊಗ್ಗ ಅಚೀವರ್ಸ್ ಕೋಚಿಂಗ್ ಸೆಂಟರ್ ನಿಂದ ಉಚಿತ ತರಬೇತಿ

ಸುದ್ದಿಲೈವ್/ಶಿವಮೊಗ್ಗ

ರಾಷ್ಟ್ರೀಕೃತ ಬ್ಯಾಂಕ್ ಗಳು ಸೇರಿದಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ  ಸಂಸ್ಥೆಗಳ ವಿವಿಧ ಹುದ್ದೆಗಳ ನೇಮಕಾತಿಗೆ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (competitive exam) ಸಂಬಂಧಿಸಿದಂತೆ,  ತಿಲಕ್ ನಗರದಲ್ಲಿರುವ ಅಚೀವರ್ಸ್ ಕೋಚಿಂಗ್ ಸೆಂಟರ್ (achievers coaching center) ನಿಂದ ಜುಲೈ 14 ರಂದು ಉಚಿತ ತರಬೇತಿ ಕಾರ್ಯಾಗಾರ (free training workshop) ಹಮ್ಮಿಕೊಳ್ಳಲಾಗಿದೆ.

ಈ ಕುರಿತಂತೆ ಶುಕ್ರವಾರ ಶಿವಮೊಗ್ಗದಲ್ಲಿ ಸಂಸ್ಥೆಯ ನಿರ್ದೇಶಕಿ ಪವಿತ್ರ ಸಿ, ಸಂಪನ್ಮೂಲ ವ್ಯಕ್ತಿಗಳಾದ ವರುಣ್ ಟಿ ನಾಯಕ್ ಹಾಗೂ ಮಹೇಶ್ ಭಟ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಜು. 14 ರ ಬೆಳಿಗ್ಗೆ 10 ಗಂಟೆಯಿಂದ ಸಂಸ್ಥೆಯ ಸಭಾಂಗಣದಲ್ಲಿ ತರಬೇತಿ ಕಾರ್ಯಾಗಾರ ಆರಂಭವಾಗಲಿದೆ ಸಂಪನ್ಮೂಲ ವ್ಯಕ್ತಿಗಳು (resource persons) ಮಾರ್ಗದರ್ಶನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್ (nationalized bank) ಗಳಲ್ಲಿನ ೨೦೨೪ ನೇ ಸಾಲಿನ ೨೨,೦೨೬ ಹುದ್ದೆಗಳಿಗೆ (jobs) ಹಾಗೂ ಸ್ಟಾಫ್ ಸೆಲೆಕ್ಷನ್ ಕಮಿಟಿ ಯ ಹುದ್ದೆಗಳು, ರೈಲ್ವೇಸ್ (railways), ಇನ್ಸೂರೆನ್ಸ್ (insurance) ಹಾಗೂ ಇನ್ನಿತರ ಕೇಂದ್ರ ಸಂಸ್ಥೆಗಳ ಸಾವಿರಾರು ಹುದ್ದೆಗಳ ನೇಮಕಾತಿಗೆ ಅರ್ಜಿ (application for recruitment) ಆಹ್ವಾನಿಸಲಾಗಿದೆ. ಈ ಪರೀಕ್ಷೆಗಳಿಗೆ (exams) ಸಂಬಂಧಿಸಿದಂತೆ ಉಚಿತ ತರಬೇತಿ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.

ಜು. 15 ರಿಂದ ಈ ಎಲ್ಲ ಪರೀಕ್ಷೆಗಳಿಗೆ ಆಫ್ ಲೈನ್ ಮತ್ತು ಆನ್ ಲೈನ್ ಕೋಚಿಂಗ್ ಕ್ಲಾಸ್ ಗಳು (coaching class) ಪ್ರಾರಂಭವಾಗಲಿದೆ. ತರಬೇತಿಯಲ್ಲಿ ವಿಷಯವಾರು ನುರಿತ ತಜ್ಞರಿಂದ ಬೋಧನೆ, ಸ್ಟಡಿ ಮಟೀರಿಯಲ್, ವಿಷಯವಾರು ಪ್ರಾಕ್ಟಿಸ್ ಬುಕ್, ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ವಿಷಯವಾರು ಟೆಸ್ಟ್ ಗಳು,  ಪೂರ್ಣ ಪ್ರಮಾಣದ ಪರೀಕ್ಷೆ ಸೇರಿದಂತೆ ಉದ್ಯೋಗಾಕಾಂಕ್ಷಿಗಳನ್ನು ಪರಿಪೂರ್ಣವಾಗಿ ಪರೀಕ್ಷೆಗೆ ಸಜ್ಜುಗೊಳಿಸುವ ಕಾರ್ಯವನ್ನು ಸಂಸ್ಥೆ ನಡೆಸಿಕೊಂಡು ಬರುತ್ತಿದೆ. ಈಗಾಗಲೇ ಸಂಸ್ಥೆಯಲ್ಲಿ ಕೋಚಿಂಗ್ ಪಡೆದ ಹಲವು ಯುವಕ – ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿದ್ದಾರೆ. ಸರ್ಕಾರಿ ಉದ್ಯೋಗಳಿಗೆ ನೇಮಕವಾಗಿದ್ದಾರೆ ಎಂದು ತಿಳಿಸಿದ್ದಾರೆ.

ತರಬೇತಿ ಸ್ಥಳ : ಜುಲೈ 14 ರಂದು ನಡೆಯಲಿರುವ ಉಚಿತ ತರಬೇತಿ ಕಾರ್ಯಾಗಾರವು ನಗರದ ತಿಲಕ್ ನಗರದಲ್ಲಿರುವ ಅಚೀವರ್ಸ್ ಕೋಚಿಂಗ್ ಸೆಂಟರ್ ಸಭಾಂಗಣದಲ್ಲಿ ನಡೆಯಲಿದೆ.  ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ – 78129 – 26702 ಅಥವಾ 73376 – 83668 ಗೆ ಸಂಪರ್ಕಿಸಬಹುದು. ಅಥವಾ ಕಚೇರಿಗೆ ಬಂದು ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/19102

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close