ಪ್ರತಾಪ್ ಕುಮಾರನ ಮೃತ ದೇಹ ಕುಟುಂಬಸ್ಥರಿಗೆ ಹಸ್ತಾಂತರ

ಸುದ್ದಿಲೈವ್/ಶಿವಮೊಗ್ಗ

ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ಪ್ರತಾಪ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ  ಮರಣೋತ್ತರ ಪರೀಕ್ಷೆ ನಡೆದಿದ್ದು, ಕುಟುಂಬಸ್ಥರಿಗೆ ಪಾರ್ಥಿವ ಶರೀರದ ಹಸ್ತಾಂತರಿಸಲಾಗಿದೆ. ಆಂಬುಲೆನ್ಸ್ ಮೂಲಕ ಪಾರ್ಥಿವ ಶರೀರವನ್ನು ಚನ್ಮಗಿರಿಯ ಕತ್ತಲಗೆರೆಗೆ ಕುಟುಂಬಸ್ಥರು ತೆಗೆದುಕೊಂಡು ಹೋಗಲಿದ್ದಾರೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕತ್ತಲಗೆರೆಯಲ್ಲಿ ನಾಳೆ ಅಂತಿಮ ಸಂಸ್ಕಾರ ನಡೆಯಲಿದೆ. ಮೃತ ಪ್ರತಾಪ ಕುಮಾರ್ ಅವರ ಸ್ವಂತ ಊರಾದ ಕತ್ತಲಗೆರೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಮೆಗ್ಗಾನ್ ಮರಣೋತ್ತರ ಪರೀಕ್ಷೆ ಕೇಂದ್ರದಲ್ಲಿದ್ದ ಮಾಜಿ ಸಚಿವ ಬಿಸಿ ಪಾಟೀಲ್ ಅಳಿಯ ಪ್ರತಾಪನ ಪಾರ್ಥಿವ ಶರೀರದೊಂದಿಗೆ ಊರಿಗೆ ಹೊರಟಿದ್ದಾರೆ.

ಇದನ್ನೂ ಓದಿ

ಆತ್ಮಹತ್ಯೆಗೆ ಯತ್ನ-ಓರ್ವ ಮಣಿಪಾಲಿಗೆ ದಾಖಲು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close