ಸುದ್ದಿಲೈವ್/ಶಿವಮೊಗ್ಗ
ನಗರದ ಓ.ಟಿ.ರಸ್ತೆಯಲ್ಲಿರುವ ಸುಲ್ತಾನ್ ಮಾರ್ಕೆಟ್ ನ ಹೋಟೆಲ್ವೊಂದರಲ್ಲಿ ಗೋಮಾಂಸದ ಅಡುಗೆ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇಲೆ ದೊಡ್ಡಪೇಟೆ ಪೊಲೀಸರು ಮಾಲೀಕರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.
ಖಚಿತ ಮಾಹಿತಿಯ ಆಧಾರದ ಮೇರೆಗೆ ಶಿವಮೊಗ್ಗ, ಟೌನ್ ಓ,ಟಿ ರಸ್ತೆ, ಸುಲ್ತಾನ್ ಮಾರ್ಕೆಟ್ ನ 1ನೇ ಕ್ರಾಸ್ ನಲ್ಲಿರುವ ಸುಲ್ತಾನ್ ವೆಜ್ ಮತ್ತು ನಾನವೆಜ್ ಹೊಟೇಲ್ ನಲ್ಲಿ ದನದ ಮಾಂಸದ ಅಡಿಗೆ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ದನದ ಮಾಂಸವನ್ನು ಖರೀದಿ ಮಾಡಿ ಕೊಂಡು ಬಂದು ಹೋಟೆಲ್ ನವರು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಅದಾರದ ಮೇರೆಗೆ, ಹೋಟೆಲ್ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಠಾಣಾಧಿಕಾರಿಗಳ ಆದೇಶದ ಮೇರೆಗೆ ದೂರು ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/19120
Tags:
ಕ್ರೈಂ ನ್ಯೂಸ್