ಶಂಕಿತ ಡೇಂಗೇ ಜ್ವರಕ್ಕೆ ಬಾಲಕ ಬಲಿ

 ಸುದ್ದಿಲೈವ್/ಶಿವಮೊಗ್ಗ

ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಸಾಗರದ ಆರು ವರ್ಷದ ಬಾಲಕ ಶನಿವಾರ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.



ಜನ್ನತ್ ನಗರದ ಐದು ವರ್ಷದ ಮಹಮ್ಮದ್ ನಯಾನ್ ಮೃತ ಬಾಲಕನಾಗಿದ್ದಾನೆ. ಕಳೆದ ಐದು ದಿನದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಸ್ಥಳೀಯ ವೈದ್ಯರ ಬಳಿ  ಚಿಕಿತ್ಸೆಗಸಗಿ ಕರೆದೊಯ್ಯಲಾಗಿತ್ತು.


ಶುಕ್ರವಾರ ಬಾಲಕನಿಗೆ ತೀವ್ರ ಜ್ವರ,ವಾಂತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಜ್ವರ,ವಾಂತಿ ಹೆಚ್ಚಾಗಿ ಬಿಪಿ ಕೂಡ ಲೋ ಆಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ನಯಾನ್ ನನ್ನ ಶುಕ್ರವಾರ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು.


ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಅಯಾನ್ ಶನಿವಾರ ಬೆಳಗ್ಗೆ ಮೃತಪಟ್ಟಿರುವುದಾಗಿ ಕುಟುಂಬಸ್ಥರು ತಿಳಿಸಿರುವ ಬಗ್ಗೆ ಸ್ಥಳೀಯ ಮಧ್ಯಮವೊಂದು ಸುದ್ದಿ ಮಾಡಿದೆ. 

ಇದನ್ನೂ ಓದಿ-https://www.suddilive.in/2024/07/blog-post_166.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close