ಒಂದು ಚಾಕು ಇರಿತ ಮತ್ತು ಹಲ್ಲೆ ಪ್ರಕರಣ -ಎರಡೂ ಪ್ರಕರಣದಲ್ಲಿ ಕೇಳಿಬರುತ್ತಿದೆ ರೌಡಿಶೀಟರ್ ಗಳ ಹೆಸರು

ಸುದ್ದಿಲೈವ್/ಶಿವಮೊಗ್ಗ

ಸಾಂಧರ್ಭಿಕ ಚಿತ್ರ


ಭದ್ರಾವತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಾಕು ಇರಿತ ಪ್ರಕರಣ ನಡೆದರೆ ಶಿವಮೊಗ್ಗ ವಿನೋಬ ನಗರ ಠಾಣೆ ವ್ಯಾಪ್ತಿಯಲ್ಲಿ ಹಲ್ಲೆ ಪ್ರಕರಣವೊಂದು ದಾಖಲಾಗಿದೆ. ಎರಡೂ ಪ್ರಕರಣದಲ್ಲಿ ರೌಡಿ ಶೀಟರ್ ಗಳ ಹೆಸರು ಕೇಳಿ ಬರುತ್ತಿದೆ. 


ವಿನೋಬ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನಿಗೆ ತೋಟದ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ. ಈ ಪ್ರಕರಣದಲ್ಲಿ ವಿನೋಬನಗರ ಠಾಣ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಆಗಿರುವನ ಹೆಸರು ಕೇಳಿ ಬಂದಿದೆ. ಈತನ ಜೊತೆ ಮತ್ತಿಬ್ಬರು ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ.


ಅದರಂತೆ ಭದ್ರಾವತಿಯಲ್ಲಿ ಸಾಗರ್ ಮತ್ತು ಕಿರಣ್ ಎಂಬುವರು ಸ್ನೇಹಿತರಾಗಿದ್ದು ಇಬ್ಬರ ನಡುವಿನ ಹಣದ ವ್ಯವಹಾರದಲ್ಲಿ ಚಾಕು ಇರಿತವಾಗಿದೆ. ಸಾಗರ್ ಎಂಬಾತ ಕಿರಣ್ ನಿಗೆ ಚಾಕು ಇರಿದಿದ್ದಾರೆ. ಕಿರಣ್ ಎಂಬಾತ ಇಸ್ಪೀಟ್ ದಂಧೆಯಲ್ಲಿದ್ದ ಎಂಬ ಮಾಹಿತಿ ಕೇಳಿ ಬಂದಿದೆ. ಆತನನ್ನ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ


ಭದ್ರಾವತಿ  ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.

ಇದನ್ನೂ ಓದಿ-https://www.suddilive.in/2024/07/34.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close