ಸುದ್ದಿಲೈವ್/ಶಿವಮೊಗ್ಗ-ಜು.21
ಕೆರೆಯಂತಾದ ಕ್ರಿಕೆಟ್ ಮೈದಾನದಲ್ಲಿ ಮಕ್ಕಳ ಜೊತೆ ನಾಯಿಯೊಂದು ಚಿನ್ನಾಟವಾಡಿದೆ. ಶಿವಮೊಗ್ಗ ನವುಲೆ ಕೆರೆಯಲ್ಲಿ ನಾಯಿ ಜೊತೆ ಮಕ್ಕಳು ಸಹ ಆಟವಾಡಿದೆ.
KSCA ಝೋನಲ್ ಕ್ರಿಕಿಟ್ ಮೈದಾನ ಮಳೆಯಿಂದಾಗಿ ಜಲಾವೃತಗೊಂಡಿದೆ.ಪ್ರತಿ ಬಾರಿಯ ಮಳೆಗೂ ಕೆರೆಯ ಮೂಲ ಸ್ವರೂಪ ಪಡೆಯುವ ಮೈದಾನದಲ್ಲಿ ಸುತ್ತಲ ಆವರಣವೂ ಒಂದು ಅಡಿ ನೀರಿನಿಂದ ಆವೃತಗೊಂಡಿದೆ.
ಶಿವಮೊಗ್ಗ-ಶಿಕಾರಿಪುರ ರಸ್ತೆಯಲ್ಲಿರುವ ನವುಲೆಯ ಕೆರೆಯಲ್ಲೇ ಕ್ರೀಡಾಂಗಣ ನಿರ್ಮಾಣವಾದ ಪರಿಣಾಮ ಮೈದಾನದ ಅಂಗಳ ಕೆರೆ ಅಂಗಳವಾಗಿದೆ. ಪ್ರತಿ ಬಾರಿಯ ಮಳೆಗೂ ಮೈದಾನ ಜಲಾವೃತಗೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ರಣಜಿ ಪಂದ್ಯಗಳು ನಡೆಯುತ್ತಿದ್ದ ಮೈದಾನ ಮಳೆಗಾಲದಲ್ಲಿ ಕೆರೆ ಮಳೆಗಾಲ ಮುಗಿದ ನಂತರ ಮೈದಾನ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಹಿಂದೆ ಕೆರೆಯ ಅಂಗಳವಾಗಿತ್ತು ಎಂಬುದು ಪ್ರತಿಭಾರಿಯ ಮಳೆಗಾಲದಲ್ಲಿ ಅದು ಸಾಬೀತುಗೊಳ್ಳುತ್ತದೆ. ಶಾಲೆಗಳಿಗೆ ರಜೆ ಕೊಟ್ಟಿದ್ದರಿಂದ ನೀರಲ್ಲಿ ಮಕ್ಕಳು ಆಟವಾಡಿದ್ದಾರೆ. ನಾಯಿ ಜೊತೆ ರಜೆ ಮಜಾ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದಿದೆ.