ಸುದ್ದಿಲೈವ್/ಶಿವಮೊಗ್ಗ ಜು.20
ಬೀದಿ ನಾಯಿಗಳ ಹಾವಳಿ ರಾಜ್ಯದ ಎಲ್ಲೆಡೆ ಇದೆ. ಅದರಂತೆ ಶಿವಮೊಗ್ಗದಲ್ಲಿಯೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳ ಹಾವಳಿಯಿಂದ ಜನ ಬೇಸತ್ತು ಹೋಗಿದ್ದಾರೆ. ಸರ್ಕಾರದ ಕೆಲ ಕಾನೂನುಗಳು ಜನರಿಗೆ ಭರವಸೆ ಮೂಡಿಸದ ಕಾರಣ ಜನ ರೋಸತ್ತು ಹೋಗಿದ್ದಾರೆ.
ಹಾಗಂತ ಬೀದಿ ನಾಯಿಯನ್ನ ಕೊಲೆ ಮಾಡಿಬಿಡಿ ಎಂದು ಜನ ಹೇಳುತ್ತಿಲ್ಲ. ಬದಲಿಗೆ ಅವರಿಗೆ ನಾಯಿಗಳ ಸಂತಾನ ಹರಣ ಚಿಕಿತ್ಸೆಯ ಮೂಲಕ ನಿಯಂತ್ರಣದ ಭರವಸೆ ಮೂಡಿಸುವ ಕೆಲಸ ಮಾಡುತ್ತಿಲ್ಲ. ಬದಲಿಗೆ ಬೀದಿಗಳಲ್ಲಿ ನಾಯಿಗಳ ಸಂತಾನಗಳು ಹೆಚ್ಚಾಗುತ್ತಲೇ ಇರುವುದಕ್ಕೆ ಜನ ರೋಸತ್ತು ಹೋಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಒಂದು ವೀಡಿಯೋ ವೈರಲ್ ಮಾಡಲಾಗುತ್ತಿದೆ. ರಾಗಿಗುಡ್ಡದಲ್ಲಿ ಕರುವೊಂದನ್ನ ಬೀದಿ ನಾಯಿಗಳು ದಾಳಿ ಮಾಡಿವೆ. ದಾಳಿಯಿಂದ ಕರುವಿನ ಕಿವಿಯನ್ನ ನಾಯಿಗಳು ಕಚ್ಚಿವೆ. ನೋವಿನಿಂದ ಬಳಲುತ್ತಿರುವ ಕರುವನ್ನ ಸ್ಥಳೀಯರಿಂದ ರಕ್ಷಿಸಲಾಗಿದೆ. ಇದರಿಂದ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಗೆ ಹೋಗುವ ಮಕ್ಕಳು ಇಲ್ಲಿ ಓಡಾಡುವುದರಿಂದ ಮಕ್ಕಳನ್ನ ಮತ್ತು ಈ ಬಡಾವಣೆಯ ನಿವಾಸಿಗಳಿಗೆ ಬೀದಿ ನಾಯಿಗಳಿಂದ ಮುಕ್ತಿ ಕೊಡವಂತೆ ಕೇಳಿಕೊಂಡಿದ್ದಾರೆ. ಬೀದಿ ನಾಯಿಗಳ ಹಾವಳಿ ರಾಗಿಗುಡ್ಡದಲ್ಲಿ ಮಾತ್ರವಲ್ಲ ಇಡೀ 35 ವಾರ್ಡ್ ಗಳಲ್ಲಿದೆ. ಹೊಸ ಪಾಲಿಕೆ ಆಯುಕ್ತರು ಬಂದಿದ್ದಾರೆ. ಬೀದಿ ನಾಯಿಗಳನ್ನ ನಿಯಂತ್ರಣಕ್ಕೆ ಏನಾದರೂ ಹೊಸ ಕಾನೂನು ತರುತ್ತಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ-https://www.suddilive.in/2024/07/ksrtc_20.html