ಸಾಂತ್ವಾನ ನೀಡಲು ಎಮ್ಮೆಹಟ್ಟಿಗೆ ಮರಾಠ ಮಠದ ಶ್ರೀಗಳು ಭೇಟಿ

ಸುದ್ದಿಲೈವ್/ಹೊಳೆಹೊನ್ನೂರು

ಭಗವಂತ ನೀಡಿದ ಆಯುಷ್ಯ ಕಳೆಯದೆ ಸಾವಿಗಿಡಾಗುವುದು ನುಂಗಲಾರದ ನೋವಿನ ಸಂಗತಿ ಎಂದು ಬೆಂಗಳೂರಿನ ಗವಿಪುರದ ಗೋಸಾಯಿ ಮರಾಠ ಮಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಹೇಳಿದರು.

ಸಮೀಪದ ಎಮ್ಮೆಹಟ್ಟಿಯಲ್ಲಿ ಕಳೆದ ಶುಕ್ರವಾರ ಹಾವೇರಿ ಬಳಿ ನಡೆದ ಅಪಘಾತದಲ್ಲಿ ಮೃತ ಪಟ್ಟಿದ ಕುಟುಂಬಗಳ ಸದಸ್ಯರನ್ನು ಸೋಮವಾರ ಬೇಟಿ ಮಾಡಿ ಮಾತನಾಡಿದರು.

ಬಾಳಿ ಬದುಕು ಕಟ್ಟಿಕೊಳ್ಳಬೇಕಾದ ಜೀವಗಳ ಹಾನಿಗಳಿಗೆ ಬೆಲೆ ಕಟ್ಟಲು ಸಾದ್ಯವಿಲ್ಲ. ಮಡಿದು ಮಸಣ ಸೇರಿದವರ ಜಾಗ ತುಂಬಲು ಯಾರಿಂದಲೂ ಸಾದ್ಯವಿಲ್ಲ.

ಮನಸಿಗೆ ಬೇಕಾದವರು ಅಗಲಿಕೆ ತಡೆದುಕೊಳ್ಳದಷ್ಟು ನೋವು ನೀಡುತ್ತದೆ. ಪ್ರಜ್ಞೆಗೆ ಬರುವಷ್ಠರಲ್ಲಿ ಅಪಘಾತಗಳು ನಡೆದು ಹೋಗಿ ಪರಿಸ್ಥಿತಿ ಕಾಲನ ಕೈಗೆ ಸಿಕ್ಕಿರುತ್ತದೆ. ಸಮಾಜದ ಸಂಘ ಸಂಸ್ಥೆಗಳು ಸೇರಿದಂತೆ ಕ್ಷೇತ್ರದ ಸಂಘಟನೆಗಳು ಮೃತರ ಕುಟುಂಬಗಳ ನೆರವಿಗೆ ನಿಲ್ಲಬೇಕು.

ಕುಟುಂಬದಲ್ಲಿನ ವ್ಯಕ್ತಿಗಳು ಅಗಲಿಕೆ ಏನು ಕೊಟ್ಟರು ಬರುವುದಿಲ್ಲ. ರಾಜ್ಯದಲ್ಲಿ ಮರಾಠ ಸಮುದಾಯದ ಜನಸಂಖ್ಯೆ ೬೦ ಲಕ್ಷ ದಾಟಿದೆ. ಪರಿವಾರದವರಿಗೆ ನೋವುಂಟಾದಗ ಬರಪೂರ ಸಹಕಾರ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ಉಳ್ಳವರು ಕೊಡುಗೈ ಧಾನಿಗಳಾಗಿ ನೆರವಿಗೆ ದಾವಿಸಬೇಕು. ನೋವಿನ ಪರಿಸ್ಥಿತಿ ಕಂಡಾಗ ಉದಾರತೆ ಗುಣವನ್ನು ಬೆಳೆಸಿಕೊಳ್ಳುವುದನ್ನು ಮೈ ಗೂಡಿಸಿಕೊಳ್ಳಬೇಕು.

ವಾಹನ ಚಾಲನೆ ಮಾಡುವಾಗ ಚಾಲಕರು ಒತ್ತಡದ ಚಾಲನೆಗೆ ಮಣ್ಣಿಯದೆ ಸಾವಕಾಶವಾಗಿರಬೇಕು. ಅಪಘಾತ ಒಂದು ಕ್ಷಣ. ಪ್ರಯಾಣ ಹೋಗುವಾಗ ಆತುರ ಮಾಡುವುದನ್ನು ಕೈ ಬೀಡಬೇಕು ಚಾಲನೆ ಮೇಲೆ ನೀಗಾ ಇಟ್ಟು ಸವಾದಾನದಿಂದ ವಾಹನ ಚಾಲನೆ ಮಾಡಬೇಕು.

ವೇಗದ ಚಾಲನೆಯಿಂದ ಆದಷ್ಟು ದೂರವಿರಬೇಕು. ಯಾರೊ ಒಬ್ಬರು ಮಾಡಿದ ತಪ್ಪಿನಿಂದ ಅನೇಕರು ಪಶ್ಚಾತಾಪ ಪಡಬೇಕಾಗಿ ಬರುವುದು. ಅಪಘಾತಗಳಾದ ದೇವರನ್ನು ದೂರುವುದು ತಪ್ಪಾಗುತ್ತದೆ. ಸತ್ಕರ್ಮ, ಧಾನ, ಧರ್ಮಗಳು ಕೊನೆಗಾಲದಲ್ಲಿ ಕೈ ಹಿಡಿಯುತ್ತವೆ.

ಪಾರಮಾತ್ಮ ನೀಡಿದ ನೈಸರ್ಗಿಕ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಬದುಕಿನಲ್ಲಿ ಲೌಕಿಕವಾಗಿ ಹೆಜ್ಜೆ ಹಾಕುವಾಗ ಅನು ಕ್ಷಣವು ವಿಚಾರ ಮಾಡಬೇಕು. ಸವದಾನವೊಂದೆ ಅಪಘಾತಗಳನ್ನು ತಪ್ಪಿಸಲು ಇರುವ ಏಕೈಕ ಮಾರ್ಗ.
ಭವಿಷ್ಯದ ಕ್ಷಣಗಳನ್ನು ಸಾವಾಧಾನದಿಂದಲೇ ಅನುಭವಿಸಬೇಕು. ಯಾವುದೆ ಕಾರಣಕ್ಕೂ ಸ್ಥಿಮೀತ ಕಳೆದುಕೊಂಡು ಅತೋಟಿ ಮೀರಬಾರದು.

ಹಣದಿಂದ ನೆಮ್ಮದಿಯನ್ನು ಗಳಿಸಲು ಸಾದ್ಯವಿಲ್ಲ ಎಂಬುದನ್ನು ಅರಿಯಬೇಕು. ಪಾನಮತ್ತರಾಗಿ ಚಾಲನೆ ಮಾಡುವುದು ಪಾಪಕ್ಕೆ ಸಮಾನ. ಕುಡಿತದ ಚಟದಿಂದ ಪ್ರತಿಯೊಬ್ಬರು ಆದಷ್ಟು ದೂರವಿರಬೇಕು. ಸಾವಾದಾನವಾಗಿ ವಿಚಾರ ಪೂರ್ವವಾಗಿ ನಡೆಯಬೇಕು.

ಮುಂದಕ್ಕೆ ಇಂತಹ ದುರ್ಘಟನೆಗಳು ಗ್ರಾಮದಲ್ಲಿ ನಡೆಯದಂತೆ ಎಚ್ಚರವಹಿಸಬೇಕು. ಅನೇಕರು ಗಾಯಾಳುಗಳಿಗೆ ಸ್ಪೂರ್ತಿ ತುಂಬಿ ಸಹಕಾರ ಮಾಡಿ ನೋವುಗಳಿಗೆ ಸ್ಪಂದಿಸುತ್ತಿರುವುದು ಆಶಾದಾಯಕ ಬೆಳವಣೀಗೆ. ಆದಷ್ಟು ದುಃಖವನ್ನು ಕಡಿಮೆ ಮಾಡಿಕೊಂಡು ವ್ಯಸನಾದಿಗಳನ್ನು ಬಿಟ್ಟ ಧರ್ಮ ಮಾರ್ಗದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದರು.

ಚನ್ನಗಿರಿ ಕೇದಾರ ಶಾಖಾ ಮಠದ ಶಿವ ಶಾಂತವೀರ ಸ್ವಾಮಿಗಳು ಮಾತನಾಡಿ ಅಸಹಜ ಸಾವುಗಳು ಮನಸಿಗೆ ತಡೆಯಲಾಗದಷ್ಟು ನೋವು ನೀಡುತ್ತವೆ.

ಸಾವು ನೋವುಗಳು ಯಾರಿಗೂ ಹೇಳಿ ಕೇಳಿ ಬರುವುದಿಲ್ಲ. ಹುಟ್ಟು ಅನಿವಾರ್ಯವಾದರೆ ಕೊನೆಯಲ್ಲಿ ಸಾವುಗಳು ನಿಶ್ಚಿತ. ೧೩ ಜನ ಮೃತಪಟ್ಟಿರುವ ಅಪಘಾತವನ್ನು ಸರ್ಕಾರಗಳು ವಿಶೇಷ ಪ್ರಕರಣವೆಂದು ಪರಿಗಣಿಸಬೇಕು. ಚಿಕಿತ್ಸಾ ವ್ಯಚ್ಚ ಭರಿಸುವುದಕ್ಕೆ ಜನ ಪ್ರತಿನಿಧಿಗಳು ಸಂಪೂರ್ಣ ಸಹಕಾರ ನೀಡಬೇಕು. ಸ್ಥಳೀಯ ಸಂಘ ಸಂಸ್ಥೆಗಳು ಸಂಕಷ್ಠದಲ್ಲಿರುವ ಕುಟುಂಬಗಳ ನೆರವಿಗೆ ದಾವಿಸಬೇಕು ಎಂದರು.

ರೈತ ಮುಖಂಡ ಕೆ.ಟಿ ಗಂಗಾಧರ್ ಮಾತನಾಡಿ ಕೇಂದ್ರ ಸರ್ಕಾರ ಎಮ್ಮೆಹಟ್ಟಿ ಪ್ರಕರಣವನ್ನು ರಾಷ್ಟçಮಟ್ಟಕ್ಕೆ ಸೇರ್ಪಡೆ ಮಾಡಿ ಮೃತ ಸಂಬAದಿಗಳಿಗೆ ಶಾಶ್ವತವಾಗಿ ಉಳಿಯುವಂತ ಪರಿಹಾರವನ್ನು ಘೋಷಿಸಬೇಕು. ಸದ್ಯದಲ್ಲೆ ಮುಖ್ಯ ಮಂತ್ರಿಗಳನ್ನು ಬೇಟಿಮಾಡಿ ಮೊದಲು ನೀಡಿರುವ ಪರಿಹಾರದ ಮೊತ್ತವನ್ನು ಮತ್ತಷ್ಟು ಹೆಚ್ಚಿಸುವಂತೆ ಕೋರಲಾಗುವುದು ಎಂದರು.

ತಾಲೂಕು ಮರಾಠ ಸಂಘದ ಅಧ್ಯಕ್ಷ ಲೋಕೇಶ್‌ರಾವ್, ನಿವೃತ್ತ ಮುಖ್ಯ ಶಿಕ್ಷಕ ಹಾಲೋಜಿರಾವ್, ಸಚಿನ್ ಸಿಂದ್ಯಾ, ಗೀತಾಸತೀಶ್, ಯಶವಂತರಾವ್ ಘೋಪರ್ಡೆ, ವೀರೇಶ್, ಡಿ.ಯಲ್ಲಪ್ಪ, ಮಲ್ಲೇಶಪ್ಪ, ಬಾಳೋಜಿ ಬಸವರಾಜ್, ಬಿ.ಹಾಲೋಜಿರಾವ್, ರಂಗೋಜಿರಾವ್, ಬಸವರಾಜ್, ಮಂಜುನಾಥರಾವ್, ಕಿರಣ್‌ಮೊರೆ, ಬೋಜರಾವ್, ಮುರಾರಿರಾವ್ ಇತರರಿದ್ದರು.

ಇದನ್ನೂ ಓದಿ-https://suddilive.in/archives/18268

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close