ಹೂತಿದ್ದ ಯುವತಿಯ ಶವವನ್ನ ಮತ್ತೆ ಮೇಲಕ್ಕೆತ್ತಿದ್ದೇಕೆ? ಕಂಪ್ಲೀಟ್ ಸ್ಟೋರಿ ಇಲ್ಲಿದೆ


ಆನಂದಪುರ ಪೊಲೀಸ್ ಠಾಣೆ

ಸುದ್ದಿಲೈವ್/ಆನಂದಪುರ

ರಾಜ್ಯವನ್ನ ಬೆಚ್ಚಿಬೀಳಿಸುವಂತ ಪ್ರಕರಣವೊಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ನಡೆದಿದೆ. ಸಾಗರ ತಾಲ್ಲೂಕು ಆನಂದಪುರದಲ್ಲಿ ವಿಫಲಗೊಂಡ ಪ್ರೀತಿ ಪ್ರೇಮ ಮದುವೆ ಪ್ರಕರಣದಲ್ಲಿ ಯುವತಿಯೊಬ್ಬಳ ಕೊಲೆಯಾಗಿದೆ. ಘಟನೆಯ ಸಂಬಂಧ ಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.


ಕಳೆದ ಕೆಲದಿನಗಳ ಹಿಂದ ಕೊಪ್ಪ ಪೊಲೀಸ್‌ ಠಾಣೆಯಲ್ಲಿ ಮಿಸ್ಸಿಂಗ್‌ ಪ್ರಕರಣವೊಂದು ದಾಖಲಾಗಿತ್ತು. ಅದರ ಬೆನ್ನಲ್ಲೆ ಈ ಕೊಲೆ ಪ್ರಕರಣ ಬಯಲಿಗೆ ಬಂದಿದೆ. ಸಾಗರ ಮೂಲದ ಯುವಕ  ಹಾಗೂ ಯುವತಿ  ಪರಸ್ಪರ ಪ್ರೀತಿಸಿದ್ದರು  ಇಬ್ಬರು ಬೇರೆ ಬೇರೆ ಸಮುದಾಯದವರಾಗಿದ್ದು ಯುವತಿ ದಲಿತ ಸಮುದಾಯಕ್ಕೆ ಸೇರಿದವಳು ಎನ್ನಲಾಗಿದೆ. 


ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿ ಅನಧಿಕೃತವಾಗಿ (ಪತಿಯ ಮನೆಯಲ್ಲ) ಕೊಪ್ಪದಲ್ಲಿ ವಾಸ ಮಾಡುತ್ತಿತ್ತು. ಈ ನಡುವೆ ಇಬ್ಬರ ನಡುವೆ ಪರಸ್ಪರ ಜಗಳವಾಗಿದೆ. ಯುವತಿ ತನ್ನನ್ನು ಸಾಗರದಲ್ಲಿರುವ ಆತನ ನಿವಾಸಕ್ಕೆ ಕರೆದೊಯ್ಯುವಂತೆ ಪತಿಯನ್ನ ಕೇಳಿದ್ದಾಳೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. 


ಈ ಜಗಳದ ಬೆನ್ನಲ್ಲೆ ಯುವಕ ಯುವತಿಯನ್ನ ಆಕೆಯ ತಾಯಿಯ ಮನೆಗೆ ಹೋಗುವಂತೆ ಸೂಚಿಸಿದ್ದಾನೆ. ಮನೆಯಲ್ಲಿ ಎಲ್ಲರನ್ನ ಒಪ್ಪಿಸಿ ಮನೆ ತುಂಬಿಸಿಕೊಳ್ಳುವುದಾಗಿ ಹೇಳಿದ್ದನಂತೆ. ಆದರೆ ಹುಡುಗಿ ಆತನ ಮಾತು ನಂಬಿ ತನ್ನ ತಾಯಿ ಮನೆಗೆ ಹೋಗಲು ಸಿದ್ಧಳಿರಲಿಲ್ಲ. ಇದೇ ವಿಚಾರವಾಗಿ ಸಾಗರಕ್ಕೆ ಬಂದು ಯುವತಿ ಗಲಾಟೆ ಮಾಡಿದ್ದಾಳೆ. 


ಈ ವೇಳೆ ಇಬ್ಬರ ನಡುವಿನ ಕಲಹ ತಾರಕಕ್ಕೇರಿದೆ. ಅಲ್ಲದೆ ಯುವತಿ ಸಾಗರದಿಂದ ಹೆದ್ದಾರಿಪುರಕ್ಕೆ ಬಂದು ನಿಂತು ಯುವಕನ ಜೊತೆಗೆ ಮಾತನಾಡಿದ್ದಾಳೆ. ಅಲ್ಲಿಯು ಇಬ್ಬರ ನಡುವೆ ಗಲಾಟೆಯಾಗಿದೆ, ಈ ವೇಳೆ ಯುವಕ ಆಕೆಯ ಮೇಲೆ ಹಲ್ಲೆ ಮಾಡಿದ್ದು, ಬಿದ್ದ ಏಟು ತಿನ್ನಲಾಗದೇ ಯುವತಿ ಸಾವನ್ನಪ್ಪಿದ್ದಾಳೆ. ಇದಿಷ್ಟು ನಡೆದ ಘಟನೆ ಎಂದು ಮೂಲಗಳು ಹೇಳಿವೆ


ಸದ್ಯ ಈ ಸಂಬಂಧ ಕೊಪ್ಪ ಪೊಲೀಸರು ಶಿವಮೊಗ್ಗದ ಆನಂದಪುರ ಪೊಲೀಸ್‌ ಸ್ಟೇಷನ್‌ನ್ನ ಸಂಪರ್ಕಿಸಿದ್ದು ಹೆದ್ದಾರಿಪುರದಲ್ಲಿ ಮಹಜರ್‌ ನಡೆಸ್ತಿದ್ದಾರೆ. ಆರೋಪಿಯನ್ನ ವಶಕ್ಕೆ ಪಡೆದಿರುವ ಅವರು ವಿಚಾರಣೆ ನಡೆಸಿದಾಗ ಯುವತಿಯನ್ನ ಕೊಂದು ಆಕೆಯನ್ನು ಆನಂದಪುರದ ಮುಂಬಾಳು ಸಮೀಪ ಹುಗಿದು ಹಾಕಿರುವ ವಿಚಾರ ಪೊಲೀಸರಿಗೆ ಗೊತ್ತಾಗಿದೆ. 


ಸದ್ಯ ನಾಳೆ ತಹಶೀಲ್ದಾರ್‌ ಸಮ್ಮುಖದಲ್ಲಿ ಪೊಲೀಸರು ಯುವತಿಯ ಶವವನ್ನು ಮೇಲಕ್ಕೆ ತೆಗೆದು ವಿಚಾರಣೆ ಮುಂದುವರಿಸುವ ಸಾಧ್ಯತೆ ಇದೆ. ಈ ಸಂಬಂಧ ಬಿಎನ್‌ಎಸ್‌ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಸಾಗರ ಉಪವಿಭಾಗದ ಪೊಲೀಸರು ನೆರೆಯ ಜಿಲ್ಲೆ ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ. ಸ್ಥಳದಲ್ಲಿ ಉನ್ನತ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.

ಇದನ್ನೂ ಓದಿ-https://www.suddilive.in/2024/07/ksrtc_23.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close