ಕನಸಿನಕಟ್ಟೆ ಗ್ರಾಮದ ಸ್ಮಶಾನ ಭೂಮಿಯ ಸಮಗ್ರ ತನಿಖೆಗೆ ಮಾದಿಗ ಸಮಾಜ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ಹೊಳೆಹೊನ್ನೂರು ಜಂಬರಗಟ್ಟೆಯ ಸರ್ವೆ ನಂಬರ್ 76 ರಲ್ಲಿ ಸ್ಮಶಾನ ಜಾಗವನ್ನ 80-90 ವರ್ಷಗಳಿಂದ ರುದ್ರಭೂಮಿಯಾಗಿದ್ದು, ಇದನ್ನ ಅಕ್ರಮವಾಗಿ ಜಿಯಾಉಲ್ಲಾಖಾನ್ ಖಾತೆ ಮಾಡಿಕೊಂಡಿದ್ದು ಇದರಲ್ಲಿ 2007 ರಿಂದಲೂ ಆತಪೊಸಿಷನ್ ನಲ್ಲಿ ಇಲ್ಲವೆಂದು ರಾಜ್ಯ ಮಾದಿಗ ಸಮಾಜ ಆರೋಪಿಸಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ರಾಜ್ಯ ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್ ಎಸ್
ಶಾಭೋಗ ಪಟ್ಟಿಯಲ್ಲಿತ್ತು. ನಂತರ ಸರ್ಕಾರಕ್ಕೆ ಹೋಗಿದೆ. 80 ವರ್ಷದಿಂದ ಸ್ಮಶಾನದಲ್ಲಿ ಹೆಣ ಹೂಳಲಾಗುತ್ತಿದೆ. ಎರಡು ವರ್ಷದಿಂದ ನಾಗರಾಜ್ ಎಂಬುವರು ಸ್ಮಶಾನ ಜಾಗಕ್ಕೆ ರಗಳೆ ಮಾಡುತ್ತಿದ್ದಾರೆ ಎಂದು ದೂರಿದರು.

ಎಸಿ ಕೋರ್ಟ್ ನಲ್ಲಿ ಪ್ರಕರಣ ಇದೆ. 2007 ರಲ್ಲಿ ವಿಎ ರಿಪೋರ್ಟ್ ಹಾಕಿ ಪೊಸಿಷನ್ ನಲ್ಲಿ ಯಾರು ಇಲ್ಲ ಎಂದು ವರದಿ ಮಾಡಿದ್ದಾರೆ. ತಾಲೂಕು ಆಡಳಿತ ಜಂಬರಕಟ್ಟೆಯ ಬೆಟ್ಟದ ಮೇಲೆ ಸ್ಮಶಾನ ಜಾಗ ನೀಡಲಾಗಿದೆ. ಅಲ್ಲಿ ಗುಂಡಿ ತೋಡಲು ಸಾಧ್ಯವಿಲ್ಲದ ಸ್ಥಿತಿ ಇದೆ. ಆದರೆ ಸರ್ವೆ ನಂಬರ್ 76 ರಲ್ಲಿನ ಭೂಮಿಯಲ್ಲಿ ಈಗ ಸ್ವಾಧೀನದಲ್ಲಿ ಯಾರೂ ಇರಲಿಲ್ಲ. ಆದರೂ ಕಿರಿಕ್ ಮಾಡಲಾಗಿದೆ ಎಂದು ದೂರಿದರು.

ಸರ್ಕಾರಿ ಸ್ವಾಧೀನ ಆದ ಮೇಲೆ ಬೇರೆಯೊಬ್ಬನಿಗೆ(ಜಿಯಾ ಉಲ್ಲಾಖಾನ್) ಅಕ್ರಮ ಖಾತೆ ಮಾಡಿಕೊಡಲಾಗಿದೆ. ಡಿಸಿ ಅವರು ಮನವಿ ನೀಡಲು ಸೂಚಿಸಿದ್ದಾರೆ. ಅವರು ಪೊಸಿಷನ್ ಗೆ ಬಂದಿಲ್ಲ. ನಾಗರಾಜ್ ಜಂಬರಗಟ್ಟೆ ನಿವಾಸಿಯಾಗಿದ್ದು ಆತ ಈ ರೀತಿಯ ಲಿಟಿಗೇಷನ್ ಮಾಡುವುದು ಅವರ ಹವ್ಯಾಸ ಇದ್ದಂತೆ ಇದೆ.

ಜಂಬರ ಗಟ್ಟೆಯ ಸ್ಮಶಾನ ಜಾಗವನ್ನ ನನ್ನದು ಎಂಬುದು ಅವರ ವಾದವಾಗಿದೆ. ಈ ಪ್ರಕರಣದಲ್ಲಿ ಅಧಿಕಾರಿಗಳ ಶಾಮೀಲು ಹೆಚ್ಚು ಕಾಣುತ್ತಿದೆ. ಸಂಪೂರ್ಣ ತನಿಖೆಯಾಗಬೇಕಿದೆ. ಸರ್ಕಾರಿ ಸ್ವಾಧೀನದ ಜಾಗವನ್ನ ಅಕ್ರಮವಾಗಿ ಮಾಡಿಕೊಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧವೂ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

ಶ್ರೀನಿವಾಸ್, ರಮೇಶ, ಮೋಹನ್ ಕುಮಾರ್, ಚಂದ್ರಪ್ಪ, ರತ್ನಮ್ಮ, ಪರಶು, ಮಹೇಶ್, ಸುನೀಲ್ ಕುಮಾರ್, ದೇವು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/19319

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close