ಸುದ್ದಿಲೈವ್/ಶಿವಮೊಗ್ಗ
ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಇದರಿಂದ ಜಿಲ್ಲೆಯ ಪ್ರಮುಖ ನದಿಗಳ ಜಲಾಶಯಗಳ ಒಳಹರಿವು ಸಹ ಕಡಿಮೆಯಾಗಿದೆ.
ಭದ್ರಾ ಜಲಾಶಯದ ಒಳ ಹರಿವು ಇಳಿಕೆಯಾಗಿದೆ. ಇವತ್ತು 20,045 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. 196 ಕ್ಯೂಸೆಕ್ ಹೊರ ಹರಿವು ಇದೆ. ಜಲಾಶಯದ ನೀರಿನ ಮಟ್ಟ 168.2 ಅಡಿಗೆ ಏರಿಕೆಯಾಗಿದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 71.5 ಟಿಎಂಸಿ. ಇವತ್ತು 50.95 ಟಿಎಂಸಿ ನೀರು ಸಂಗ್ರಹವಾಗಿದೆ.
ತುಂಗಾ ಜಲಾಶಯದ ಒಳ ಹರಿವು ಪ್ರಮಾಣ ಕಡಿಮೆಯಾಗಿದೆ. ಇವತ್ತು ಜಲಾಶಯದಿಂದ 31,362 ಕ್ಯೂಸೆಕ್ ಒಳ ಹರಿವು ಇದ್ದು, ಅಷ್ಟೆ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ತೀರ್ಥಹಳ್ಳಿ ಭಾಗದಲ್ಲಿ ಮಳೆ ಕಡಿಮೆ ಆಗಿರುವುದರಿಂದ ತುಂಗಾ ಜಲಾಶಯಕ್ಕೆ ಒಳ ಹರಿವು ಇಳಿಕೆಯಾಗಿದೆ.
ಲಿಂಗನಮಕ್ಕಿ ಜಲಾಶಯದ ಒಳ ಹರಿವು 41,269 ಕ್ಯೂಸೆಕ್ ಇದೆ. 2400 ಕ್ಯೂಸೆಕ್ ಹೊರ ಹರಿವು ಇದೆ. ಜಲಾಶಯದ ನೀರಿನ ಮಟ್ಟ 1799 ಅಡಿಗೆ ತಲುಪಿದೆ. ಒಟ್ಟು 151.65 ಟಿಎಂಸಿ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ 93.50 ಟಿಎಂಸಿ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ-https://www.suddilive.in/2024/07/112.html