ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ನೂತನ ಅಧ್ಯಕ್ಷರ ಪದಪ್ರಧಾನ ಸಮಾರಂಭ

ಸುದ್ದಿಲೈವ್/ಶಿವಮೊಗ್ಗ

ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಇದರ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ರೊ.ಮುಸ್ತಾಕ್ ಅಲಿಶಾ ಟಿ,ಎಂ ಶುಕ್ರವಾರ ನಡೆದ ಪದಪ್ರಧಾನ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು.

ರೋಟರಿ ಮಿಡ್ ಟೌನ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಗವರ್ನರ್ ರೊ. ಪ್ರೊ. ಎ.ಎಸ್ ಚಂದ್ರಶೇಖರ್ ಪದಪ್ರಧಾನ ಅಧಿಕಾರಿಯಾಗಿ ಆಗಮಿಸಿ ಕ್ಲಬ್ ನ 2023-24 ನೇ ಸಾಲಿನ ಅಧ್ಯಕ್ಷರಾದ ರೊ.ಸಿ.ರಾಜು ರವರಿಂದ ನೂತನ ಅಧ್ಯಕ್ಷರಿಗೆ ಅಧಿಕಾರ ವರ್ಗಾವಣೆ ಮಾಡಿದರು.

ಕಾರ್ಯದರ್ಶಿ ರೊ. ಪ್ರಕಾಶ್ ಮೂರ್ತಿಯವರು 2023-24 ನೇ ಸಾಲಿನಲ್ಲಿ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಪಕ್ಷಿನೋಟ ಪ್ರಸ್ತುತ ಪಡಿಸಿದರು. ನೂತನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ರೊ.ಶ್ರೀಕಾಂತ್ ಎ.ವಿ., 2024-25 ನೇ ಸಾಲಿನಲ್ಲಿ ಹಮ್ಮಿಕೊಳ್ಳಲ್ಲಿರುವ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ರೊ.ಮುಸ್ತಾಕ್ ರವರು ಯುವ ಜನತೆಯಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ಲಬ್ ವತಿಯಿಂದ ರೂಪಿಸಿರುವ ಹೊಸ ಯೋಜನೆಯ ಬಗ್ಗೆ ಮಾಹಿತಿ ನೀಡಿ ಇತರೆ ಕ್ಲಬ್ ಗಳು ಹಾಗೂ ಸಾರ್ವಜನಿಕರೂ ಸಹ ಕೈಜೋಡಿಸುವಂತೆ ಕರೆ ನೀಡಿದರು. ಮಾದಕ ವ್ಯಸನ ತಡೆ ಜಾಗೃತಿಗಾಗಿ ಕ್ಲಬ್ ನ ಹೊಸ YouTube ಚಾನೆಲ್ ‘ನವ್ಯ ಸಂಕಲ್ಪ’ ಕ್ಕೆ ಚಾಲನೆ ನೀಡಿ ಮಾತನಾಡಿದ ರೊ. ಪ್ರೊ. ಎ.ಎಸ್ ಚಂದ್ರಶೇಖರ್ ಸಮಾಜವನ್ನು ಪೀಡಿಸುತ್ತಿರುವ ಮಾದಕ ವ್ಯಸನದ ಕುರಿತು ಆತಂಕ ವ್ಯಕ್ತಪಡಿಸಿ ಈ ನಿಟ್ಟಿನಲ್ಲಿ ಕ್ಲಬ್ ರೂಪಿಸಿರುವ ಯೋಜನೆಗೆ ಶುಭಕೋರಿದರು.

PariNEET Academy, ಶಿವಮೊಗ್ಗದ ಸಹಯೋಗ ಹಾಗೂ ರೊ. ಆನಂದ ಮೂರ್ತಿ, ರೊ. ಹೆಚ್.ಎಲ್.ರವಿ ಹಾಗೂ ರೊ. ಮಂಜುಳಾ ಸಿ.ರಾಜು ರವರ ಸಹಕಾರದೊಂದಿಗೆ ಸರ್ಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಆಯ್ದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ NEET Study Materials ಗಳನ್ನು ವಿತರಿಸಲಾಯಿತು. ಜೊತೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಐದು ಜನ ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್, ಪುಸ್ತಕ ಹಾಗೂ ಧನಸಹಾಯವನ್ನು ಸಹ ನೀಡಲಾಯಿತು.

ಸಮಾರಂಭದಲ್ಲಿ ಉಪಸ್ಥಿತರಿದ್ದ ವಲಯ 10 ರ ಸಹಾಯಕ ಗವರ್ನರ್ ರೊ.ನಾಗರಾಜ್.ಎಸ್.ಆರ್ ರೋಟರಿಯ ಧ್ಯೇಯೋದ್ದೇಶಗಳ ಕುರಿತು ಮಾತನಾಡಿ ಇವುಗಳನ್ನು ಸಮುದಾಯಗಳಿಗೆ ತಲುಪಿಸುವಲ್ಲಿ ಕ್ಲಬ್ ಗಳ ಪಾತ್ರದ ಬಗ್ಗೆ ವಿವರಿಸಿದರು. ವಲಯ ಸೇನಾನಿ ರೊ.ಮಂಜುಳಾ ರಾಜು ಕ್ಲಬ್ ನ ಮೊದಲ ಅಧ್ಯಕ್ಷರಾಗಿದ್ದ ತಮ್ಮ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಶಿವಮೊಗ್ಗದ ಇತರ ಕ್ಲಬ್ ಗಳ Rotarians, Anns ಹಾಗೂ Annets ಉಪಸ್ಥಿತರಿದ್ದರು.

ಇತರ ಸಂಘ ಸಂಸ್ಥೆಗಳ ಪ್ರಮುಖರು, ವಾಣಿಜ್ಯೋದ್ಯಮಿಗಳು, ಶಿಕ್ಷಣ ಕ್ಷೇತ್ರದ ಹಲವರು ಆಗಮಿಸಿ ನೂತನ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಕಾರ್ಯಕಾರಿ ಮಂಡಳಿಗೆ ಶುಭ ಕೋರಿದರು.

ಇದನ್ನೂ ಓದಿ-https://suddilive.in/archives/19151

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close